Wednesday, February 19, 2014

Daily Crime Reports As On 19/02/2014 At 17:00 Hrs

ಅಪಘಾತ ಪ್ರಕರಣ

  • ಕಾಪು: ದಿನಾಂಕ 18-02-2014 ರಂದು ರಾತ್ರಿ ಸುಮಾರು 20:00 ರಿಂದ 20:15 ರ ವೇಳೆಯಲ್ಲಿ ರಾ.ಹೆ.66 ರಲ್ಲಿ ಏನಗುಡ್ಡ ಗ್ರಾಮದ ಕಟಪಾಡಿ ಹತ್ತಿರದ ಪೆಟ್ರೋಲ್‌  ಬಂಕ್‌ ಬಳಿ  ರಸ್ತೆಯ ಪೂರ್ವ ಬದಿಯಲ್ಲಿ ಸುಮಾರು 35 ರಿಂದ 45  ಪ್ರಾಯದ ಅಪರಿಚಿತ ವ್ಯಕ್ತಿಗೆ ಯಾವುದೋ ಅಪರಿಚಿತ ವಾಹನದ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯ ತನದಿಂದ ವಾಹನವನ್ನು ಚಲಾಯಿಸಿಕೊಂಡು ಡಿಕ್ಕಿ ಹೊಡೆದುದರಿಂದ ಅಪರಿಚಿತ ವ್ಯಕ್ತಿಯು ತೀವ್ರ ಸ್ವರೂಪ ಗಾಯಗೊಂಡ ಪರಿಣಾಮ ವ್ಯಕ್ತಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಜ್ಜರಕಾಡು ಉಡುಪಿಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಿರಣ್ ಕುಮಾರ್ ತಂದೆ: ಅಣ್ಣಪ್ಪ ಶೇರಿಗಾರ್ ವಾಸ: ಜೆ ಎ. ಎನ್ ನಗರ 4 ನೇ ಕ್ರಾಸ್ ಕಟಪಾಡಿ ಪೋಸ್ಟ್ ಉಡುಪಿ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ:25/2014 ಕಲಂ:279,304(A) ಐಪಿಸಿ ಮತ್ತು 134(ಎ) (ಬಿ) ಜೊತೆ 187 ಐಎಮ್ ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: