Thursday, February 27, 2014

Daily Crimes Reported as On 27/02/2014 at 19:30 Hrs


ಅಪಘಾತ ಪ್ರಕರಣ
  • ಶಂಕರನಾರಾಯಣ:ದಿನಾಂಕ:27/02/2014 ರಂದು ಬೆಳಿಗ್ಗೆ ಸುಮಾರು 07:15 ಗಂಟೆಗೆ ವೆಂಕಟ್ರಮಣ ಕಾರಂತ್‌ರವರು ಸಿದ್ದಾಪುರದಿಂದ ಹೊಸಂಗಡಿ ಕಡೆಗೆ ಅವರ ಕೆಎ 20 ಎಸ್‌ 8060 ನಂಬ್ರದ ಹೀರೋ ಹೊಂಡ ಸೂಪರ್‌ಸ್ಪ್ಲೆಂಡರ್‌ ಬೈಕಿನಲ್ಲಿ ಹೋಗುತ್ತಿರುವಾಗ ಹೆನ್ನಾಬೈಲಿನ ಚೀನಾಬೇರು ಎಂಬಲ್ಲಿ ಹೊಸಂಗಡಿ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿರುವ ಯಾವುದೋ ಅಪರಿಚಿತ ವಾಹನ ವೆಂಕಟ್ರಮಣ ಕಾರಂತರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವೆಂಕಟ್ರಮಣ ಕಾರಂತ್‌ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ವೆಂಕಟ್ರಮಣ ಕಾರಂತ್‌ರವರಿಗೆ ಎಡಬದಿಯ ಎದೆಯ ಮೂಳೆ ಮುರಿತವಾಗಿರುತ್ತದೆ. ಈ ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನವನ್ನು ಅದರ ಚಾಲಕನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಎ.ರಾಮಚಂದ್ರ ಭಟ್‌ ತಂದೆ:ಎ.ಶ್ರೀನಿವಾಸ್‌ ಭಟ್‌ ವಾಸ:ಅಗ್ರಹಾರ ಕಮಲಶಿಲೆ ಗ್ರಾಮರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 38/2014, ಕಲಂ 279, 338 & 134 (ಎ),(ಬಿ) ಐ.ಎಮ್.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
  • ಕಾರ್ಕಳ ನಗರ:ದಿನಾಂಕ:26/02/2014 ರಂದು ಮಧ್ಯಾಹ್ನ 2:30 ಗಂಟೆಗೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಕಡಂಬಳ ಎಂಬಲ್ಲಿ ಪಿರ್ಯಾದಿದಾರರಾದ ಶಾರದ ಮೇರ್ತಿ(36) ತಂದೆ:ಬಾಡ ಮೇರ, ವಾಸ:ಕಡಂಬಳ,ದುರ್ಗ ಅಂಚೆ, ಮಿಯ್ಯಾರು ಗ್ರಾಮರವರೊಂದಿಗೆ ವಾಸವಾಗಿದ್ದ ಶಾರದ ಮೇರ್ತಿರವರ ಅಕ್ಕ ವಸಂತಿ ಎಂಬವರ ಮಗ ಸುರೇಶ್ (26) ಎಂಬವರು ಸ್ವಲ್ಪ ಅಸೌಖ್ಯದಿಂದ ನೊಂದುಕೊಂಡಿದ್ದು, ಶಾರದ ಮೇರ್ತಿರವರ ಮನೆಯಲ್ಲೇ ಇದ್ದವರು, ಮನೆಯಿಂದ ಹೋದವರು ವಾಪಾಸ್ಸು ಬಾರದೇ, ಅವರು ಕೆಲಸ ಮಾಡುತ್ತಿದ್ದ ಗುರುವಾಯನಕೆರೆ ಕಡೆಗೂ ಹೋಗದೇ ಕಾಣೆಯಾಗಿರುತ್ತಾರೆ. ಕಾಣೆಯಾದವರ ಚಹರೆ-ಎತ್ತರ 5.6”, ಬಣ್ಣ ಎಣ್ಣೆಕಪ್ಪು, ವಿದ್ಯಾಭ್ಯಾಸ:7ನೇ ತರಗತಿ, ಧರಿಸು:ನೀಲಿ ಬಣ್ಣದ ಪ್ಯಾಂಟ್, ಕೆಂಪು ಬಣ್ಣದಲ್ಲಿ  ಬಿಳಿ  ಚೆಕ್ಸ್ ಶರ್ಟ್‌, ಭಾಷೆ:ಕನ್ನಡ, ತುಳು ಬಲ್ಲವರಾಗಿರುತ್ತಾರೆ. ಈ ಬಗ್ಗೆ ಶಾರದ ಮೇರ್ತಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 31/2014 ಕಲಂ ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: