Friday, February 28, 2014

Daily Crimes Reported as On 28/02/2014 at 07:00 Hrs


ಅಪಘಾತ ಪ್ರಕರಣಗಳು
  • ಕಾಪು:ದಿನಾಂಕ 27/02/2014 ರಂದು ಪಿರ್ಯಾದಿದಾರರಾದ ಇಕ್ಬಾಲ್ ಶೇಖ್ ಮನ್ಸೂರ್ (42) ತಂದೆ:ಶೇಖ್ ಮನ್ಸೂರ್ ಅಹಮದ್, ವಾಸ:ದಾವೂದ್ ಮಂಜಿಲ್,  ಕೊಂಬಗುಡ್ಡೆ,  ಮಲ್ಲಾರು ಗ್ರಾಮ, ಉಡುಪಿ ಜಿಲ್ಲೆರವರು ರಸ್ತೆ ಬದಿ ನಿಂತಿದ್ದಾಗ ಉಡುಪಿ ತಾಲೂಕು ಮೂಡಬೆಟ್ಟು ಗ್ರಾಮದ ರಾಷ್ಟೀಯ ಹೆದ್ದಾರಿ 66 ರಲ್ಲಿ ಕೆಎ-20 ಎನ್-2708ನೇ ಕಾರನ್ನು ಅದರ  ಚಾಲಕ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಕಾರಿನ ಟಯರ್ ಒಡೆದು ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚೇತನ, ಶ್ರೀಮತಿ ಛಾಯ ಮತ್ತು ಕುಮಾರಿ ಧೃತಿ ಇವರುಗಳು ತೀವ್ರವಾಗಿ ತಲೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕಾರಿನ ಚಾಲಕ ಗಾಗೊಂಡು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಇಕ್ಬಾಲ್ ಶೇಖ್ ಮನ್ಸೂರ್‌ರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 68/2014 ಕಲಂ 279, 337, 304() ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾಪು:ಪಿರ್ಯಾದಿದಾರರಾದ ಜೊತೆಯಲ್‌ ಡಿ’ಸೋಜ (21) ತಂದೆ:ಗಿಲ್ಬರ್ಟ್‌ ಡಿ’ಸೋಜ್‌, ವಾಸ:ಜೊಯೆಲ್‌ ಕಾಟೇಜ್‌, ಸುಭಾಸ್‌ ನಗರ, ಕುರ್ಕಾಲು ಗ್ರಾಮ, ಉಡುಪಿ ಜಿಲ್ಲೆರವರು ದಿನಾಂಕ 27/02/2014 ರಂದು ಕುಟುಂಬದ ಸದಸ್ಯರೊಂದಿಗೆ ಮುಡಿಪು ಸಂತ ಜೋಸೆಫ್‌ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಕೆಎ 20 ಪಿ 7784 ಸ್ವಿಫ್ಟ್‌ ಕಾರನ್ನು ಚಲಾಯಿಸಿಕೊಂಡು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ತನ್ನ ಮನೆಗೆ ಹೋಗುತ್ತಾ ಸಂಜೆ ಸುಮಾರು 7:55 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಪು ಸಮೀಪ ವಿದ್ಯಾನಿಕೇತನ ಶಾಲೆಯ ಬಳಿ ತಲುಪುವಾಗ ಎದುರಿನಿಂದ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಟಾಟಾ ಸುಮೋ ನಂಬ್ರ ಕೆಎ 20 ಪಿ 9157 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೇ ಬಲಭಾಗಕ್ಕೆ ಚಲಾಯಿಸಿ, ಜೊತೆಯಲ್‌ ಡಿ’ಸೋಜರವರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ, ಜೊತೆಯಲ್‌ ಡಿ’ಸೋಜರವರ ಸ್ವಿಫ್ಟ್‌ ಕಾರು ಜಖಂಗೊಂಡಿರುತ್ತದೆ. ಈ ಅಪಘಾತಕ್ಕೆ ಕೆಎ 20 ಪಿ 9157ನೇ ಟಾಟಾ ಸುಮೋ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿರುತ್ತದೆ.ಈ ಬಗ್ಗೆ ಜೊತೆಯಲ್‌ ಡಿ’ಸೋಜರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 69/2014 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಸ್ಪಿಟ್‌ ಜುಗಾರಿ ಪ್ರಕರಣಗಳು
  • ಕಾರ್ಕಳ ನಗರ:ದಿನಾಂಕ:27/02/2014 ರಂದು ಪಿರ್ಯಾದಿದಾರರಾದ ಕಾರ್ಕಳ ನಗರ ಠಾಣಾ ಪಿ.ಎಸ್.ಐ, ಶ್ರೀ ಕಬ್ಬಾಳ್‌ರಾಜ್‌ರವರಿಗೆ ಸಂಜೆ 17:30 ಗಂಟೆಗೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಎಸ್.ವಿ.ಟಿ ಕಾಲೇಜಿನ ಬಳಿಯ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಲಾಯಿ-ಪಿದಾಯಿಸ್ಪಿಟ್ ಜುಗಾರಿ ಆಟ ನಡೆಯುತ್ತಿದೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ 18:30 ಗಂಟೆಗೆ ದಾಳಿ ನೆಡೆಸಿ ಜುಗಾರಿ ಆಟ ಆಡುತ್ತಿದ್ದ 1)ಪ್ರಸಾದ 2)ಸಂದೇಶ್ 3)ಅಕ್ಷಯ್ 4)ಪ್ರಶಾಂತ್ 5)ಪ್ರದೀಪ ಇವರುಗಳನ್ನು ವಶಕ್ಕೆ ಪಡೆದುಕೊಂಡು, ಅವರ ವಶದಲ್ಲಿದ್ದ ನಗದು ರೂಪಾಯಿ 1030/-, ಸ್ಪಿಟ್ ಎಲೆ-52 ಹಾಗೂ ಜುಗಾರಿ ಆಟಕ್ಕೆ ಬಳಸಿದ ದಿನಪತ್ರಿಕೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 32/2014 ಕಲಂ 87 ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ:ಪಿರ್ಯಾದಿದಾರರಾದ ಪ್ರಸಾದ ಡಿ ಕವರಿ, ಪಿ.ಎಸ್.ಐ, ಕುಂದಾಪುರ ಪೊಲೀಸ್ ಠಾಣೆರವರಿಗೆ ದಿನಾಂಕ 27/02/14 ರಂದು ವಡೇರಹೋಬಳಿ ಗ್ರಾಮದ ಬೈಲುಚಿಕ್ಕು ದೇವಸ್ಥಾನ ಬಳಿ ಗದ್ದೆ ಬಯಲಿನಲ್ಲಿ ಅಂದರ್‌‌-ಬಾಹರ್‌ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆಪಾದಿತರುಗಳಾದ 1)ಸತೀಶ ಪೂಜಾರಿ 2)ಮಹೇಶ ನಾಗರಾಳ 3)ಶಂಕರ 4)ಜಯರಾಜ್ ದೇವಾಡಿಗ 5)ಶಂಕರ ಪೂಜಾರಿ ಇವರುಗಳನ್ನು ದಸ್ತಗಿರಿ ಮಾಡಿ, ಆಪಾದಿತರು ಆಟಕ್ಕೆ ಬಳಸಿದ  ಹಳೆಯ ದಿನ ಪತ್ರಿಕೆ, 52 ಇಸ್ಪೀಟು ಎಲೆ ಹಾಗೂ ನಗದು ರೂಪಾಯಿ 4,720/- ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 68/2014 ಕಲಂ 87 ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: