Tuesday, February 18, 2014

Daily Crime Reported on 18/02/2014 at 19:30 Hrs.

ಗಂಡಸು ಕಾಣೆ ಪ್ರಕರಣ
  • ಮಣಿಪಾಲ : ಫಿರ್ಯಾದುದಾರರ ಮುತ್ತು ರಾಜ್‌ ಇಟಗಿ (33) ತಂದೆ: ಮಲ್ಲಪ್ಪ ಇಟಗಿ, ವಾಸ: ಕೆಳಶಾಂತಿ ನಗರ, ಮನೆ ನಂಬ್ರ 4412 (ಡಿ), 80ನೇ ಬಡಗಬೆಟ್ಟು ಗ್ರಾಮ, ಮಣಿಪಾಲ, ಉಡುಪಿ ಜಿಲ್ಲೆ ಎಂಬವರ ತಂದೆ ಮಲ್ಲಪ್ಪ ಇಟಗಿ(59)ಮಣಿಪಾಲದ ಯುನಿಟ್-IV ನಲ್ಲಿ ಕೆಲಸದಲ್ಲಿದ್ದು, ದಿನಾಂಕ 15.02.2014 ರಂದು ಬೆಳಿಗ್ಗೆ 8:15 ಗಂಟೆಗೆ ಮನೆಯಿಂದ ಹೊರಟು ಕೆಲಸದ ಬಗ್ಗೆ ಯುನಿಟ್ –IV ಗೆ ಹಗಲು ಪಾಳೆಯ ಕರ್ತವ್ಯವನ್ನು ನಿರ್ವಹಿಸಲು ಬೆಳಿಗ್ಗೆ 8:30 ಗಂಟೆಗೆ ಹಾಜರಾಗಿ ಸಂಜೆ 6:00 ಗಂಟೆಯವರೆಗೆ ಯುನಿಟ್‌‌ -IV ನಲ್ಲಿ ರಿವೈಂಡರ್ ರೀಲ್ ಆಪರೇಟರ್ ಕೆಲಸವನ್ನು ಮಾಡಿಕೊಂಡು ಆ ದಿನ O.T ಯನ್ನು 8:00 ತನಕ ಕೆಲಸವನ್ನು ಮಾಡಿ ಅಲ್ಲಿಂದ ಹೊರ ಬಂದವರು ಈವರೆಗೆ ಮನೆಗೆ ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಈ ಬಗ್ಗೆ ಮುತ್ತು ರಾಜ್‌ ಇಟಗಿರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2014 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಕಾಣೆಯಾದವರ ಚಹರೆ:ಎತ್ತರ 5 ಅಡಿ 5 ಇಂಚು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಬಿಳಿ ತಲೆ ಕೂದಲು,ಕನ್ನಡ, ತುಳು, ಹಿಂದಿ ಭಾಷೆಯನ್ನು ಬಲ್ಲವರಾಗಿದ್ದು,ಧರಿಸಿರುವ ಬಟ್ಟೆಗಳು  ಆಕಾಶ ನೀಲಿ ಬಣ್ಣದ ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿರುತ್ತಾರೆ. ಬಲಗೆನ್ನೆಯಲ್ಲಿ ಗಾಯದ ಗುರುತು ಇರುತ್ತದೆ. ಮೇಲ್ಕಂಡ ಗಂಡಸು ಪತ್ತೆಯಾದಲ್ಲಿ ಮಣಿಪಾಲ ಠಾಣಾ ದೂರವಾಣಿ ಸಂಖ್ಯೆ 0820-2570328 ಅಥವಾ ಜಿಲ್ಲಾ ಕಛೇರಿ ಸಂಖ್ಯೆ 0820-2534777 ನ್ನು ಸಂರ್ಪಕಿಸಲು ಕೋರಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಮಲ್ಪೆ:  ದಿನಾಂಕ 13/02/2014 ರಂದು 11.00 ಗಂಟೆ ಸಮಯಕ್ಕೆ ಪಿರ್ಯಾದುದಾರರ ಶ್ರೀಮತಿ ರೇಖಾ ಪೈ ಗಂಡ ವೆಂಕಟ್ರಾಯ  ಪೈ ತೊಟ್ಟ್ಂ  ತೆಂಕನಿಡಿಯೂರು ಗ್ರಾಮ    ಎಂಬವರ ಜಾಗಕ್ಕೆ  ಅರುಣ ಸನಿಲ , ಆಲ್ವಿನ ,ಪ್ರಿಯಾ ಪರ್ನಾಂಡಿಸ ,ಗ್ರೇಸಿ ಡಿಸೋಜಾ , ಮತ್ತು ಸಂಪಿ ತಿಂಗಳಾಯನ ಅಕ್ಕನ ಮಗ ಮತ್ತು ಇತರರು ಅಕ್ರಮ ಪ್ರವೇಶ ಮಾಡಿ ಅವರ ಜಾಗದಲ್ಲಿದ್ದ ತೆಂಗು ,ಗಾಳಿ , ತಾಳೆ , ಹಾಗೂ ಇತರ ಮರಗಳನ್ನು ಜೇಸಿಬಿಯಿಂದ ತೆಗೆದು  ಹಾಕಿದ್ದು ಈ ಬಗ್ಗೆ ವಿಚಾರಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಗೆ ಬಂದರೆ ಜೇಸಿಬಿ ಅಡಿಗೆ ಹಾಕಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಸುಮಾರು 50,000 ರೂ ನಷ್ಟ ಉಂಟುಮಾಡಿರುವುದಾಗಿದೆ. ಈ ಬಗ್ಗೆ ಶ್ರೀಮತಿ ರೇಖಾ ಪೈ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2014 ಕಲಂ 143,147,447,427,504,506 ಜೊತೆಗೆ 149 ಐಪಿಸಿ ಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 


No comments: