Saturday, March 01, 2014

Daily Crime Reports As On 01/03/2014 At 17:00 Hours

ಅಪಘಾತ ಪ್ರಕರಣಗಳು
  • ಬೈಂದೂರು: ದಿನಾಂಕ 27/0/2014 ರಂದು ಸಂಜೆ ಸುಮಾರು 06-45 ಗಂಟೆಗೆ ಫಿರ್ಯಾದಿ ಕೃಷ್ಣ ಪೂಜಾರಿ (65) ತಂದೆ: ದಿ/ ಮಾಸ್ತಯ್ಯ ವಾಸ: ಬೆಳಿ ಮನೆ,ಶಿರೂರು ಗ್ರಾಮ ,ಕುಂದಾಪುರ ತಾಲೂಕು ಇವರು ತನ್ನ ಸೈಕಲ್ ನಲ್ಲಿ ದೊಂಬೆ ಕಡೆಗೆ ಹೊರಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಬಳಿ ಡಾಮರು ರಸ್ತೆಯಲ್ಲಿ ತಲುಪಿದಾಗ ಎದುರಿನಿಂದ ಅಂದರೆ ಶೀರೂರಿನಿಂದ ಬೈಂದೂರಿನ ಕಡೆಗೆ ಕೆ.ಎ.20.ಇಸಿ.0294 ನೇ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಡಾಮಾರು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದುದರಿಂದ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ ನಂಬ್ರ 70/2014 ಕಲಂ 279,338 ಐಪಿಸಿ ಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಹಿರಿಯಡ್ಕ: ದಿನಾಂಕ 28/02/2014 ರಂದು ಮಧ್ಯಾಹ್ನ 2:15 ಗಂಟೆಗೆ ಪೆರ್ಡೂರು ಗ್ರಾಮದ ಪೆರ್ಡೂರು ಬಸ್ಸು ನಿಲ್ದಾಣದ ಸಮೀಪ ರಸ್ತೆ ಬದಿಯಲ್ಲಿ ಪಿರ್ಯಾದಿ ಶಂಕರ,(40) ತಂದೆ: ಸುಬ್ಬ ಮಡಿವಾಳ, ವಾಸ: ಕುಕ್ಕೇಹಳ್ಳಿ ಗ್ರಾಮ, ಉಡುಪಿ ಜಿಲ್ಲೆ.  ಇವರ ಅಕ್ಕ ಶ್ರೀಮತಿ ಪ್ರೇಮ ಎಂಬವರು ನಿಂತುಕೊಂಡಿದ್ದ ವೇಳೆ, ಶೈಲೇಶ್ ಎಂಬವರು ಪೆರ್ಡೂರು ಮೇಲ್ಪೇಟೆ ಕಡೆಯಿಂದ ಮೋಟಾರು ಸೈಕಲ್ ನಂಬ್ರ KA.20.EA.7936 ನೇದನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಶ್ರೀಮತಿ ಪ್ರೇಮರವರಿಗೆ ಢಿಕ್ಕಿ ಹೊಡೆದ ಪರಿಣಾಮ, ಪ್ರೇಮರವರ ಬಲಕಾಲಿನ ಮೂಳೆ ಮುರಿತವಾಗಿರುತ್ತದೆ ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2014 ಕಲಂ 279, 338 ಐಪಿಸಿ ಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಹಲ್ಲೆ ಪ್ರಕರಣ:
  • ಬೈಂದೂರು: ಫಿರ್ಯಾದಿ ಶ್ರೀಮತಿ ಆಶಾಲತಾ(33) ಗಂಡ: ಸುರೇಶ್ ವಾಸ: ಜನತಾಕಾಲನಿ,ಆಕಳಬೈಲು, ಕಿರಿಮಂಜೇಶ್ವರ ಗ್ರಾಮ ,ಕುಂದಾಪುರ ತಾಲೂಕು ಇವರು ದಿನಾಂಕ 25-02-2014 ರಂದು ಸಂಜೆ 04-45 ಗಂಟೆಗೆ ತನ್ನ ಮಕ್ಕಳೊಂದಿಗೆ ಕಿರಿಮಂಜೇಶ್ವರ ದಿಂದ ತನ್ನ ಮನೆಯ ಕಡೆಗೆ ಬರುತ್ತಿರುವಾಗ ಇವರ ಗಂಡನ ತಂಗಿ ಸಲಿಕಾ ಫಿರ್ಯಾದಿದಾರರ ಮಕ್ಕಳನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2014 ಕಲಂ 427,506,341,504 ಜೊತೆಗೆ 34 ಐಪಿಸಿ ಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: