Friday, February 28, 2014

Daily Crime Reported on 28/02/2014 at 17:00 Hrs



ಅಪಘಾತ ಪ್ರಕರಣಗಳು

  • ಕಾಪು: ದಿನಾಂಕ 26/02/2014 ರಂದು 14:30 ಗಂಟೆಗೆ ಉಡುಪಿ ತಾಲೂಕು ಮೂಳೂರು ಗ್ರಾಮದ ಮೂಳೂರು ಕಂದಾಯ ಇಲಾಖೆ ಕಛೇರಿ ಬಳಿ ರಾಹೆ 66ರಲ್ಲಿ ಪಿರ್ಯಾದಿದಾರರಾದ ಗಣಪತಿ ಭಟ್ (20) ತಂದೆ: ಲಕ್ಷ್ಮೀನಾರಾಯಣ ಭಟ್, ವಾಸ: ದಳಿ ಗ್ರಾಮ ಕೊಲ್ಲೂರು ಅಂಚೆ ಕುಂದಾಪುರ ತಾಲೂಕು ಎಂಬವರು ತನ್ನ ಕೆ ಎ 20 ಡಬ್ಲ್ಯೂ-3707ನೇ ಯಮಹಾ ಮೋಟಾರು ಸೈಕಲ್‌ನ್ನು ಮಂಗಳೂರಿನಿಂದ ಉಡುಪಿ ಕಡೆಗೆ ಸವಾರಿಮಾಡಿಕೊಂಡು ಬರುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆ.ಎ. 20 ಸಿ- 3788ನೇ ಟಾಟಾ ಏಸ್ ವಾಹನವನ್ನು ಅದರ ಚಾಲಕ ಶೈಲೇಶ್ ಎಂಬವರು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೊಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎದೆಗೆ, ಬಲಸೊಂಟಕ್ಕೆ, ಬಲಕಾಲಿಗೆ, ಬಲಕೈಗೆ ಗುದ್ದಿದ ಒಳನೋವುಂಟಾಗಿರುವುದಾಗಿದೆ ಎಂಬುದಾಗಿ ಗಣಪತಿ ಭಟ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2014 ಕಲಂ 279, 337 ಐ.ಪಿ.ಸಿಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ಶಿರ್ವಾ: ದಿನಾಂಕ 25.02.2014 ರಂದು ಪಿರ್ಯಾದಿದಾರರಾದ ವಾಸುದೇವ ನಾಯಕ್ ಪ್ರಾಯ 64 ವರ್ಷ ತಂದೆ: ಕೃಷ್ಣ ನಾಯಕ್ ವಾಸ: ಸಾನದಮನೆ ಕುದಿ ಗ್ರಾಮ ಉಡುಪಿ ತಾಲೂಕು ಎಂಬವರು ತನ್ನ ರಿಕ್ಷಾದಲ್ಲಿ ಮಣಿಪಾಲದಿಂದ ಶಂಕರಪುರಕ್ಕೆ ಬಾಡಿಗೆಗೆ ಬಂದು ವಾಪಾಸು ಹೋಗುವಾಗ ಶಂಕರಪುರ ಚರ್ಚಿನ ಎದುರು ತಲಪುವಾಗ ಸಮಯ 18.00 ಗಂಟೆಗೆ ಅವರ ಹಿಂದಿನಿಂದ ಅಂದರೆ ಶಿರ್ವಾ ಕಡೆಯಿಂದ ಕೆಎ 19.ಝಡ್ 5801 ನೇ ಕಾರು ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚರಂಡಿಗೆ ಬಿದ್ದು ಪಿರ್ಯಾದಿದಾರರಿಗೆ ಬಲ ಕೈಗೆ ಮತ್ತು ಎರಡೂ ಕಾಲುಗಳಿಗೆ ಜಖಂ ಆಗಿರುತ್ತದೆ ಎಂಬುದಾಗಿ ವಾಸುದೇವ ನಾಯಕ್ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2014 ಕಲಂ 279, 337 ಐ.ಪಿ.ಸಿಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಬಾವಿಕ ಮರಣ ಪ್ರಕರಣ


  • ಅಜೆಕಾರು: ಪಿರ್ಯಾದಿದಾರರಾದ ಜಯಕರ ಮೊಯಿಲಿ (31) ತಂದೆ ರಾಜು ಮೊಯಿಲಿ ವಾಸ ಕಡ್ದಳಿಕೆ ಮನೆ, ಹೆರ್ಮುಂಡೆ ಗ್ರಾಮ, ಕಾರ್ಕಳ ತಾಲೂಕು ಎಂಬವರ ತಂದೆ ರಾಜು ಮೊಯಿಲಿ (75) ರವರು ದಿನಾಂಕ 27/02/14 ರಂದು ಬೆಳಿಗ್ಗೆ 11:00 ಗಂಟೆಗೆ ಹೆರ್ಮುಂಡೆ ಗ್ರಾಮದ ತನ್ನ ಮನೆಯಿಂದ ಅಜೆಕಾರು ಪೇಟೆಗೆ ಬಂದವರು ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು ಹುಡುಕಾಡಿದಾಗ ದಿನಾಂಕ 28/02/14 ರಂದು ಬೆಳಿಗ್ಗೆ 08:00 ಗಂಟೆಗೆ ಹೆರ್ಮುಂಡೆ ಗ್ರಾಮದ ಎಣ್ಣೆಹೊಳೆ ನದಿಯ ಬಡ್ಜಾಲ್ ಗುಂಡಿ ಎಂಬಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿರುತ್ತದೆ. ಮೃತರು ವಾಪಾಸು ಬರುವಾಗ ಅಕಸ್ಮತ್ತಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಜಯಕರ ಮೊಯಿಲಿರವರು ನೀಡಿದ ದೂರಿನಂತೆ  ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣ ಸಂಖ್ಯೆ 05/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: