Friday, February 14, 2014

Daily Crimes Reported as On 14/02/2014 at 07:00 Hrs


ಅಪಘಾತ ಪ್ರಕರಣಗಳು 
  • ಕಾಪು:ದಿನಾಂಕ 13/02/2014 ರಂದು ಮದ್ಯಾಹ್ನ ಸುಮಾರು 3:30 ಗಂಟೆಗೆ ಇನ್ನಂಜೆ ಗ್ರಾಮದ ಗೋಳಿಕಟ್ಟೆ ಕ್ರಾಸ್ ರಸ್ತೆ ಬಳಿ ಟಾಟಾ ಮ್ಯಾಜಿಕ್ ಐರೀಸ್ ನಂಬ್ರ ಕೆಎ 20 ಸಿ 7257 ನೇದನ್ನು ಅದರ ಚಾಲಕ ಶೇಖರ, ಇನ್ನಂಜೆ ಕಡೆಯಿಂದ ಬಂಟಕಲ್ಲು ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೇ ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರಾದ ರತ್ನಾಕರ ಕುಲಾಲ್ (46) ತಂದೆ:ದಿವಂಗತ ಮೋಟ ಮೂಲ್ಯ, ವಾಸ:ಮಾತೃಛಾಯಾ, ಇನ್ನಂಜೆ ಗ್ರಾಮ ಉಡುಪಿರವರು ಸವಾರಿ ಮಾಡುತ್ತಿದ್ದ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ರತ್ನಾಕರ ಕುಲಾಲ್‌ರವರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ರಕ್ತ ಗಾಯಗೊಂಡು ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ರತ್ನಾಕರ ಕುಲಾಲ್‌ರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 22/2014 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೊಲ್ಲೂರು:ದಿನಾಂಕ 13/02/2014 ರಂದು ಸುಮಾರು 04:45 ಗಂಟೆಗೆ ಪಿರ್ಯಾದಿದಾರರಾದ ಜಯರಾಮ ಕೊಠಾರಿ (24) ತಂದೆ: ನಾರಾಯಣ ಕೊಠಾರಿ, ವಾಸ:ಬೈಲುಮನೆ, ಕೆರಾಡಿ ಗ್ರಾಮ, ಕುಂದಾಪುರರವರ ತಂದೆ ನಾರಾಯಣ ಕೊಠಾರಿ (54) ರವರು ಹೊಸೂರು ಕಡೆಯಿಂದ ಕೆರಾಡಿ ತನ್ನ ಮನೆಗೆ ಹೊಸೂರು ಹೆರಿಯ ಮಡಿವಾಳರ ಮನೆಯ ಹತ್ತಿರದ  ಹೈಸ್ಕೂಲ್ ಸಮೀಪದ ರಸ್ತೆಯ ಬದಿಯಲ್ಲಿ  ನಡೆದುಕೊಂಡು ಬರುತ್ತಿರುವಾಗ ಕೆರಾಡಿ ರಸ್ತೆಯಿಂದ ಹೊಸೂರಿಗೆ ಹೋಗುತ್ತಿದ್ದ ಜೆ.ಸಿ.ಬಿ ಕೆಎ 20 ಪಿ 7521 ರ ಚಾಲಕ ಜೆ.ಸಿ.ಬಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಜಯರಾಮ ಕೊಠಾರಿರವರ ತಂದೆ ನಾರಾಯಣ ಕೊಠಾರಿಯವರ ತಲೆಗೆ ಜೆ.ಸಿ.ಬಿ ಯ ಬಕೆಟ್ ಬಡಿದು ತೀವೃ ಸ್ವರೂಪದ ಗಾಯ ಉಂಟಾಗಿದ್ದು ಗಾಯಾಳುವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಜಯರಾಮ ಕೊಠಾರಿರವರು ಆಸ್ಪತ್ರೆಗೆ ಹೋಗಿ ನೋಡಲಾಗಿ ನಾರಾಯಣ ಕೊಠಾರಿರವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಅಪಘಾತಕ್ಕೆ ಜೆ.ಸಿ.ಬಿ ಚಾಲಕ ದೇವಿಪ್ರಸಾದ್‌ರವರ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಜಯರಾಮ ಕೊಠಾರಿರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 06/2014 ಕಲಂ 279,304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಹಲ್ಲೆ ಪ್ರಕರಣ 
  • ಕುಂದಾಪುರ:ದಿನಾಂಕ 13/02/2014 ರಂದು 15:30 ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಕೋಡಿ ಶೆಟ್ಟಿ ಮನೆ ಬಳಿಯ ಪಿರ್ಯಾದಿದಾರರಾದ ಶ್ರೀಮತಿ ಲೀಲಾ (38) ಗಂಡ:ಸಂಜೀವ ಖಾರ್ವಿ, ಶೆಟ್ಟಿಮನೆ, ಚಕ್ರೇಶ್ವರಿ ದೇವಸ್ಥಾನದ ಬಳಿ, ಕೋಡಿ ಕಸಬಾರವರ ಜಾಗಕ್ಕೆ  ಆಪಾದಿತರಾದ ನಾಗರಾಜ ಖಾರ್ವಿ ಹಾಗೂ ಆತನ ಹೆಂಡತಿ ಶಾರದ ಖಾರ್ವಿ ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ ಶ್ರೀಮತಿ ಲೀಲಾರವರಿಗೆ ಕೈಗಳಿಂದ ಮೈಗೆ ಕೈಗೆ ಹಾಗೂ ತೆಂಗಿನ ಮರದ ಹೆಡೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು “ನಿಮಗೆ ಈ ಜಾಗದಲ್ಲಿ ಅದಿಕಾರವಿಲ್ಲ, ನೀವು ನಿವಾಳಿಸಿಕೊಂಡು ಹೋಗಿ” ಎಂದು ಬೈದಾಗ ಶ್ರೀಮತಿ ಲೀಲಾರವರು ಜೋರಾಗಿ ಕೂಗಿಕೊಂಡಾಗ, ಹಲ್ಲೆಯಿಂದ ತಪ್ಪಿಸಲು ಶ್ರೀಮತಿ ಲೀಲಾರವರ ಗಂಡ ಸಂಜೀವ ಖಾರ್ವಿ ಬಂದಾಗ ಅವರನ್ನೂ ಸಹ ಆಪಾದಿತರು ದೂಡಿಹಾಕಿದ್ದು, ನಂತರ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ನಾಗರಾಜ ಖಾರ್ವಿ,ಶಾರದ ಖಾರ್ವಿ, ಲಕ್ಷ್ಮಣ ಖಾರ್ವಿ,ಮಂಜುನಾಥ ಖಾರ್ವಿರವರು ಓಡಿಸಿಕೊಂಡು ಬಂದು ಶ್ರೀಮತಿ ಲೀಲಾರವರ ಮನೆಯ ಅಂಗಳಕ್ಕೆ ಬಂದು ನಿಮ್ಮನ್ನೆಲ್ಲರನ್ನು ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಘಟನೆಗೆ ದಿನಾಂಕ 12/02/2014 ರಂದು ನಾಗರಾಜ ಖಾರ್ವಿರವರು ಶ್ರೀಮತಿ ಲೀಲಾರವರ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಬೋರ್‌ವೆಲ್‌ಗೆ ಶ್ರೀಮತಿ ಲೀಲಾರವರು ಲಿಖಿತ ಅನುಮತಿ ನೀಡಿದ್ದು, ದಿನಾಂಕ 13/02/2014 ರಂದು ಮಧ್ಯಾಹ್ನ ಆ ಅನುಮತಿ ಪತ್ರದ ಪ್ರತಿಯನ್ನು ಕೇಳಿದ್ದೆ ಈ ಪ್ರಕರಣಕ್ಕೆ ಕಾರಣವಾಗಿರುತ್ತದೆ. ಈ ಬಗ್ಗೆ ಶ್ರೀಮತಿ ಲೀಲಾರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 49/2014 ಕಲಂ 447, 504, 323, 324, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: