Sunday, February 16, 2014

Dialy Crime Reported As On 16/02/2014 At 19:30 Hrs



ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ
  • ದಿನಾಂಕ 15/02/2014 ರಿಂದ 16/02/2014ರವರೆಗೆ ಉಡುಪಿ ತಾಲೂಕು ಮಣೂರು ಗ್ರಾಮದ ಮಣೂರು ಪಡುಕೆರೆ ಸರಕಾರಿ ಸಂಯುಕ್ತ ಪ್ರೌಡ ಶಾಲೆ ಮೈದಾನದಲ್ಲಿ ವಾಹಿನಿ ಕ್ರಿಕೇಟರ್ಸ್ ಪಡುಕೆರೆ ವತಿಯಿಂದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ಆಯೋಜಿಸಿದ್ದು, ದಿನಾಂಕ 16/02/2014 ರಂದು ರಾತ್ರಿ 12:15 ಗಂಟೆಗೆ ಆರೋಪಿಗಳಾದ 1). ಪ್ರಶಾಂತ, 2). ಪ್ರತಾಪ್ ತಿಂಗಳಾಯ, 3). ಸುಧಾಕರ ಕುಂದರ್ 4). ಸುರೇಶ ಕುಂದರ್ ಇವರುಗಳು ಕ್ರಿಕೇಟ್ ಮೈದಾನಕ್ಕೆ ಬಂದು ಸುತ್ತಲೂ ಕಟ್ಟಿದ ಜಾಹಿರಾತಿನ ಪ್ಲೇಕ್ಸ್/ಬ್ಯಾನರುಗಳನ್ನು ಹರಿಯುವ ಸಮಯ ಪಿರ್ಯಾದಿ ಮಣಿಕಂಠ (21) ಇವರು ಕೇಳಿದ್ದಕ್ಕೆ ಆರೋಪಿತರುಗಳೆಲ್ಲರು ನೀವು ಹೇಗೆ ಮ್ಯಾಚ್ ಮಾಡುತ್ತೀರಿ ನೋಡೋಣ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು  ಏಕಾ ಏಕಿ ಮೈದಾನಕ್ಕೆ ನುಗ್ಗಿ ಮೈದಾನದಲ್ಲಿದ್ದ ವಿಕೇಟನ್ನು ಕಿತ್ತುಕೊಂಡು ಮಣಿಕಂಠ ಹಾಗೂ ಉದಯ ಇವರುಗಳಿಗೆ ಹೊಡೆದು ಗಾಯಗೊಳಿಸಿರುವುದಾಗಿದೆ ಹಾಗೂ ಮೈದಾನದಲ್ಲಿದ್ದ ಕೆಲವು ಕುರ್ಚಿಗಳನ್ನು ನೆಲಕ್ಕೆ ಬಡಿದು ಜಖಂಗೊಳಿಸಿ ನಷ್ಟ ಉಂಟುಮಾಡಿ ಅವಾಚ್ಯೆ ಶಬ್ದಗಳಿಂದ ಬೈದು ಮ್ಯಾಚನ್ನು ಮುಂದುವರಿಸಿದರೆ ಒಬ್ಬೊಬ್ಬರಾಗಿ ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಕ್ರಿಕೆಟ್ ಸಂಸ್ಥೆಯಿಂದ ಆರೋಪಿ ಪ್ರಶಾಂತನನ್ನು ತಂಡಕ್ಕೆ ಆಡಲು ಅವಕಾಶ ಕೊಡಲಿಲ್ಲ ಎಂಬ ದ್ವೇಷದಿಂದ ಈ ಹಲ್ಲೆ ನಡೆಸಿ ಅವ್ಯಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಮಣಿಕಂಠ ಇವರು ನೀಡಿದ ದೂರಿನಂತೆ ಕೋಟಾ ಠಾಣಾ ಅಪರಾಧ ಕ್ರಮಾಂಕ 34/2014 ಕಲಂ 504 324 506 427 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯುಲ್ಲಿರತ್ತದೆ.

ಅಪಘಾತ ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ಚೇತನ ಕುಮಾರ (36) ತಂದೆ ದಿ. ರಾಮದಾಸ ಗುಡಿಗಾರ, ವಾಸ ರಾಧ ನಿಲಯ, 76 ಬಡಗುಬೆಟ್ಟು ಗ್ರಾಮ, ದುಗ್ಲಿ ಪದವು, ಅಲೆವೂರು ಅಂಚೆ, ಉಡುಪಿ ತಾಲೂಕು ಇವರ ತಾಯಿ ನಿರ್ಮಲರವರು ನಿನ್ನೆ ದಿನಾಂಕ 15/02/2014 ರಂದು ಬೆಳಿಗ್ಗೆ ಮನೆಯಿಂದ ಎಂ.ಐ.ಟಿ ಗೆ ಕೆಲಸಕ್ಕೆ ಹೋಗುವಾಗ ಮಂಚಿಕೆರೆ ಬಸ್ಸು ಸ್ಟಾಂಡ್‌ಗೆ ಮನೆಯಿಂದ ನಡೆದುಕೊಂಡು ಮಂಚಿಕೆರೆ ಬ್ರಿಡ್ಜ್‌ ಬಳಿ ಬೆಳಿಗ್ಗೆ ಸುಮಾರು 08:15 ಗಂಟೆಗೆ ತಲುಪುವಾಗ ಅವರ ಹಿಂದಿನಿಂದ ಒರ್ವ ಮೋಟಾರ್‌ ಸೈಕಲ್‌ ನಂಬ್ರ ಕೆಎ 20 ಡಬ್ಲ್ಯೂ 2432 ನೇದರ ಸವಾರ ಮಂಜು ಎಂಬವನು ತನ್ನ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ನಿರ್ಮಲರವರಿಗೆ ಡಿಕ್ಕಿ ಹೊಡೆದ ಪರಿಣಾಮ ನಿರ್ಮಲರವರು ನೆಲಕ್ಕೆ ಬಿದ್ದು, ಅವರ ಬಲಕಾಲು ಮತ್ತು ಎರಡು ಕೈಗಳು ಮೂಳೆ ಮುರಿತಗೊಂಡು ತಲೆ ಮತ್ತು ಮುಖಕ್ಕೆ ರಕ್ತ ಗಾಯವಾಗಿರುತ್ತದೆ. ಎಂಬುದಾಗಿ ಚೇತನ ಕುಮಾರ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 22/2014, ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ: ದಿನಾಂಕ 16/02/2014ರಂದು ಸಮಯ ಬೆಳಿಗ್ಗೆ 11:45 ಗಂಟೆಗೆ ಪಿರ್ಯಾದಿದಾರರಾದ ಗಣೇಶ್ ಪೂಜಾರಿ (48), ತಂದೆ ದಿ. ಜೋಗಿ ಪೂಜಾರಿ‌, ವಾಸ ಸಗ್ರಿ, ಕುಂಜಿಬೆಟ್ಟು, ಉಡುಪಿ ಇವರ ಅಣ್ಣ ಕೃಷ್ಣ ಪೂಜಾರಿ (55) ಎಂಬವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಸಗ್ರಿ ಎಂಬಲ್ಲಿ ಮನೆಯ ಅಂಗಳದಲ್ಲಿರುವ ಹುಣ್ಸೆ ಮರಕ್ಕೆ ಹತ್ತಿ ಹುಣ್ಸೆ ಹಣ್ಣು ಕೊಯ್ಯುತ್ತಿರುವಾಗ ಮರದ ಕೊಂಬೆಯಿಂದ ಆಯತಪ್ಪಿ ಸುಮಾರು 40 ಅಡಿ ಎತ್ತರದಿಂದ ನೆಲಕ್ಕೆ ಬಿದ್ದವರನ್ನು ಕೂಡಲೆ ಒಂದು ಕಾರಿನಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ ಎಂಬುದಾಗಿ ಗಣೇಶ್ ಪೂಜಾರಿ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 6/2014, ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: