Sunday, February 23, 2014

Daily Crimes Reported as On 23/02/2014 at 17:00 Hrs


ಅಪಘಾತ ಪ್ರಕರಣ
  • ಕುಂದಾಪುರ ಸಂಚಾರ:ಈ ದಿನ ದಿನಾಂಕ 23/02/2014 ರಂದು ಬೆಳಿಗ್ಗೆ ಸುಮಾರು 10:50 ಗಂಟೆಗೆ ಕುಂದಾಪುರ ತಾಲೂಕಿನ ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ, ಆಪಾದಿತ ಶರತ್‌ರಾಜ್ ಎಂಬವರು ನೋಂದಣಿ ನಂಬ್ರ ಇಲ್ಲದ ಹೊಸ ದ್ವಿಚಕ್ರ ವಾಹನವನ್ನು ಕುಂಭಾಶಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡುಬಂದು, ರಾಷ್ಟ್ರೀಯ ಹೆದ್ದಾರಿ 66 ರನ್ನು ದಾಟಲು ರಸ್ತೆ ಬದಿ ನಿಂತಿದ್ದ ಪಿರ್ಯಾದಿದಾರರಾದ ಗೋವಿಂದ ರಾಜ್ (50) ತಂದೆ:ದಿವಂಗತ ಕುಪ್ಪಸ್ವಾಮಿ ವಾಸ:ಗೋಳಿಮರ, ಯಡ್ತಾಡಿ ಗ್ರಾಮ, ಬ್ರಹ್ಮಾವರ ಉಡುಪಿರವರಿಗೆ ಢಿಕ್ಕಿ ಹೊಡೆದ ಪರಿಣಾಮ ಗೋವಿಂದ ರಾಜ್ ಹಾಗೂ ಆಪಾದಿತ ಶರತ್‌ರಾಜ್ ಬೈಕ್ ಸಮೇತ ರಸ್ತೆಗೆ ಬಿದ್ದು ರಕ್ತಗಾಯ ಉಂಟಾಗಿ ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಗೋವಿಂದ ರಾಜ್‌ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 34/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: