Saturday, February 15, 2014

Daily Crime Reported on 15/02/2014 at 19:30 Hrs.



ಗಂಡಸು ಕಾಣೆ ಪ್ರಕರಣ 
  • ಮಣಿಪಾಲ: ಪಿರ್ಯಾದುದಾರರಾದ ನಾರಾಯಣ ನಾಯ್ಕ (70) ತಂದೆ: ಬಾಳು ನಾಯ್ಕ  ವಾಸ: ಕಂಚಿನ ಬೈಲು, ಹಿರೇಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬವರ ಮಗ ವಿಜಯ ನಾಯ್ಕ (35) ದಿನಾಂಕ 13.02.2014 ರಂದು 14:30 ಗಂಟೆಗೆ ತಮ್ಮ ವಾಸದ ಮನೆಯಾದ ಉಡುಪಿ ತಾಲೂಕು ಹಿರೇಬೆಟ್ಟು ಗ್ರಾಮದ ಕಂಚಿನ ಬೈಲು ಎಂಬಲ್ಲಿ ಮನೆಯಿಂದ ನೀಲಿ ಬಣ್ಣದ ಲುಂಗಿ ಉಟ್ಟು, ಒಂದು ಕತ್ತಿ ತೆಗೆದುಕೊಂಡು ಹೋದವರು ಈವರೆಗೆ ಮನೆಗೆ ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಈ ಬಗ್ಗೆ ನಾರಾಯಣ ನಾಯ್ಕರವರು ನೀಡಿದ ದೂರಿನಂತೆ ಮಣಿಪಾಲ  ಠಾಣೆಯಲ್ಲಿ  ಅಪರಾಧ ಕ್ರಮಾಂಕ 21/2014 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಪಘಾತ ಪ್ರಕರಣ  
  • ಕೋಟ: ದಿನಾಂಕ 14/02/2014 ರಂದು ಪಿರ್ಯಾದಿ ನವಾಜ್ ಅಬ್ದುಲ್ ಮಜೀದ್ (35)ತಂದೆ: ಅಬ್ದುಲ್ ಮಜೀದ್ ವಾಸ: ಮದೀನಾ ಮಂಜೀಲ್ ಫೆರಿ ರಸ್ತೆ ಕುಂದಾಪುರರವರು ಕೆ.ಎ.20 ಪಿ-5288 ನೇ ಶಿಪ್ಟ್ ಕಾರಿನಲ್ಲಿ ರಾ.ಹೆ. 66 ರಲ್ಲಿ ಕುಂದಾಪುರದಿಂದ ಸಾಸ್ತಾನಕ್ಕೆ ಬರುತ್ತಾ ರಾತ್ರಿ 9:45 ಗಂಟೆಗೆ ಉಡುಪಿ ತಾಲೂಕು ಚಿತ್ರಪಾಡಿ ಗ್ರಾಮದ ಹೇರ್ಳೆ ಟ್ರೇಡರ್ಸ್ ಬಳಿ ತಲುಪುವಾಗ್ಯೆ ಉಡುಪಿ ಕಡೆಯಿಂದ ಆರೋಪಿಯು ಕೆ.ಎ.25 ಸಿ-1227 ನೇ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಲ್ಲಿರುವ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ತೀರಾ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂ ಆಗಿದ್ದು ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಖಾಲಿದ್ ಹಾಗೂ ಜೈಬುನ್ನೀಸಾ ಎಂಬವರಿಗೆ ಸಾದಾ ಸ್ವರೂಪದ ರಕ್ತಗಾಯವಾಗಿದ್ದಾಗಿದೆ. ಈ ಬಗ್ಗೆ ನವಾಜ್ ಅಬ್ದುಲ್ ಮಜೀದ್ ರವರು  ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2014 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಇತರೆ ಪ್ರಕರಣ  
  • ಹಿರಿಯಡ್ಕ: ದಿನಾಂಕ 15.2.2014 ರಂದು 10:15 ಗಂಟೆಗೆ ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಹಿರಿಯಡಕ ಪೇಟೆಯಲ್ಲಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆಯವರ ಶಾಸಕರ ಕಛೇರಿಯ ಎದುರು ಭಾಗಕ್ಕೆ ಸುಮಾರು 6 ಜನ ಆಪಾದಿತರುಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಕೂಡಿಕೊಂಡು ಬಂದು ಮೆಟ್ಟಲಿನ ಸಮೀಪ ತೂಗು ಹಾಕಿದ ಕಛೇರಿಯ ನಾಮ ಫಲಕಕ್ಕೆ ಕಲ್ಲಿನಿಂದ ಹೊಡೆದು, ಕಾಲಿನಿಂದ ತುಳಿದು ಹಾನಿಗೊಳಿಸಿದ್ದಲ್ಲದೆ, ಕಛೇರಿಯ ಷಟರನ್ನು ಕೆಳಗೆ ಎಳೆದು, ಷಟರಿಗೂ ತುಳಿದು,ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ.ಈ ಬಗ್ಗೆ ಪ್ರಶಾಂತ ಕುಮಾರ್, (26), ತಂದೆ: ದಿ. ಗೋಪಾಲ ಪೂಜಾರಿ, ವಾಸ: ಹಿರಿಯಡಕ ಮಾರ್ಕೆಟ್ ಸಮೀಪ, ಹಿರಿಯಡಕ ಅಂಚೆ, ಬೊಮ್ಮರಬೆಟ್ಟು ಗ್ರಾಮ, ಉಡುಪಿ ಜಿಲ್ಲೆ.ರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2014 ಕಲಂ 143,147,427, 504 ಜೊತೆಗೆ 149ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ: 15/02/2014 ರಂದು ಬೆಳಿಗ್ಗೆ 10.30 ಗಂಟೆ ಸಮಯಕ್ಕೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್ಸುನಿಲ್ದಾಣದ ಬಳಿ  ಪಂಚಾಯತ್ ಕಟ್ಟಡದಲ್ಲಿ ಇರುವ ಫಿರ್ಯಾದಿ ಯಾಸೀನ್ (23) ತಂದೆ: ಭಾಷಾ ಸಾಹೇಬ್ , ವಾಶ: ಬೈಲಕೆರೆ, ಮಲ್ಪೆ, ತೆಂಕನಿಡಿಯೂರ್ ಗ್ರಾಮ, ಉಡುಪಿ ತಾಲೂಕುಇವರ ಶಾಪಿಂಗ್ ಮಾಲ್ ಎಂಬ ಅಂಗಡಿ ಬಳಿ ಸುಮಾರು 20 ಜನ ಆರೋಪಿಗಳು ಅಕ್ರಮಕೂಟ ಸೇರಿ ಅಂಗಡಿಯನ್ನು ಬಂದ್ ಮಾಡಲು ಹೇಳಿದಾಗ ಒಪ್ಪದ ಕಾರಣ ಆರೋಪಿಗಳು ಫಿರ್ಯಾದಿದಾರರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ಧಗಳಿಂದ ಬೈದು ಅಂಗಡಿಯ ಗ್ಲಾಸ್ ಒಡೆದು ಬಟ್ಟೆಯನ್ನು ಎಳೆದು ಹಾಕಿ ಬೆಲ್ಟ್ ಸ್ಟ್ಯಾಂಡ್ ದೂಡಿ, ಸುಮಾರು ರೂ. 30,000/- ನಷ್ಟವುಂಟು ಮಾಡಿ, ಸೇಲ್ಸ್ ಮ್ಯಾನ್ ತೌಸಿಪ್ ಎಂಬವರನ್ನು ಹಿಡಿದು ಕೈಯಿಂದ ಹೊಡೆದು ನೋವನ್ನುಂಟು ಮಾಡಿರುತ್ತಾರೆ.ಈ ಬಗ್ಗೆ  ಯಾಸೀನ್ ರವರ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/14 ಕಲಂ: 143 147 448 504 427 323 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ 15/02/2014 ರಂದು ಹಿರಿಯಡ್ಕ ಪೊಲೀಸ್ ಠಾಣಾ ಅಕ್ರ 02/2014 ಕಲಂ: 379.384.395 ಜೊತೆಗೆ 511 ಐಪಿಸಿ ಪ್ರಕರಣದಲ್ಲಿ ಆಪಾದಿತ ದಿನೇಶ್ ಮೆಂಡನ್ ರವರನ್ನು ದಸ್ತಗಿರಿ ಮಾಡಿದ್ದನ್ನು ವಿರೋಧಿಸಿ  ಹಿಂದೂ ಸಂಘಟನೆಗಳು ಬ್ರಹ್ಮಾವರ ಬಂದ್ ಗೆ ಕರೆ ನೀಡಿದ್ದು ಈ ಸಂಬಂಧ ಗಿರೀಶ್ ಕುಮಾರ್ ಎಸ್ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪು ಕೆಎ-20-ಜಿ-182 ರಲ್ಲಿ ಠಾಣಾ ವ್ಯಾಪ್ತಿಯಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ  ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಸುದೇಶ್ ಟ್ರಾನ್ಸ್ ಪೋರ್ಟ್ ಕಚೇರಿ ಬಳಿ ಒಂದು ಗುಂಪು ಟ್ರಾನ್ಸ್ ಪೋರ್ಟ್ ಕಚೇರಿಗೆ ನುಗ್ಗಿ ಗಲಾಟೆ ಮಾಡುವುದನ್ನು ನೋಡಿ ನಾನು ಹಾಗೂ ಸಿಬ್ಬಂದಿಯವರು ಸದ್ರಿ ಗುಂಪನ್ನು ಚದುರಿಸಿ ಅಲ್ಲಿಯೇ ಸಮೀಪದಲ್ಲಿ ನಿಂತಿದ್ದ ನಮ್ಮ ಜೀಪಿನ ಬಳಿಗೆ ಸುಮಾರು  20 ಜನರು ಬಂದು  ನ್ಯಾಯ ಬದ್ದವಾಗಿ ಕಾರ್ಯ ನಿರ್ವಹಿಸುತ್ತಿದ್ದ ನಮಗೆ ಕರ್ತವ್ಯ ನಿರ್ವಹಿಸಲು ತಡೆ ಒಡ್ಡಿ ನಮ್ಮ ಜೀಪು ಮುಂದೆ ಚಲಿಸದಂತೆ ತಡೆದು ದಿನೇಶ್ ಮೆಂಡನ್ ನ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂತೆಗೆದು ಕೊಳ್ಳಬೇಕು ಇಲ್ಲವಾದರೆ ನಾವು ಪ್ರತಿಭಟನೆ ಮುಂದುವರೆಸುತ್ತೇವೆ  ಧಿಕ್ಕಾರ  ಎಂದು ಘೋಷಣೆ ಕೂಗಿ ಅವರ ಪೈಕಿ ಒಬ್ಬಾತನು ನಮ್ಮ ಜೀಪಿಗೆ ಕಲ್ಲು ಬಿಸಾಡಿ ಜೀಪಿನ ಹಿಂದಿನ ಗ್ಲಾಸ್ ನ್ನು ಜಖಂಗೊಳಿಸಿ ಇಲಾಖೆಗೆ ಇದರಿಂದ ಸುಮಾರು ರೂ 5,000 ನಷ್ಟ ಉಂಟುಮಾಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಪಿಎಸ್ಐ ಗಿರೀಶ್ ಕುಮಾರ್ ರವರು ದೂರು  ದಾಖಲಿಸಿದ್ದು ಅದರಂತೆ ಅಪರಾಧ ಕ್ರಮಾಂಕ 31/14  ಕಲಂ: 143 147, 341, 353, 427,ಜೊತೆಗೆ 149 ಐಪಿಸಿ ಮತ್ತು prevention of damage to public property act 1984 u/s 3 ರಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: