Sunday, March 02, 2014

Daily Crime Reported on 02/03/2014 At 17:00 Hrs

ಅಸ್ವಾಭಾವಿಕ ಮರಣ ಪ್ರಕರಣಗಳು  
  • ಕಾರ್ಕಳ: ಪಿರ್ಯಾದಿದಾರರಾದ ಜೋಸೆರ್ಫ (42) ತಂದೆ ದಿ. ಪೈಯಿಲಿ, ವಾಸ ಜೊಸೆಫ್ ತೆಂಗನಾರು, ಮಿತ್ತ ಮಜಲು ಮನೆ, ಶಿರಾಡಿಗ್ರಾಮ, ಪುತ್ತೂರು ತಾಲೂಕು ದ.ಕ ಜಿಲ್ಲೆ ಇವರ ಅಕ್ಕ ಏಲಿಕುಟ್ಟಿ (55) ಎಂಬುವರು ವಿಪರೀತ ಶರಾಬು ಕುಡಿತದ ಚಟ ಹೊಂದಿದವರಾಗಿದ್ದು. ದಿನಾಂಕ 24/02/2014ರಂದು ರಾತ್ರಿ 09:00 ಗಂಟೆ ಸಮಯಕ್ಕೆ ಈದು ಗ್ರಾಮದ ಮಂಗಳಾ ಫಾರ್ಮ್ ಎಂಬಲ್ಲಿ, ಶರಾಬು  ಕುಡಿದ ಅಮಲಿನಲ್ಲಿ ಶರಾಬು ಎಂದು ತಿಳಿದು ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾದವರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 02/03/2014ರಂದು ಬೆಳಗ್ಗಿನ 01:30 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಜೋಸೆರ್ಫ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 11/14 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಉದಯ ನಾಯ್ಕ (30), ತಂದೆ ದಿ. ಗೋಪಾಲ ನಾಯ್ಕ, ವಾಸ ಕಾಳ್‌ ದರ್ಖಾಸು, ಮುದೆಲ್ಕಡಿ, ಮುನಿಯಾಲು, ವರಂಗ ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ತಾಯಿ ಶ್ರೀಮತಿ ಸುಮತಿ ನಾಯ್ಕ(65) ರವರೊಂದಿಗೆ ಕಾರ್ಕಳ ತಾಲೂಕು ವರಂಗ ಗ್ರಾಮದ ಮುನಿಯಾಲು ಮುದೆಲ್ಕಡಿ ಕಾಳ್‌ದರ್ಖಾಸು ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಉದಯ ನಾಯ್ಕರವರ ತಾಯಿ ಶ್ರೀಮತಿ ಸುಮತಿ ನಾಯ್ಕ ರವರು ಸುಮಾರು 3 ವರ್ಷಗಳಿಂದ ಉಬ್ಬಸ ಹಾಗೂ ಎದೆನೋವು ಕಾಯಿಲೆಯಿಂದ ಬಳಲುತ್ತಿದ್ದು, ಸದ್ರಿಯವರು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 01/03/14ರಂದು ಸಂಜೆ 5:00 ಗಂಟೆಯಿಂದ 6:30 ಗಂಟೆಯ ಮಧ್ಯ ಅವಧಿಯಲ್ಲಿ ತನ್ನ ಮನೆಯ ಬಳಿ ಇರುವ ಆವರಣವಿಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಎಂಬುದಾಗಿ ಉದಯ ನಾಯ್ಕ ಇವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 03/14 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಜೀವ ಬೆದರಿಕೆ ಪ್ರಕರಣ
  • ಕುಂದಾಪುರ: ದಿನಾಂಕ 02/03/14ರಂದು ಪಿರ್ಯಾದಿದಾರರಾದ ಸುಮತಿ ಶೆಡ್ತಿ (44) ಗಂಡ ಭಾಸ್ಕರ ಶೆಟ್ಟಿ, ವಾಸ ಒಳಗಿನ ಮನೆ ಕರ್ಕುಂಜೆ ಗ್ರಾಮ ಕುಂದಾಪುರ ಮತ್ತು ಅವರ ಮಗಳು ಬೆಳಿಗ್ಗೆ 6:30 ಗಂಟೆಗೆ ಮನೆಯಲ್ಲಿರುವಾಗ ಆಪಾದಿತರುಗಳಾದ ನಾಗರಾಜ ಶೆಟ್ಟಿ, ಧನಂಜಯ ಶೆಟ್ಟಿ, ಜಯಂತಿ ಶೇಡ್ತಿ ಇವರುಗಳು ಸುಮತಿ ಶೆಡ್ತಿರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಸುಮತಿ ಶೆಡ್ತಿ ಮತ್ತು ಅವರ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದಾಗ ಸುಮತಿ ಶೆಡ್ತಿ ಮತ್ತು ಅವರ ಮಗಳು ಮನೆಯ ಒಳಗೆ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದು ಆ ಸಮಯ ಆಪಾದಿತರು ಪಿರ್ಯಾದಿ ಸುಮತಿ ಶೆಡ್ತಿರವರಿಗೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಹಿಂದೆ ಸುಮತಿ ಶೆಡ್ತಿ ಹಾಗೂ ಆಪಾದಿತರಿಗೂ ದಾರಿಯ ವಿಚಾರದಲ್ಲಿ ಮಾತುಕತೆಯಾಗಿದ್ದು ಇದೇ ಕಾರಣದಿಂದ ಸುಮತಿ ಶೆಡ್ತಿರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾಗಿರುತ್ತದೆ ಎಂಬುದಾಗಿ ಸುಮತಿ ಶೆಡ್ತಿ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 134/14 ಕಲಂ 447, 504, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: