Saturday, February 08, 2014

Daily Crime Reports As On 08/02/2014 At 17:00 Hrs

ಅಪಘಾತ ಪ್ರಕರಣ: 
  • ಕುಂದಾಪುರ: ದಿನಾಂಕ 07/02/2014 ಸಮಯ  ರಾತ್ರಿ  11:15 ಗಂಟೆಗೆ ಕುಂದಾಪುರ ತಾಲೂಕಿನ ಕಸಬಾ  ಗ್ರಾಮದ  ಕೋಡಿ ಸರಕಾರಿ ಆಸ್ಪತ್ರೆಯ ಬಳಿ ರಸ್ತೆಯಲ್ಲಿ, ಆಪಾದಿತ ಪುಂಡಲೀಕ ಖಾರ್ವಿ  ಎಂಬುವರು  KA20 X 7696 ನೇ ಬೈಕ್ ನಲ್ಲಿ ಫಿರ್ಯಾದಿ ಸಂಜೀವ ಖಾರ್ವಿ(55) ತಂದೆ:ದಿ.ರಾಮ ಕೃಷ್ಣ  ಖಾರ್ವಿ  ವಾಸ: ತುಳಸಿ ನಿಲಯ, ಕೋಡಿ ಲೈಟ್ ಹೌಸ್ ಬಳಿ,ಕಸಬಾ ಗ್ರಾಮ  ಕುಂದಾಪುರ ಇವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕೋಡಿ ಚಕ್ರೆಶ್ವರಿ ದೇವಾಸ್ಥಾನ ದಿಂದ ಪಿರ್ಯಾದಿಯವರ ಮನೆ ಕಡೆಗೆ   ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದು,ರಸ್ತೆಯ ಹಂಪ್ ನ್ನು ನೋಡದೆ ನಿರ್ಲಕ್ಷತನದಿಂದ ಬ್ರೇಕ್ ಹಾಕಿದ  ಪರಿಣಾಮ ಬೈಕ್ ಸಮೇತ ರಸ್ತೆಗೆ   ಬಿದ್ದು ಫಿರ್ಯಾದಿದಾರರ ಬಲ ಭುಜಕ್ಕೆ, ಒಳ ನೋವು ಹಾಗೂ ಆಪಾದಿತನಿಗೆ  ಬಲಕಾಲಿಗೆ, ಮೈ,ಕೈಗೆ  ಒಳನೋವು  ಉಂಟಾಗಿರುತ್ತದೆ.  ಸಂಜೀವ ಖಾರ್ವಿಯವರ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2014 ಕಲಂ 279, 337 ಭಾ.ದ.ಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಇತರ ಪ್ರಕರಣ
  • ಹೆಬ್ರಿ: ಹೆಬ್ರಿ ಠಾಣಾ ಅಪರಾಧ ಕ್ರಮಾಂಕ: 27/12, ಕಲಂ: 279.337 ಐಪಿಸಿ &  ಕಲಂ: 134(ಎ)(ಬಿ) ಜೊತೆಗೆ 189 ಐಎಂವಿ ಕಾಯಿದೆ ಪ್ರಕರಣದ ಆರೋಪಿ ಸತೀಶ್‌ ಹೆಗ್ಡೆ (36) ತಂದೆ: ಶ್ಯಾಮ ಹೆಗ್ಡೆ ವಾಸ: ಉಪ್ಪಾರಬೆಟ್ಟು ಮನೆ, ಮಾಂಡಿಮೂರುಕೈ, ಮಡಾಮಕ್ಕಿ ಅಂಚೆ ಮತ್ತು ಗ್ರಾಮ,  ಕುಂದಾಪುರ ತಾಲೂಕು ಈತನು ಸದ್ರಿ ಪ್ರಕರಣದಲ್ಲಿ  ಮಾನ್ಯ ನ್ಯಾಯಾಲಯವು ಹೊರಡಿಸಿದ ಸಮನ್ಸ್ ಸ್ವೀಕರಿಸಿದ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆ ಬಳಿಕ  ಮಾನ್ಯ ನ್ಯಾಯಾಲಯವು ಈತನ ವಿರುದ್ದ 4 ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ಈತನ ಇರುವಿಕೆಯ ಬಗ್ಗೆ ಸರಿಯಾದ ಮಾಹಿತಿ ದೊರೆಯದ ಕಾರಣ ಸದ್ರಿ ವಾರಂಟ್‌‌ನ್ನು ಕಾರ್ಯಗತಗೊಳಿಸಿ ಆರೋಪಿ ಸತೀಶ್‌ ಹೆಗ್ಡೆಯನ್ನು  ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಅನಾನುಕೂಲವಾಗಿರುತ್ತದೆ. ಈ ಕಾರಣದಿಂದ  ದಿನಾಂಕ: 28.11.13 ಮಾನ್ಯ ನ್ಯಾಯಾಲಯವು  ಸದ್ರಿ ಪ್ರಕರಣವನ್ನು ಕಲಂ: 258 ಸಿಆರ್‌‌ಪಿಸಿ ಯಂತೆ ಮುಂದಿನ ವಿಚಾರಣೆಯನ್ನು ಸ್ಥಗಿತ ಗೊಳಿಸಿದ್ದು, ಈ ದಿನಾಂಕ: 08-02-14 ರಂದು ಹೆಬ್ರಿ ಠಾಣಾಧಿಕಾರಿಯವರಿಗೆ ದೊರೆತ ಖಚಿತ ಮಾಹಿತಿಯಂತೆ ಬೆಳಿಗ್ಗೆ 11:15 ಗಂಟೆಗೆ ಕಾರ್ಕಳ ತಾಲೂಕು ಕುಚ್ಚೂರು ಗ್ರಾಮದ ಕಾನ್ಬೆಟ್ಟು ಬಸ್‌ನಿಲ್ದಾಣದ ಬಳಿ ಸಿಬ್ಬಂದಿಯವರ ಸಹಾಯದಿಂದ ಆರೋಪಿ ಸತೀಶ್‌ ಹೆಗ್ಡೆಯನ್ನು  ಹಿಡಿದು ದಸ್ತಗಿರಿ ಮಾಡಿ  ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 10/2014, ಕಲಂ: 229(ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: