Thursday, February 13, 2014

Daily Crimes Reported as On 13/02/2014 at 19:30 Hrs


ಹಲ್ಲೆ ಪ್ರಕರಣ
  • ಕುಂದಾಪುರ:ಈ ದಿನ ದಿನಾಂಕ 13/02/2014 ರಂದು 14:00 ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಕೋಡಿ ಎಂಬಲ್ಲಿ ಆಪಾದಿತರಾದ ಸಂಜೀವ ಖಾರ್ವಿ ಹಾಗೂ ಆತನ ಹೆಂಡತಿ ನೀಲಾ ಖಾರ್ವಿ ಸೇರಿಕೊಂಡು ಪಿರ್ಯಾದಿದಾರರಾದ ಶಾರದ ಖಾರ್ವಿ (40) ಗಂಡ:ನಾಗರಾಜ ವಾಸ:ಕೋಡಿ, ಕಸಬಾ ಗ್ರಾಮ, ಕುಂದಾಪುರರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಮರದ ದೊಣ್ಣೆಯಿಂದ ಶಾರದ ಖಾರ್ವಿರವರಿಗೆ ಹೊಡೆದು, ತಪ್ಪಿಸಲು ಬಂದ ಶಾರದ ಖಾರ್ವಿರವರ ಗಂಡ ನಾಗರಾಜರವರಿಗೂ ಹೊಡೆದು ಇದು ನಮ್ಮ ಮನೆ, ಇದನ್ನು ನೀವು ಬಿಟ್ಟು ಹೊಗಬೇಕು, ಇಲ್ಲದಿದ್ದರೆ ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು ಅವಾಚ್ಯ ಶಬ್ದ ದಿಂದ ಬೈದು ಜೀವಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ಶಾರದ ಖಾರ್ವಿರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 48/2014 ಕಲಂ 448, 324, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: