Friday, February 14, 2014

Daily Crimes Reported as On 14/02/2014 at 17:00 Hrsಕೋಳಿ ಅಂಕ ದಾಳಿ ಪ್ರಕರಣ
  • ಬೈಂದೂರು: ದಿನಾಂಕ 13-02-2014 ರಂದು ಕುಂದಾಪುರ ತಾಲೂಕು ಗೋಳಿಹೊಳೆ ಗ್ರಾಮದ ಚಾರ್ಸಾಲು ಮಂಜು ಮರಾಠಿ ಯವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಎಂಬ ಹೆಸರಿನ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ  ಸುನೀಲ್ ಕುಮಾರ್ ಎಮ್.ಎಸ್ ರವರು ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 16-30 ಗಂಟೆಗೆ ದಾಳಿ ಮಾಡಿ ಜೂಜಾಟ ನಿರತ 1) ನಾಗರಾಜ ಮರಾಠಿ, 2) ಮಂಜುನಾಥ ನಾಯ್ಕ, 3) ಶೇಖರ ಶೆಟ್ಟಿ, 4) ಸುಬ್ಬಣ್ಣ ಶೆಟ್ಟಿ, 5) ವಾಸು ನಾಯ್ಕ, 6) ಮಾಲು ಮರಾಠಿ, 7) ಎಂ. ಪ್ರಭಾಕರ ಎಂಬವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ 10  ಕೋಳಿಗಳು, ಕೋಳಿ ಬಾಳು-5, ಹಾಗೂ ನಗದು ರೂಪಾಯಿ 550/-ನ್ನು ಸ್ವಾಧೀನ ಪಡಿಸಿಕೊಂಡದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2014 ಕಲಂ 87,93 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಜೂಜಾಟ ಪ್ರಕರಣೆ 
  • ಹೆಬ್ರಿ: ದಿನಾಂಕ 13.02.14 ರಂದು ಹೆಬ್ರಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸೀತಾರಾಮ್.ಪಿ,ರವರು ಕಾರ್ಕಳ  ತಾಲೂಕು ವರಂಗ ಗ್ರಾಮದ ಚಟ್ಕಲ್ ಪಾದೆ ಕ್ರಾಸ್ ಗೂಡಾಂಗಡಿಯ ಬಳಿ ಒರ್ವ ವ್ಯಕ್ತಿಯು ಮಟ್ಕಾ ಜೂಜಾಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆಪಾದಿತ ತಿಮ್ಮಪ್ಪ ಶೆಟ್ಟಿ(64), ತಂದೆ: ದಿ.ರುಕ್ಮಯ್ಯ ಶೆಟ್ಟಿ, ವಾಸ: ಚಟ್ಕಲ್‌ ಪಾದೆ, ಮುನಿಯಾಲು, ವರಂಗ ಗ್ರಾಮ, ಕಾರ್ಕಳ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿದ್ದು, ದಾಳಿ ಸಮಯ ಇನ್ನೊಬ್ಬ ಆರೋಪಿ ಓಡಿ ಹೋಗಿದ್ದು, ಓಡಿ ಹೋದವನ ಬಗ್ಗೆ ವಿಚಾರಿಸಿದಾಗ ಅತನ ಹೆಸರು ಉಡುಪಿಯ ಪ್ರಮೋದ್ ಎಂದೂ ಅತನ ಸೂಚನೆಯ ಮೇರೆಗೆ ತಾನು ಈ ಕೆಲಸವನ್ನು ಮಾಡುತ್ತಿರುವುದಾಗಿಯೂ ಉಡುಪಿಯ ಲಿಯೋ ಕರ್ನೆಲಿಯೋ ಎಂಬವರ ಲಾಭಕ್ಕಾಗಿ ಈ ಕೆಲಸ ಮಾಡಿಸುವುದಾಗಿ ಆರೋಪಿಯು ತಪ್ಪೊಪ್ಪಿ ಕೊಂಡಿದ್ದು. ಸೆರೆಸಿಕ್ಕ ಆರೋಪಿಯ ವಶದಲ್ಲಿದ್ದ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,120/- ಮತ್ತು ಮಟ್ಕಾ ಜುಗಾರಿ ಆಟಕ್ಕೆ ಬಳಿಸಿದ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2014, ಕಲಂ: 78(1), 78(3)  ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಹೆಬ್ರಿ: ದಿನಾಂಕ: 13.02.14ರಂದು ಕಾರ್ಕಳ ತಾಲೂಕು ವರಂಗ  ಗ್ರಾಮದ ಮುನಿಯಾಲ್ ಉಲ್ಲಾಸ್ ಬಾರ್ ನ ಎದುರುಗಡೆ ಇರುವ ಗೂಡಾಂಗಡಿಯ ಬಳಿ ಒರ್ವ ವ್ಯಕ್ತಿಯು ಮಟ್ಕಾ ಜೂಜಾಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಪರಮೇಶ್ವರ ನಾಯ್ಕ್‌, ಎಎಸ್‌ಐ, ಹೆಬ್ರಿ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯೊಂದಿಗೆ ತಕ್ಷೀರು ಸ್ಥಳಕ್ಕೆ ಹೋಗಿ 19-00 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಅಟ ಅಡುತ್ತಿದ್ದ ಶಂಕರ ಕಾಂಚನ್ ರವರನ್ನು ದಸ್ತಗಿರಿ ಮಾಢಿ ವಿಚಾರಿಸಿದಾಗ ತಾನು ಉಡುಪಿಯ ಪ್ರಮೋದ್ ರವರ ಸೂಚನೆಯಂತೆ ಲಿಯೋ ಕರ್ನೆಲಿಯೋ ಇವರ ಲಾಭಕ್ಕಾಗಿ ಈ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದ್ದು. ಶಂಕರ ಕಾಂಚನ್ ವಶದಲ್ಲಿದ್ದ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂ.2,180/-, ಮಟ್ಕಾ ಚೀಟಿ-1 ಮತ್ತು ಬಾಲ್‌ ಪೆನ್‌-1 ನ್ನು ಸ್ವಾಧೀನಪಡಿಸಿಕೊಂಡು ಅರೋಪಿತರ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2014, ಕಲಂ: 78(1), 78(3)  ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಹೆಬ್ರಿ: ದಿನಾಂಕ: 13.02.14 ರಂದು ಕಾರ್ಕಳ ತಾಲೂಕು ವರಂಗ ಗ್ರಾಮದ ಮುನಿಯಾಲ್ ಪೇಟೆಯ ಮೀನು ಮಾಕೇಟ್ ಬಳಿ ಇರುವ ಗೂಡಾಂಗಡಿಯ ಬಳಿ ಒರ್ವ ವ್ಯಕ್ತಿಯು ಮಟ್ಕಾ ಜೂಜಾಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ದಾಮೋದರ, ಹೆಚ್‌.ಸಿ 971, ಹೆಬ್ರಿ ಪೊಲೀಸ್ ಠಾಣೆ ಇವರು ಸಿಬ್ಬಂದಿಯೊಂದಿಗೆ ತಕ್ಷೀರು ಸ್ಥಳಕ್ಕೆ ಹೋಗಿ 19-15 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಅಟ ಅಡುತ್ತಿದ್ದ ಸುರೇಶ್ ದೇವಾಡಿಗನನ್ನು ದಸ್ತಗಿರಿ ಮಾಢಿ ವಿಚಾರಿಸಿದಾಗ ತಾನು ಉಡುಪಿಯ ಪ್ರಮೋದ್ ರವರ ಸೂಚನೆಯಂತೆ ಲಿಯೋ ಕರ್ನೆಲಿಯೋ ಇವರ ಲಾಭಕ್ಕಾಗಿ ಈ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದ್ದು, ಸುರೇಶ್ ದೇವಾಡಿಗನ ವಶದಲ್ಲಿದ್ದ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂ.925/-, ಮಟ್ಕಾ ಚೀಟಿ-1 ಮತ್ತು ಬಾಲ್‌ ಪೆನ್‌-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2014, ಕಲಂ: 78(1), 78(3)  ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಕಳವು ಪ್ರಕರಣ  
  • ಮಲ್ಪೆ : ದಿನಾಂಕ 12/02/2014 ರಂದು ಸಂಜೆ 6.00 ಗಂಟೆಗೆ ಮೋಹನ ಪೂಜಾರಿ (48) ತಂದೆ: ಅಪ್ಪು ಪೂಜಾರಿ ವಾಸ: ತೊಟ್ಟಂ ಚರ್ಚ್‌ ಬಳಿ, ತೆಂಖನಿಡಿಯೂರು ಗ್ರಾಮ ಇವರು ತನ್ನ ಬಾಬ್ತು ಆಟೋ ರಿಕ್ಷಾ ಕೆಎ20ಎ9657ನ್ನು ತೆಂಕನಿಡಿಯೂರಿನ ತೊಟ್ಟಂ ಚರ್ಚ ಬಳಿಯ ತನ್ನ ಮನೆಯಿಂದ ಸುಮಾರು 100 ಮೀಟರ್ ಹಿಂದೆ ನಿಲ್ಲಿಸಿ ಹೋಗಿದ್ದು, ದಿನಾಂಕ 13/02/2014 ರಂದು ಬೆಳಿಗ್ಗೆ ಸುಮಾರು 7.00ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಇವರು ಆಟೋ ರಿಕ್ಷಾಕ್ಕೆ ಅಳವಡಿಸಿದ ಬ್ಯಾಟರಿಯ ವಯರ್ ಗಳನ್ನು ತುಂಡು ಮಾಡಿದ್ದು ಹಾಗೂ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಇದರ ಅಂದಾಜು ಮೌಲ್ಯ 2500 ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 27/2014 ಕಲಂ 379 ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಮಣಿಪಾಲ : ಮಹಮ್ಮದ್‌ ಇಕ್ಬಾಲ್‌ (46) ತಂದೆ: ದಿ. ಹೆಚ್‌.ಕೆ ಅಹಮ್ಮದ್‌ ಅಬ್ದುಲ್‌ ಖಾದರ್‌, ವಾಸ: ಕೋರಿ ಹೌಸ್‌, ಸರ್ಕಾರಿ ಪಿಶರೀಸ್‌ ಹೈಸ್ಕೂಲ್‌ ಬಳಿ, ಹೆಜಮಾಡಿ ಕೋಡಿ, ಉಡುಪಿ ಇವರು ತನ್ನ ಬಾಬ್ತು ಬಜಾಜ್‌ ಡಿಸ್ಕವರ್‌ ಮೋಟಾರ್‌ ಸೈಕಲ್‌ ನಂಬ್ರ: ಕೆಎ 20 ಇಎ 4775 ನೇದನ್ನು ದಿನಾಂಕ 12.02.2014 ರಂದು 17:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ ಬಳಿ ಇರುವ ಹಿಲ್‌ವ್ಯೂ ಹೋಟೇಲ್‌ನ ಎದುರು ಪಾರ್ಕ್‌ ಮಾಡಿ ಹೆಜಮಾಡಿಗೆ ಹೋಗಿದ್ದು, ಮರು ದಿನ ದಿನಾಂಕ 13.02.2014 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದುದಾರರು ಬಂದು ನೋಡಿದಾಗ ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ 30,000/- ಆಗಬಹುದು ಎಂದು ಮಹಮ್ಮದ್‌ ಇಕ್ಬಾಲ್‌ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾದ ಕ್ರಮಾಂಕ : 19/2014 ಕಲಂ.379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.
     
ಹಲ್ಲೆ ಪ್ರಕರಣ  
  • ಕುಂದಾಪುರ : ದಿನಾಂಕ 13-02-2014 ರಂದು 15:30ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ  ಕೋಡಿ ಶೆಟ್ಟಿ ಮೆನೆ ಬಳಿಯ ಲೀಲಾ(40) ಗಂಡ: ಸಂಜೀವ ಖಾರ್ವಿ ವಾಸ: ಶಟ್ಟಿ ಮನೆ ಚಕ್ರೇಶ್ವರಿ ದೇವಸ್ಥಾನದ ಬಳಿ ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಜಾಗಕ್ಕೆ ಆಪಾದಿತರಾದ ನಾಗರಾಜ ಖಾರ್ವಿ ಹಾಗೂ ಆತನ ಹೆಂಡತಿ ಶಾರದ ಖಾರ್ವಿ ಸೇರಿ ಕೊಂಡು ಅಕ್ರಮ ಪ್ರವೇಶ ಮಾಡಿ ಲೀಲಾರವಿಗೆ ಕೈಗಳಿಂದ ಮೈಗೆ ಕೈಗೆ ಹಾಗೂ ತೆಂಗಿನ ಮರದ ಗರಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನಿಮಗೆ ಈ ಜಾಗದಲ್ಲಿ ಅದಿಕಾರವಿಲ್ಲ ನೀವು ಹೋಗಿ ಎಂದು ಬೈದು, ಅವರಿಂದ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದಾಗ, ನಾಗರಾಜ ಖಾರ್ವಿ ,ಶಾರದ ಖಾರ್ವಿ, ಲಕ್ಷ್ಮಣ ಖಾರ್ವಿ, ಮಂಜುನಾಥ ಖಾರ್ವಿರವರು ಓಡಿಸಿ ಕೊಂಡು ಲೀಲಾ ಅವರ ಮನೆಯ ಅಂಗಳಕ್ಕೆ ಬಂದು ನಿಮ್ಮನ್ನೆಲ್ಲರನ್ನು ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಲೀಲಾರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಪ್ರಕರಣ 49/2014  ಕಲಂ 447, 504, 323, 324, 506, ಜೊತೆಗೆ 34 ಐ ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಅಜೆಕಾರು : ದಿನಾಂಕ 14/02/2014 ರಂದು ಬೆಳಿಗ್ಗೆ ಸುಮಾರು 7.00 ಗಂಟೆಗೆ ಶ್ರೀಮತಿ ಶಕುಂತಳಾ ಆಚಾರ್ತಿ(30), ಗಂಡ: ಸತೀಶ ಆಚಾರ್ಯ, ಕಾಳಿಕಾಂಬ ಕಾಲೋನಿ ಜಾರ್ಕಳ ಮುಂಡ್ಲಿ ಗ್ರಾಮ ಇವರು ಕಾರ್ಕಳ ತಾಲೂಕು ಜಾರ್ಕಳ ಮುಂಡ್ಲಿ ಗ್ರಾಮದ ಕಾಳಿಕಾಂಬ ಕಾಲೋನಿ ಎಂಬಲ್ಲಿಯ ತನ್ನ ಮನೆಯಲ್ಲಿ ಮನೆಕೆಲಸ ಮಾಡುತ್ತಿರುವಾಗ ಇವರ  ಪತಿ ಆರೋಪಿ  ಸತೀಶ ಆಚಾರ್ಯ ಎಂಬವರು  ಅವರಿಗೆ ಹಾಗೂ ಅವರ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಪ್ರತಿಯಾಗಿ  ಇವರು  ಆಕ್ಷೇಪಿಸಿದಾಗ ಕತ್ತಿಯಿಂದ ಹೊಡೆದು ಅವರ ಎಡ ಕೈಯ ಹೆಬ್ಬರಳಿಗೆ ರಕ್ತಗಾಯ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಶ್ರೀಮತಿ ಶಕುಂತಳಾರವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 07/14.ಕಲಂ 324, 504 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: