Tuesday, February 25, 2014

Daily Crimes Reported as On 25/02/2014 at 17:00 Hrs


ಅಪಘಾತ ಪ್ರಕರಣಗಳು
  • ಬೈಂದೂರು:ಪಿರ್ಯಾದಿದಾರರಾದ ಮಹಮದ್ ಹುಸೈನ್ (23) ತಂದೆ:ಮುಲ್ಲಾ ಅಬ್ಬಾಸ್ ವಾಸ:ಮುಲ್ಲಾಹೌಸ್, ಚಾತನಕೆರೆ, ನಾವುಂದ ಗ್ರಾಮ ಕುಂದಾಪುರ ತಾಲೂಕುರವರ ತಂದೆ ಮುಲ್ಲಾ ಅಬ್ಬಾಸ್ ಎಂವರು ದಿನಾಂಕ 23/02/2014 ರಂದು ಸಂಜೆ ಸುಮಾರು 07:30 ಗಂಟೆಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ಚಾತನಕೆರೆ ಎಂಬಲ್ಲಿ ರಾಹೆ.66 ನೇದರ ಎಡಭಾಗದಲ್ಲಿ ತನ್ನ ಸೈಕಲ್‌ನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಕುಂದಾಪುರದ ಕಡೆಯಿಂದ ಬೈಂದೂರು ಕಡೆಗೆ ಮೋಟಾರ್ ಸೈಕಲ್ ನಂಬ್ರ KA 19 L 6006 ನೇದರ ಸವಾರ ಬಾಲಕೃಷ್ಣ ತನ್ನ ಮೋಟಾರ್ ಸೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಲ್ಲಾ ಅಬ್ಬಾಸ್‌ರವರು ಸವಾರಿ ಮಾಡಿಕೊಂಡಿದ್ದ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮುಲ್ಲಾ ಅಬ್ಬಾಸ್‌ರವರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಈ ಬಗ್ಗೆ ಮಹಮದ್ ಹುಸೈನ್‌ರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 38/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹಿರಿಯಡ್ಕ:ದಿನಾಂಕ 25/02/2014 ರಂದು 09:30 ಗಂಟೆಗೆ ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಅಂಗಡಿ ಪೂಪಾಡಿ ಕಲ್ಲು ಬಸ್ಸು ನಿಲ್ದಾಣದ ಬಳಿ ಕಾರ್ಕಳ-ಹಿರಿಯಡ್ಕ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ನಂಬ್ರ ಕೆಎ 36-7030 ನೇದರ ಚಾಲಕ ಹಮೀದ್ ಎಂಬವರು ಸದ್ರಿ ಟಿಪ್ಪರನ್ನು ಕಾರ್ಕಳ ಕಡೆಯಿಂದ ಹಿರಿಯಡ್ಕ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಪೂಪಾಡಿ ಕಲ್ಲು ಬಸ್ಸು ನಿಲ್ದಾಣದ ಬಳಿ ರಸ್ತೆ ದಾಟುವರೇ ನಿಂತುಕೊಂಡಿರುವ ಪಿರ್ಯಾದಿದಾರರಾದ ಬಾಲಕೃಷ್ಣ ಪೂಜಾರಿ (49) ತಂದೆ:ಅಣ್ಣಪ್ಪ ಪೂಜಾರಿ ವಾಸ:ಮಡಿಬೆಟ್ಟು, ದರ್ಖಾಸು ಮನೆ, ಕಣಜಾರು ಗ್ರಾಮ, ಗುಡ್ಡೆಅಂಗಡಿ ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆರವರ ನಾದಿನಿ ಶ್ರೀಮತಿ ಸುಜಾತಾ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ, ಸುಜಾತಾರವರ ತಲೆಯ ಹಿಂಬದಿಗೆ ತೀವೃ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ,ಎಮ್,ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿರುತ್ತದೆ. ಈ ಬಗ್ಗೆ ಬಾಲಕೃಷ್ಣ ಪೂಜಾರಿರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 21/2014 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಸ್ಪಿಟ್‌ ಜುಗಾರಿ ಪ್ರಕರಣ
  • ಶಿರ್ವಾ:ದಿನಾಂಕ 25/02/2014 ರಂದು ಪಿರ್ಯಾದಿದಾರರಾದ ಅಶೋಕ್ ಪಿ, ಪಿ.ಎಸ್.ಐ, ಶಿರ್ವಾ ಠಾಣೆರವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿರ್ವಾ ಗ್ರಾಮದ ಶಿರ್ವಾ ಅಚ್ಚುತ ಸದನದ ಕಟ್ಟಡದ ಹಿಂಬದಿಯಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಜುಗಾರಿ ಆಟ ಆಡುತಿದ್ದಾರೆಂದು ದೊರೆತ ಖಚಿತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ 13:30 ಗಂಟೆಗೆ ದಾಳಿ ನಡೆಸಿ ರೋಪಿಗಳಾದ 1)ಹರೀಶ್ ಚಾರಿ 2)ಉಮೇಶ್ ಶೆಟ್ಟಿ 3)ವಿಶ್ವನಾಥ ಸುವರ್ಣ ಇವರುಗಳನ್ನು ದಸ್ತಗಿರಿ ಮಾಡಿ, ಆಟಕ್ಕೆ ಉಪಯೋಗಿಸಿ ನಗದು 6820/- ರೂಪಾಯಿ, ಸ್ಪೀಟ್‌ ಎಲೆಗಳು-52 ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 23/2014 ಕಲಂ:87 ಕೆ,ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 

No comments: