Tuesday, February 18, 2014

Daily Crime Reported on 18/02/2014 at 17:00 Hrs.

 ಹುಡುಗಿ ಕಾಣೆ ಪ್ರಕರಣ
  • ಕಾಪು: ಪಿರ್ಯಾದುದಾರರಾದ ಗಿರಿಜಾ (50ವರ್ಷ) ಗಂಡ: ವಿಠಲ ಪೂಜಾರಿ ವಾಸ: ದೀಪ್ತಿ ನಿವಾಶ, ಪೆಟ್ರೋಲ್ ಬಂಕ್ ಬಳಿ ಕಾಪು ಪಡುರವರ ಮಗಳು ದೀಪ್ತಿ(18)ಎಂಬವರು ದಿನಾಂಕ 17.02.2014 ರಂದು ಬೆಳಿಗ್ಗೆ ಸುಮಾರು 09:30 ಗಂಟೆಗೆ ತಾನು ಕೆಲಸ ಮಾಡಿಕೊಂಡಿರುವ ಕಟಪಾಡಿಯ ಮಾನಸ ಬ್ಯುಟಿಪಾರ್ಲರ್‌ಗೆ ಕೆಲಸಕ್ಕೆ ಹೋಗುವುದಾಗಿ  ಮನೆಯಲ್ಲಿ ಹೇಳಿಹೋದವಳು ಕೆಲಸಕ್ಕೂ ಹೋಗದೆ ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಗಿರಿಜಾರವರು ನೀಡಿದ ದೂರಿನಂತೆ ಕಾಫು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2014 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು  
  • ಕುಂದಾಪುರ: ದಿನಾಂಕ 16/02/2014 ರಂದು ಕುಂದಾಪುರ ತಾಲೂಕು ಬಸ್ರೂರು  ಗ್ರಾಮದ  ಮಾರ್ಗೊಳ್ಳಿಯ  ದರ್ಗಾ  ಬಳಿ  ರಸ್ತೆಯಲ್ಲಿ   ಆಪಾದಿತ   ನೊಂದಣಿ  ನಂಬ್ರ  ಹೆಸರು  ತಿಳಿಯದ ಬೈಕಿನ ಸವಾರ ಬೈಕನ್ನು  ಅತೀವೇಗ ಹಾಗೂ  ಅಜಾಗರುಕತೆಯಿಂದ  ಚಲಾಯಿಸಿಕೊಂಡು ಬಂದು, ನಡೆದುಕೊಂಡು ಹೋಗುತ್ತಿದ್ದ  ಜಯರಾಮ ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ  ಅವರ ಸೊಂಟ, ಕೈ ಕಾಲುಗಳಿಗೆ ಒಳನೋವು ಉಂಟಾಗಿದ್ದು, ಅಪಘಾತಮಾಡಿದ  ಬೈಕಿನ ಸವಾರ ಬೈಕನ್ನು ಸ್ಥಳದಲ್ಲಿ ನಿಲ್ಲಿಸದೇ ಹೋಗಿರುತ್ತಾನೆ.ಗಾಯಾಳು ಜಯರಾಮ ಎಂಬವರನ್ನು ಚಿಕಿತ್ಸೆ  ಬಗ್ಗೆ ಕರೆದುಕೊಂಡು  ಹೋಗಿ  ಉಡುಪಿ ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ  ದಾಖಲು  ಮಾಡಿರುತ್ತಾರೆ ಈ ಬಗ್ಗೆ ಉಮೇಶ್ ಕುಮಾರ್  ತಂದೆ: ಗಣೇಶ ವಾಸ:ಚರ್ಚು ಹತ್ತಿರ, ಮಾರ್ಗೊಳ್ಳಿ  ಬಸ್ರೂರು  ಗ್ರಾಮ ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2014 ಕಲಂ 279,337 ಐಪಿಸಿ ಮತ್ತು 134(A&B) ಐಎಮ್.ವಿ ಕಾಯ್ದೆಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ: ದಿನಾಂಕ 17/02/2014 ರಂದು ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಉಡುಪಿ ತಾಲೂಕು ಕೋಟತಟ್ಟು ಗ್ರಾಮದ ಕದ್ರಿಕಟ್ಟು ಎಂಬಲ್ಲಿ ಆರೋಪಿಯು ಎ.ಪಿ.-24 ಟಿ.ಎ.-8859 ನೇ ಲಾರಿಯನ್ನು ಕೋಟ ಕಡೆಯಿಂದ ಪಡುಕೆರೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಾದಾಚಾರಿಗಳು ನಡೆದುಕೊಂಡು ಹೋಗುವ ದಾರಿಯಲ್ಲಿ ನರಸಿಂಹ ಪೂಜಾರಿಯವರ ಮನೆಯ ಬಳಿಯಿಂದ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ಶೇಖರ ತಿಂಗಳಾಯ ವರ್ಷ ತಂದೆ: ನರಸಿಂಹ ಮರಕಲ ವಾಸ: ಕದ್ರಿಕಟ್ಟು ಕೋಟತಟ್ಟು ಗ್ರಾಮ ಉಡುಪಿ ತಾಲೂಕುರವರ ತಂದೆ ನರಸಿಂಹ ಮರಕಲ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ನರಸಿಂಹ ಮರಕಲರವರಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದಾಗಿದೆ. ಈ ಬಗ್ಗೆ ಶೇಖರ ತಿಂಗಳಾಯರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 35/2014 ಕಲಂ 279,338  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹಿರಿಯಡ್ಕ: ದಿನಾಂಕ 16.2.2014 ರಂದು 10:00 ಗಂಟೆಗೆ ಉಡುಪಿ ತಾಲೂಕಿನ ಅತ್ರಾಡಿ ಗ್ರಾಮದ ಅತ್ರಾಡಿ ಪೇಟೆ ಸಮೀಪ , ಉಡುಪಿ-ಹಿರಿಯಡಕ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿ ರಾಜೇಶ್ ನಾಯ್ಕ(30) ತಂದೆ: ಮುದ್ದು ನಾಯ್ಕ, ವಾಸ: ಗಣೇಶ ನಿಲಯ, ಕುಯಿಲಾಡಿ ದರ್ಖಾಸು, ಹಿರಿಯಡಕ ಅಂಚೆ, ಬೊಮ್ಮರಬೆಟ್ಟು ಗ್ರಾಮ ಎಂಬವರ ಅಣ್ಣ ದಿನೇಶ್ ರವರು  ಹಿರಿಯಡಕದಿಂದ ಮಣಿಪಾಲಕ್ಕೆ ಮೋಟಾರು ಸೈಕಲ್ ನಂಬ್ರ KA20S4506 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಮಣಿಪಾಲ ಕಡೆಯಿಂದ ಹಿರಿಯಡಕ ಕಡೆಗೆ ಕಾರು ನಂಬ್ರ KA19 5497 ನೇದರ ಚಾಲಕನು ಅತಿವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನ ಬಲಕಾಲಿನ ಪಾದಕ್ಕೆ ಗಾಯವಾಗಿರುತ್ತದೆ. ಈ ಬಗ್ಗೆ ರಾಜೇಶ್ ನಾಯ್ಕರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2014 ಕಲಂ 279,337ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ: ದಿನಾಂಕ 16/02/2014 ರಂದು ಪಿರ್ಯಾದಿ ನಿತೀಶ್ ಆಚಾರ್ಯ ತಂದೆ: ರುದ್ರ ಆಚಾರ್ಯ ವಾಸ ಮಧುವನ ಅಲಾಡಿ ಗ್ರಾಮ ಉಡುಪಿ ತಾಲೂಕುರವರು ತನ್ನ ಕೆ.ಎ.20 ಇ.ಇ.-4225 ನೇ ಮೋಟಾರು ಸೈಕಲಿನಲ್ಲಿ ಕುಂದಾಪುರದಿಂದ ಕೋಟ ಕಡೆಗೆ ರಾ.ಹೆ.66 ರಲ್ಲಿ ಬರುತ್ತಾ ರಾತ್ರಿ 7:45 ಗಂಟೆ ಸುಮಾರಿಗೆ ಉಡುಪಿ ತಾಲೂಕು ಚಿತ್ರಪಾಡಿ ಗ್ರಾಮದ ಕೋಟ ಬೆಲ್ಲದ ಗಣಪತಿ ದೇವಸ್ಥಾನದ ಎದುರು ತಲುಪುವಾಗ್ಯೆ ಆರೋಪಿಯು ತನ್ನ ನಂಬ್ರ ಹಾಕದೇ ಇದ್ದ ಏಸ್ ಗೂಡ್ಸ್ ವಾಹನವನ್ನು ಎದುರಿನಿಂದ ಅಂದರೆ ಕೋಟ ಮೂರುಕೈ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಆತನ ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಿ ತೀರಾ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದಾಗಿದೆ. ಈ ಬಗ್ಗೆ  ನಿತೀಶ್ ಆಚಾರ್ಯರವರು  ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2014 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: