Sunday, February 23, 2014

Daily Crimes Reported as On 23/02/2014 at 19:30 Hrs


ಅಪಘಾತ ಪ್ರಕರಣಗಳು
  • ಕುಂದಾಪುರ ಸಂಚಾರ:ಈ ದಿನ ದಿನಾಂಕ:23/02/2014 ರಂದು ಮದ್ಯಾಹ್ನ ಸುಮಾರು 02:00 ಗಂಟೆಗೆ ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಗೀತಾಂಜಲಿ (ಹಳೆ) ಟಾಕೀಸಿನ ಬಳಿ ಸಾಯಿಮಂದಿರದ ಹತ್ತಿರ ಆಪಾದಿತ ಜೊಸೆಫ್ ಸೆರಾವೊ ಎಂಬುವರು ಕೆಎ-20-ಸಿ-7136 ನಂಬ್ರದ ಆಟೋರಿಕ್ಷಾವನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಪಿರ್ಯಾದಿದಾರರಾದ ವಿಜಯ ಖಾರ್ವಿ  (52) ತಂದೆ:ದಿವಂಗತ ವಾಸುದೇವ ಖಾರ್ವಿ ವಾಸ:348/2, ಈಸ್ಟ್ ಬ್ಲಾಕ್, ರಾಮ ಮಂದಿರದ ಹತ್ತಿರ, ಕುಂದಾಪುರ ಕಸಬಾ, ಕುಂದಾಪುರರವರು ನಿಲ್ಲಿಸಿಕೊಂಡಿದ್ದ ಕೆಎ-20-ಆರ್–4660 ನೇ ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ವಿಜಯ ಖಾರ್ವಿರವರ ಬಲಕಾಲಿನ ಮೊಣಗಂಟಿಗೆ ತುಂಬಾ ಒಳನೋವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ವಿಜಯ ಖಾರ್ವಿರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 35/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ:ದಿನಾಂಕ:22/02/2014 ರಂದು ಪಿರ್ಯಾದಿದಾರರಾದ ಸುಧಾಕರ ಸೇರೆಗಾರ್ (42) ತಂದೆ:ಸೀತಾರಾಮ ಸೇರೆಗಾರ, ವಾಸ:ಜಪ್ತಿ ಗ್ರಾಮ, ಕುಂದಾಪುರ ತಾಲೂಕುರವರು ತನ್ನ ಮೊಟಾರ್ ಸೈಕಲ್‌ನಲ್ಲಿ ಬ್ರಹ್ಮಾವರದಿಂದ ಕೋಟೇಶ್ವರ ಕಡೆಗೆ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಾತ್ರಿ ಸುಮಾರು 9:30 ಗಂಟೆಗೆ ಬ್ರಹ್ಮಾವರ ಮಾಲ್ಗುಡಿ ಬಾರ್‌ನಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಿರುವಾಗ, ಮುಂದುಗಡೆ ಹೋಗುತ್ತಿರುವ ಹೀರೋ ಹೊಂಡಾ ಪ್ಲೆಸರ್ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಕೆಎ-20-ವೈ-2437 ನೇ ಬಜಾಜ್ ಡಿಸ್ಕವರ್‌ ಬೈಕ್ ಸವಾರ ಅಜೇಯನು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಪ್ಲೆಸರ್‌ನ ಸವಾರ ರಮೇಶ್ ಆಚಾರ್ಯ (49) ತಂದೆ;ಜನಾರ್ಧನ ಆಚಾರ್ಯ, ವಾಸ:ಮಧುರೈಕಟ್ಟೆ, ಕೋಟೇಶ್ವರ ಕುಂದಾಪುರ ತಾಲೂಕುರವರು ಹತೋಟಿ ತಪ್ಪಿ ರಸ್ತೆಯ ಡಿವೈಡರ್ ಮೇಲೆ ಬಿದ್ದ ಪರಿಣಾಮ ತೀವ್ರ ತರದ ಗಾಯಗೊಂಡಿದ್ದು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾಗಿದೆ. ಗಾಯಾಳುವಿನ ವಾಹನದ ನೊಂದಣಿ ಸಂಖ್ಯೆ ಇರುವುದಿಲ್ಲ. ಈ ಬಗ್ಗೆ ಸುಧಾಕರ ಸೇರೆಗಾರ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 37/14 ಕಲಂ:279.338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಮನುಷ್ಯ  ಕಾಣೆ ಪ್ರಕರಣ  
  • ಶಂಕರನಾರಾಯಣ:ಪಿರ್ಯಾದಿದಾರರಾದ ವಿನೋದ ಗಂಡ:ಪ್ರಕಾಶ್‌ ವಾಸ:ಮೇಬೈಲು ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕುರವರ ಗಂಡ ಪ್ರಕಾಶ್‌ (29) ಎಂಬವರು ದಿನಾಂಕ 13/02/2014 ರಂದು ಬೆಳಿಗ್ಗೆ 08:00 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಶಾನ್ಕಟ್ಟು ಎಂಬಲ್ಲಿನ ಅವರ ತಾಯಿಯ ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೇ ಇದ್ದು ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹಾಗೂ ಎಲ್ಲಾ ಕಡೆಗಳಲ್ಲಿ ವಿಚಾರಿಸಿದ್ದು ಈವರೆಗೂ ಪ್ರಕಾಶ್‌ ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಪ್ರಕಾಶರವರು ವಿನೋದರವರ ಚಿಕ್ಕಪ್ಪನ ಮಗಳೊಂದಿಗೆ ಎಲ್ಲಿಯೋ ಹೋಗಿರಬಹುದು ಎಂಬುದಾಗಿ ವಿನೋದರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 29/2014 ಕಲಂ ಮನುಷ್ಯ  ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ಮಾಲಿಂಗ ಮೋಗವೀರ ತಂದೆ:ಅಣ್ಣಿ ನಾಯ್ಕ ವಾಸ:ಕೋಟೆಹಿತ್ಲು ತಲ್ಲೂರುರವರ ಚಿಕ್ಕಮ್ಮನ ಮಗ ಅಣ್ಣಪ್ಪ ಮೊಗವೀರ (55) ಎಂಬುವರು ಕೂಲಿ ಕೆಲಸ ಮಾಡಿಕೊಂಡಿದ್ದು ಸುಮಾರು 10 ವರ್ಷದಿಂದ ವಿಪರೀತ ಸರಾಯಿ ಸೇವಿಸುವ ಚಟ ಹೊಂದಿದ್ದು, ನಿನ್ನೆ ದಿನ ದಿನಾಂಕ 22/02/2014 ರಂದು ಕೂಲಿ ಕೆಲಸದ ಬಗ್ಗೆ ಪಾರ್ತಿಕಟ್ಟೆಗೆ ಹೋದವರು ಮನೆಗೆ ಬಾರದೇ ಇದ್ದು, ಈ ದಿನ ದಿನಾಂಕ 23/02/2014 ರಂದು ಮಧ್ಯಾಹ್ನ ಅಣ್ಣಪ್ಪ ಮೋಗವೀರರವರ ಮೃತ ದೇಹ ಪತ್ತೆಯಾಗಿದ್ದು ದಿನಾಂಕ:22/02/2014 ರಿಂದ ದಿನಾಂಕ:23/02/14 ರ ಮಧ್ಯಾಹ್ನದ ಮಧ್ಯಾವದಿಯಲ್ಲಿ ಅಣ್ಣಪ್ಪ ಮೋಗವೀರರವರು ವಾಪಾಸ್ಸು ಮನೆಗೆ ಬರುವಾಗ ತಲ್ಲೂರು ಗ್ರಾಮದ ಕಡೆಮನೆ ಎಂಬಲ್ಲಿ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಮಾಲಿಂಗ ಮೋಗವೀರರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 08/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: