Friday, February 28, 2014

Daily Crime Reported on 28/02/2014 at 19:30 Hrsಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಕೆ.ಎಸ್‌.ಸಂತೋಷ್‌ ಕುಮಾರ್‌ (45) ತಂದೆ ದಿವಂಗತ ಜಿ.ಶ್ರೀನಿವಾಸ ವಾಸ: ಶ್ರೀ ಶಾರದ, ಚರ್ಚ್‌ ರೋಡ್‌, ಕುಂದಾಪುರ ಎಂಬವರ ಅಕ್ಕ ಮಾಲತಿ (55) ಎಂಬವರು ದಿನಾಂಕ 18/02/2014 ರಂದು 13:45 ಗಂಟೆಗೆ ಉಡುಪಿ ಕುಂಜಿಬೆಟ್ಟು ಹೋಂಡಾ ಶೋರೂಂ ಬಳಿ ಕುಂಜಿಬೆಟ್ಟುನಿಂದ ಲಾ ಕಾಲೇಜು ಬಳಿಯಿರುವ ಗುರು ಕೇಬಲ್‌ ವರ್ಕ್‌ ಕಛೇರಿಗೆ ನಡೆದು ಕೊಂಡು ಹೋಗುವಾಗ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಕಾರು ನಂಬ್ರ ಕೆಎ 20 ಡಿ 221 ನ್ನು ಅದರ ಚಾಲಕನಾದ ವಿಕಾಸ್‌ ಕಿಣಿ ರವರು ಅತಿವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಅವರ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಅಕ್ಕ ಮಾಲತಿಯವರು ರಸ್ತೆಗೆ ಬಿದ್ದು, ಅವರ ತಲೆಗೆ ರಕ್ತಗಾಯವಾಗಿದ್ದು ಸೊಂಟಕ್ಕೆ ಗುದ್ದಿದ ನೋವಾಗಿರುತ್ತದೆ. ಅಪಘಾತದ ದಿನ ಕಾರು ಚಾಲಕ ವಿಕಾಸ್‌ ಕಿಣಿ ರವರು ಆಸ್ಪತ್ರೆಯ ವೈದ್ಯಕೀಯ ಖರ್ಚನ್ನು ಭರಿಸಿವುದಾಗಿ ತಿಳಿಸಿ ದೂರು ಕೊಡುವುದು ಬೇಡವೆಂದು ತಿಳಿಸಿದ್ದು, ನಂತರ ವೈದ್ಯಕೀಯು ಖರ್ಚನ್ನು ಭರಿಸಿರುವುದಿಲ್ಲ ಎಂಬುದಾಗಿ ಕೆ.ಎಸ್‌.ಸಂತೋಷ್‌ ಕುಮಾರ್‌ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2014 ಕಲಂ 279, 337 ಐ.ಪಿ.ಸಿಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

  • ಕಾಪು: ದಿನಾಂಕ 25/02/2014 ರಂದು ರಾತ್ರಿ 9:00 ಗಂಟೆಯಿಂದ 26/02/2014ರ 05:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಮಣಿಪುರ ಗ್ರಾಮದ ಕೊಡಂಗಳ ಎಂಬಲ್ಲಿ ಪಿರ್ಯಾದಿದಾರರಾದ ಗಣಪತಿ ನಾಯಕ್(52) ತಂದೆ: ಉಪೇಂದ್ರ ನಾಯಕ್ ಎಂಬವರ ದನದ ಕೊಟ್ಟಿಗೆಯಿಂದ ಪಿರ್ಯಾದಿದಾರರ 5 ವರ್ಷ ಪ್ರಾಯದ ಜರ್ಸಿ ದನ ಮತ್ತು ಅದರ ಕರುವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು, ಕಳವಾದ ದನಗಳ ಒಟ್ಟು ಮೌಲ್ಯ ರೂಪಾಯಿ  20,000/- ಆಗಿರುತ್ತದೆ ಎಂಬುದಾಗಿ ಗಣಪತಿ ನಾಯಕ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2014 ಕಲಂ 379 ಐ.ಪಿ.ಸಿಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  
ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಪ್ರಕರಣ

  • ಗಂಗೊಳ್ಳಿ: ಪಿರ್ಯಾದುದಾರರಾದ ಶ್ಯಾಮಲಾ ವಾಸ ಆಚೆಬೆಟ್ಟು ಸೇನಾಪುರ ಗ್ರಾಮ, ಕುಂದಾಪುರ ತಾಲೂಕು ಎಂಬವರ ತಂದೆ ಶೀನ ದೇವಾಡಿಗ ಪ್ರಾಯ 60 ವರ್ಷ ರವರು ದಿನಾಂಕ 28/02/2014 ರಂದು 12:30 ಗಂಟೆಗೆ ಅವರ ಕುಟುಂಬದವರಾದ ಸದಿಯಮ್ಮನವರ ಮನೆಯ ತೆಂಗಿನ ಮರದ ಕಾಯಿ ಕೊಯ್ಯುತ್ತಿದ್ದಾಗ ಮರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿದೆ ಎಂಬುದಾಗಿ ಶ್ಯಾಮಲಾ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣ ಸಂಖ್ಯೆ 03/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: