Saturday, March 01, 2014

Daily Crime Reported on 01/03/2014 at 07:00 Hrs



ಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾಧಿದಾರರಾದ ಫಿರೋಜ್‌ ಅಹಮ್ಮದ್‌ (21) ತಂದೆ: ಶಹಜಾಹನ್‌ ಸಾಹೇಬ್‌ ವಾಸ: ನಝ್ರೀನ್‌ಮಂಜಿಲ್‌, ಅಂಬಲಪಾಡಿ ಅಂಚೆ, ಉಡುಪಿ ತಾಲೂಕು ಎಂಬವರು ಉಡುಪಿಯ ಕರಾವಳಿ ಜಂಕ್ಷನ್‌ನಿನ ಆಟೋ ರಿಕ್ಷಾದ ಬಳಿ ನಿಂತುಕೊಂಡಿರುವಾಗ ಸಂಜೆ 05:45 ಗಂಟೆಗೆ ಅವರ ದೊಡ್ಡಪ್ಪನವರಾದ ಜಮಲ್‌ ಸಾಹೇಬ್‌ರವರು ಅವರ ಮಗ ಆದಿಲ್‌(12) ರವರನ್ನು ಅವರ ಹೊಂಡ ಆಕ್ಟೀವಾ ದ್ವಿಚಕ್ರ ವಾಹನ ನಂಬ್ರ ಕೆಎ-20 ಡಬ್ಲ್ಯೂ-1730 ನೇದರಲ್ಲಿ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಬನ್ನಂಜೆ ಕಡೆಯಿಂದ ಬಂದು ಆದಿ ಉಡುಪಿ ಕಡೆ ಹೋಗಲು ಜಂಕ್ಷನ್‌ನಲ್ಲಿ ಸಿಗ್ನಲ್‌ ಬಿದ್ದಿದರಿಂದ ಪಿರ್ಯಾಧಿದಾರರ ದೊಡ್ಡಪ್ಪನವರು ಜಂಕ್ಷನ್‌ನಲ್ಲಿ ನಿಲ್ಲಿಸಿಕೊಂಡಿರುವಾಗ ಅಂಬಾಗಿಲು ಕಡೆಯಿಂದ ಅಂಬಲಪಾಡಿ ಕಡೆಗೆ ಪಿಕಪ್‌ ವಾಹನ ಕೆಎ-20 ಸಿ-1187 ನೇದನ್ನು ಅದರ ಚಾಲಕನಾದ ಮಹೇಶ್‌ ಎಂಬವರು ಅತಿವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ನಿಲ್ಲುವ ಸೂಚನೆಯನ್ನು ಗಮನಿಸದೆ ಸಿಗ್ನಲ್‌ ಜಂಪ್‌ ಮಾಡಿ ಪಿರ್ಯಾದಿದಾರರ ದೊಡ್ಡಪ್ಪನ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಿಕ್ರ ವಾಹನ ಸವಾರ ಹಾಗು ಸಹಸವಾರರು ವಾಹನ ಸಮೇತ ರಸ್ತೆಗೆ ಬಿದ್ದುದರಿಂದ ಜಮಲ್‌ ಸಾಹೇಬ್‌ರವರ ಬಲಗಡೆ ಹಣೆಗೆ ರಕ್ತಗಾಯವಾಗಿದ್ದು ಬಲಕೈ ತೋಳಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಹಾಗು ಆದಿಲ್‌ನ ಮೈಗೆ ತರಚಿದ ಗಾಯಗಳಾಗಿರುತ್ತದೆ. ಕೂಡಲೇ ಗಾಯಾಳುವನ್ನು ಉಡುಪಿ ಹೈಟೆಕ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಫಿರೋಜ್‌ ಅಹಮ್ಮದ್‌ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2014 ಕಲಂ 279, 337, 338 ಐ.ಪಿ.ಸಿಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ಉಡುಪಿ: ಪಿರ್ಯಾದಿದಾರರಾದ ವಿಶು ಶೆಟ್ಟಿ (42) ತಂದೆ: ದಿ.ಗುಂಡು ಶೆಟ್ಟಿ ವಾಸ:ಅಂಬಲಪಾಡಿ, ಉಡುಪಿ ಎಂಬವರು ದಿನಾಂಕ 28-02-2014 ರಂದು 20:30 ಗಂಟೆಗೆ ತನ್ನ ದ್ವಿಚಕ್ರ ವಾಹನದಲ್ಲಿ ತನ್ನ ಮನೆಯಾದ ಅಂಬಲಪಾಡಿಗೆ ರಾ.ಹೆ-66 ರಲ್ಲಿ ಕರಾವಳಿ ಬೈಪಾಸ್‌ ಕಡೆಯಿಂದ ಹೋಗುತ್ತಿರುವಾಗ ಅವರ ಮುಂದುಗಡೆ ಒಂದು ಲಾರಿಯನ್ನು ಅದರ ಚಾಲಕನು ಅತಿವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದು ಬಿಗ್‌ ಬಾಸ್‌ ಬಾರ್‌ ಎದುರುಗಡೆ ರಸ್ತೆ ದಾಟುವರೆ ನಿಂತಿದ್ದ ಮಹಿಳೆಗೆ ಢಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದು ಮಹಿಳೆಯು ರಸ್ತೆಗೆ ಬಿದ್ದಿದ್ದು ಕೂಡಲೇ ಪಿರ್ಯಾದಿದಾರರು ಗಾಯಾಳು ಮಹಿಳೆಯನ್ನು ಒಂದು ಅಂಬುಲೆನ್ಸ್‌ ನಲ್ಲಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಸದ್ರಿ ಮಹಿಳೆಗೆ ತಲೆ ಮತ್ತು ಮುಖಕ್ಕೆ ರಕ್ತಗಾಯವಾಗಿದ್ದು ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬುದಾಗಿ  ವಿಶು ಶೆಟ್ಟಿ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2014 ಕಲಂ 279, 337 ಐ.ಪಿ.ಸಿ ಮತ್ತು 134 (ಎ)(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: