Sunday, March 02, 2014

Daily Crime Reported on 02/03/2014 at 07:00 Hrs.



ಅಪಘಾತ ಪ್ರಕರಣಗಳು 
  • ಪಡುಬಿದ್ರಿ: ಪಿರ್ಯಾದಿ ಅಶೋಕ್ ಗೌಡ ಪಾಟೇಲ್ ತಂದೆ:ಚೆನ್ನಬಸಣ್ಣ ಗೌಡ ಪಟೇಲ್  ವಾಸ: ಕಟಪುರ ಕುಷ್ಠಗಿ, ಕೊಪ್ಪಲರವರು ಸುಮಾರು 8 ತಿಂಗಳಿನಿಂದ ಕೆಎಸ್‌ಆರ್‌ಟಿಸಿ 1 ನೇ ವಿಭಾಗ ಮಂಗಳೂರು ಇಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ಈ ದಿನ ದಿನಾಂಕ 01.03.2014 ರಂದು ಕೆಎ 19 ಎಫ್‌ 3181 ನೇ ಬಸ್‌ನಲ್ಲಿ ಚಾಲಕನಾಗಿ  ಮಂಗಳೂರಿನಿಂದ ಹುಬ್ಬಳ್ಳಿ ಶಿರಸಿ ಮಾರ್ಗವಾಗಿ ದಮ್ಮೂರು ಕಡೆಗೆ ಹೊರಟು ರಾಹೆ 66 ರಲ್ಲಿ ಉಡುಪಿಯ ಕಡೆಗೆ ಬರುತ್ತಿರುವಾಗ ಉಡುಪಿ ತಾಲೂಕು ಹೆಜಮಾಡಿಯ ಶಿವನಗರ ಎಂಬಲ್ಲಿ ರಾತ್ರಿ 7-30 ಗಂಟೆಗೆ  ಅವರ ಎದುರಿನಿಂದ ಕೆಎ 19 ಬಿ 9698 ನೇ ಟಿಪ್ಪರ್‌ನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಪಡುಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿ ರಸ್ತೆಯ ಡಿವೈಡರ್‌ನಲ್ಲಿ ಒಮ್ಮೆಲೆ ಟಿಪ್ಪರ್‌ನ್ನು ಆತನ ಎಡಗಡೆಗೆ ಚಲಾಯಿಸಿದ ವೇಳೆ ಟಿಪ್ಪರ್ ಚಾಲಕನ ನಿಯಂತ್ರಣ ಕಳೆದುಕೊಂಡು ಬಲಗಡೆಗೆ ವಾಲಿ ಪಿರ್ಯಾದುದಾರರು ಚಲಾಯಿಸುತ್ತಿದ್ದ ಬಸ್‌ನ ಬಲಬದಿಯ ಮೇಲೆ ಮಗುಚಿ ಬಿದ್ದಿದ್ದು ಇದರಿಂದ ಬಸ್‌ನ ಚಾಲಕ, ನಿರ್ವಾಹಕ ಶರಣಪ್ಪ, ಹಾಗೂ 2-3 ಜನ ಪ್ರಯಾಣಿಕರು ಬಸ್‌ನಲ್ಲಿ ಸಿಲುಕಿ ಅವರಿಗೆ ತೀವ್ರ ಗಾಯಗಳಾಗಿರುತ್ತದೆ.ಈ ಬಗ್ಗೆ ಅಶೋಕ್ ಗೌಡರವರು ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 22 /14 ಕಲಂ:279,338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
  • ಕಾರ್ಕಳ : ದಿನಾಂಕ 01/03/2014 ರಂದು 19:00 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಆನೆಕೆರೆ ಹಿರಿಯಂಗಡಿ ರಸ್ತೆಯಲ್ಲಿರುವ ಎಸ್‌.ಎನ್‌.ವಿ. ಶಾಲೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಫಿರ್ಯಾಧಿ ಶ್ರೀ ಸತೀಶ್‌ ಕೆ ಗುಜರನ್‌, ತಂದೆ ದಿವಂಗತ ಕೆ ಜಿ ಗುಜರನ್‌, ವಾಸ ಶ್ರೀ ಬಾಲಾಜಿ ಕೃಪಾ, ಕರಿಯಕಲ್ಲು, ಸಾಣೂರು ಗ್ರಾಮ, ಕಾರ್ಕಳ ತಾಲೂಕುರವರು ಕೆ.ಎ.20.ಎ.6887 ನಂಬ್ರದ ಅಟೋ ರಿಕ್ಷಾವನ್ನು ಆನೆಕೆರೆ ಕಡೆಯಿಂದ ಹಿರಿಯಂಗಡಿ ಬಸದಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಇನ್ನೂ ನೊಂದಾವಣೆಯಾಗದ ಮೋಟಾರು ಸೈಕಲ್ಲೊಂದನ್ನು ಅದರ ಸವಾರ ಹಿರಿಯಂಗಡಿ ಬಸದಿ ಕಡೆಯಿಂದ ಆನೆಕೆರೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾಧಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಿಣಾಮ ಅಟೋ ರಿಕ್ಷಾ ಹಾಗೂ ಮೋಟಾರು ಸೈಕಲ್‌ ರಸ್ತೆಯಲ್ಲಿ ಮಗುಚಿ ಬಿದ್ದು, ಮೋಟಾರು ಸೈಕಲ್‌ ಸವಾರನಿಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಶ್ರೀ ಸತೀಶ್‌ ಕೆ ಗುಜರನ್‌ ರವರು ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 46/14 ಕಲಂ:279,337  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
ಕಳವು ಪ್ರಕರಣ   
  • ಮಲ್ಪೆ: ಪಡುತೋನ್ಸೆ ಗ್ರಾಮದ ಹಾಡಿಮನೆಯಲ್ಲಿರುವ "ಅಮ್ಮ" ಎಂಬಪಿರ್ಯಾದಿ ಹರೀಶ್ ವಿ ಅಮೀನ್ ತಂದೆ: ವಿಠಲ ಕೆ ಅಮೀನ್  ವಾಸ: ಅಮ್ಮಹಾಡಿ ಮನೆ  ಪಡುತೋನ್ಸೆ ರವರ  ಮನೆಯಲ್ಲಿ ದಿನಾಂಕ 28/02/2014 ರಂದು ರಾತ್ರಿ 10:00 ಗಂಟೆಗೆ ಊಟ ಮಾಡಿ ಹೆಂಡತಿ, ಮಗು ಕೋಣೆಯಲ್ಲಿ ಮಲಗಿದ್ದು, ರಾತ್ರಿ 1:30 ಗಂಟೆ ಸಮಯಕ್ಕೆ ಕಿಟಕಿಯಲ್ಲಿ ಶಬ್ದವಾಗಿದ್ದು, ನೋಡುವಾಗ ಪಿರ್ಯಾದಿದಾರರ ಹೆಂಡತಿಯ ತಲೆ  ದಿಂಬಿನ ಕೆಳಗಡೆ ತೆಗೆದಿರಿಸಿದ 4 .5 ಪವನ್ನಿನ ಚಿನ್ನದ  ಕರಿಮಣಿ ಸರವನ್ನು ಯಾರೋ ಕಳ್ಳರು ಕಿಟಕಿಯ ಬಾಗಿಲನ್ನು ಸರಿಸಿ ಕೋಲು ಹಾಕಿ ಸರವನ್ನು ಕಳವು ಮಾಡಿರುತ್ತಾರೆ .75. ಕಳವಾದ ಸೊತ್ತಿನ ಅಂದಾಜು ಮೌಲ್ಯ 55,000/- ರೂಪಾಯಿ ಆಗಿರುತ್ತದೆ.ಈ ಬಗ್ಗೆ ಹರೀಶ್ ವಿ ಅಮೀನ್ ರವರು ಕಳವಾದ ಬಗ್ಗೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/14 ಕಲಂ:457,380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣಗಳು 
  • ಪಡುಬಿದ್ರಿ: ದಿನಾಂಕ. 01.03.2014 ರಂದು ಸಂಜೆ 7:00 ಗಂಟೆಗೆ ನಂದಿಕೂರು ಗ್ರಾಮದ ಸಂತೋಷ ಬಾರ್ ನ ಕಂಪೌಂಡು ನ ಒಳಗಡೆ ವಸಂತ ದೇವಾಡಿಗ(42ವರ್ಷ)ಎಂಬವರು ಬಿದ್ದು ಕೊಂಡಿದ್ದು, ಮೂಗಿನಲ್ಲಿ ಮತ್ತು ಬಾಯಿಯಲ್ಲಿ ರಕ್ತ ಬರುತ್ತಿದ್ದು ಮೃತ ಪಟ್ಟಿರುತ್ತಾರೆ. ಮೃತ ಪಟ್ಟವರಿಗೆ ಕುಡಿಯುವ ಚಟ ಇದ್ದು, ಅವರ ಎಡ ಕೆನ್ನಗೆ ಏಟು ಬಿದ್ದಿರುವುದು ಕಂಡು ಬರುತ್ತದೆ. ಮರಣದ ಬಗ್ಗೆ ಸಂಶಯವಿರುವುದಾಗಿದೆ. ಈ ಬಗ್ಗೆ ಸುರೇಂದ್ರ ದೇವಾಡಿಗ  ತಂದೆ: ಸೀನ ದೇವಾಡಿಗ, ವಾಸ: ಶ್ರೀ ವೈಷ್ಣವಿ ನಿಲಯ, ರಾಮ ದೇವಾಲಯದ ಹತ್ತಿರ, ನಂದಿಕೂರು ಗ್ರಾಮ, ಉಡುಪಿರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 22/14 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
  • ಕಾರ್ಕಳ: ಕಾರ್ಕಳ ತಾಲೂಕು ಕಸಬ ಗ್ರಾಮದ ಪೆರ್ವಾಜೆ ಹೊಸಮನೆ ನಿವಾಸಿ ಶ್ರೀಮತಿ ಸಂಜೀವಿ ದೇವಾಡಿಗ ಇವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 01/03/2014 ರಂದು 15:00 ಗಂಟೆಯಿಂದ 15:15 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಮನೆಯ ಒಳಗಿನ ಕೋಣೆಯ ಪಕ್ಕಾಸಿಗೆ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀಮತಿ ಕವಿತಾ,ಗಂಡ ಸುರೇಶ್‌ ದೇವಾಡಿಗ, ವಾಸ ಶಿವಕೃಪಾ, ಹೊಸಮನೆ, ಪೆರ್ವಾಜೆ, ಕಸಬ ಗ್ರಾಮ, ಕಾರ್ಕಳ ತಾಲೂಕರವರು ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 07/14 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: