Friday, February 28, 2014 ಏಷ್ಯನ್ ಕ್ರಿಡಾಕೂಟಕ್ಕೆ ಶಂಕರ್ ಆಯ್ಕೆ
ಮಿಳುನಾಡಿನ ಕೊಯಮುತ್ತೂರಿನ ನೆಹರು ಕ್ರಿಡಾಂಗಣದಲ್ಲಿ ದಿನಾಂಕ 23/02/2014 ರಿಂದ 27/02/2014 ರ ವರೆಗೆ ನಡೆದ 35ನೇ ರಾಷ್ಟ್ರ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟ -2014 ರಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಪಡೆಯ ಶಂಕರ ಪೂಜಾರಿ ಕಾಡಿನತಾರು ಇವರು ಉಡುಪಿ ಜಿಲ್ಲೆಯಿಂದ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 200 ಮೀ ಓಟದಲ್ಲಿ ಚಿನ್ನ, 4x100 ಮೀ ರಿಲೇ ಓಟದಲ್ಲಿ ಬೆಳ್ಳಿ, 4x400 ಮೀ ರಿಲೇ ಓಟದಲ್ಲಿ ಕಂಚಿನ ಪದಕ ಒಟ್ಟು 3 ಪದಕ ಪಡೆದು, ಜಪಾನ್ ದೇಶದಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಬೋರಲಿಂಗಯ್ಯ ಎಂ.ಬಿ, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ್ ಕುಮಾರ್, ಪೊಲೀಸ್ ಉಪಾಧೀಕ್ಷಕರಾದ ಡಾ.ಪ್ರಭುದೇವ ಬಿ ಮಾನೆ ರವರು ಅಭಿನಂದಿಸಿರುತ್ತಾರೆ.

No comments: