Wednesday, February 12, 2014

Daily Crime Reported on 12/02/2014 at 07:00 Hrs.

ಅಪಘಾತ ಪ್ರಕರಣ
  • ಬೈಂದೂರು: ಫಿರ್ಯಾದಿ ಹಿಸಾಮುದ್ದೀನ್,(32) ತಂದೆ:ಹಯಾತ್ ಬೇಗ್, ವಾಸ: ಬುಖಾರಿ ಕಾಲೋನಿ ಶಿರೂರು  ಗ್ರಾಮ, ಕುಂದಾಪುರ ತಾಲೂಕುರವರು ದಿನಾಂಕ 11/02/2014 ರಂದು ಮಧ್ಯಾಹ್ನ 3.30 ಗಂಟೆಗೆ  ಕುಂದಾಪುರ ತಾಲ್ಲೂಕ್ ಶಿರೂರು ಗ್ರಾಮದ ಶಿರೂರು ಕೆಳಪೇಟೆ ರಿಕ್ಷಾ ನಿಲ್ದಾಣದಲ್ಲಿರುವಾಗ  ಕೆಎ07ಜಿ425 ನೇ 108ನೇ ಅಂಬುಲೆನ್ಸ್ ನ್ನು ಅದರ ಚಾಲಕನು ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ರಾ.ಹೆ 66 ರ ಡಾಂಬಾರು ರಸ್ತೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತನ್ನ ಎದರುಗಡೆ ರಾ.ಹೆ 66 ರ ಡಾಂಬಾರು ರಸ್ತೆಯಲ್ಲಿ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಇಬ್ಬರು ವ್ಯಕ್ತಿಗಳು ಸವಾರಿ ಮಾಡಿಕೊಂಡಿದ್ದ  ಮೋಟಾರು ಸೈಕಲ್ ನಂಬ್ರ ಕೆಎ20ಇಇ6654 ನೇದಕ್ಕೆ  ಹಿಂದಿನಿಂದ ಡಿಕ್ಕಿ ಹೊಡೆದು ನಂತರ ಅಂಬುಲೆನ್ಸ್ ಚಾಲಕನು ಅದೇ ವೇಗದಲ್ಲಿ ತೀರಾ ಪಶ್ಚಿಮಕ್ಕೆ ಚಲಾಯಿಸಿ ಆಟೋ ರಿಕ್ಷಾ ನಂಬ್ರ ಕೆ.ಎ20 ಬಿ3779 ಹಾಗೂ  ಗೂಡ್ಸ್ ರಿಕ್ಷಾನಂಬ್ರ ಕೆಎ207152 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ನಂಬ್ರ ಕೆಎ20ಬಿ3779  ಗೂಡ್ಸ್ ರಿಕ್ಷಾನಂಬ್ರ ಕೆ.ಎ 20ಎ.7152 ನೇದು ಜಖಂಗೊಂಡಿದ್ದು ಆಟೋರಿಕ್ಷಾದ ಒಳಗಡೆ ಇದ್ದ ಮಹಮದ್ ಗೌಸ್ ಎಂಬವವರಿಗೆ ಕೈಗೆ, ಕಾಲಿಗೆ ರಕ್ತ ಗಾಯವಾಗಿದ್ದು, ಮೋಟಾರ್ ಸೈಕಲ್ ನಲ್ಲಿ ಸವಾರ ರಾಗಿದ್ದ ಓರ್ವ ವ್ಯಕ್ತಿಯು ಮೃತಪಟ್ಟಿದ್ದು ಇನ್ನೋರ್ವ ವ್ಯಕ್ತಿಗೆ ಗಂಭೀರ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಹಿಸಾಮುದ್ದೀನ್ ರವರು ಅಪಘಾತದ ಬಗ್ಗೆ  ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2014 ಕಲಂ 279, 338, 304(ಎ) ಐ.ಪಿ.ಸಿ  ಜೊತೆಗೆ 134 (&ಬಿ) ಐ.ಎಮ್.ವಿ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಜೀವ ಬೆದರಿಕೆ ಪ್ರಕರಣ
  • ಬೈಂದೂರು: ದಿನಾಂಕ 24/01/2014 ರಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಫಿರ್ಯಾದಿ ಎನ್.ವಾಸುದೇವ ಪ್ರಭು (54), ತಂದೆ-ರಾಧಾಕೃಷ್ಣ ಪ್ರಭು ವಾಸ-ದಾಮೋದರ್ ನಿಲಯ, ನಾಯ್ಕನಕಟ್ಟೆಕೆರ್ಗಾಲ್ ಗ್ರಾಮ, ಕುಂದಾಪುರ ತಾಲೂಕು ರವರ ಮನೆಗೆ ಬಂದು ತಾವು ಸಿ.ಓ.ಡಿ ಪೊಲೀಸ್ ಸಿಬ್ಬಂದಿಗಳೆಂದು ಅವರಲ್ಲಿ ಓರ್ವನ ಹೆಸರು  ಮಹಾಬಲೇಶ್ವರ ಎಂದು ತಿಳಿಸಿದ್ದು, ನಂತರ  ಮಂಗಳೂರು ಜೈಲಿನಲ್ಲಿರುವ ಲತೀಫ್ ಎಂಬಾತನಿಗೆ ಜಾಮೀನು ನೀಡಲು 1 ಲಕ್ಷ ರೂಪಾಯಿ, 1 ಎಕರೆ ಜಾಗದ ಪಹಣಿ ಪತ್ರವನ್ನು ಹಾಗೂ ಇಬ್ಬರು ಸರ್ಕಾರಿ ನೌಕರರ ಷ್ಯೂರಿಟಿಯನ್ನು ತಯಾರಿ ಮಾಡುವಂತೆ ಫಿರ್ಯಾದಿದಾರರಿಗೆ ಹೇಳಿದ್ದು, ಫಿರ್ಯಾದಿದಾರರು ನನಗೂ ಮತ್ತು ,ಲತೀಫ್ ಗೂ ಯಾವುದೇ ಸಂಬಂಧವಿರುವುದಿಲ್ಲ, ನಾನೇಕೆ ಜಾಮೀನು ನೀಡಬೇಕು ಎಂದು ತಿಳಿಸಿದಾಗ,ಆರೋಪಿ ಮಹಾಬಲೇಶ್ವರನು ಹಣ ಮತ್ತು ಜಾಮೀನು ನೀಡದಿದ್ದರೆ ನಿಮ್ಮನ್ನು ಈ ಕೇಸಿನಲ್ಲಿ ಸೇರಿಸುವುದಾಗಿ ತಿಳಿಸಿದ್ದು  ನಂತರ ದಿನಾಂಕ 11/02/2014 ರಂದು ಮದ್ಯಾಹ್ನ 2.05 ಗಂಟೆಗೆ ಫಿರ್ಯಾದಿದಾರರಿಗೆ ಕರೆ ಮಾಡಿ  1 ಲಕ್ಷ ರೂಪಾಯಿ, 1 ಎಕರೆ ಜಾಗದ ಪಹಣಿ ಪತ್ರವನ್ನು ರೆಡಿ ಮಾಡಿದ್ದೀರಾ ಎಂದು ಕೇಳಿದ್ದು, ನಂತರ  ಸಂಜೆ 4.30 ಗಂಟೆಗೆ ಆರೋಪಿಯು ತನ್ನ ಮೋಟಾರು ಬೈಕ್ ನಲ್ಲಿ ಫಿರ್ಯಾದಿದಾರರ ಮನೆಗೆ ಬಂದು ಫಿರ್ಯಾದಿದಾರರ ತಮ್ಮ ಮತ್ತು ಅವರ ಹೆಂಡತಿಯನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನೀವು ನನಗೆ ಹಣ ನೀಡದಿದ್ದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ವಾಸುದೇವ ಪ್ರಭುರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2014 ಕಲಂ 384, 506 ,504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬೈಂದೂರು: ಫಿರ್ಯಾದಿ ಶ್ರೀಮತಿ ಲಕ್ಷ್ಮೀ (55), ಗಂಡ-ಗೋಪಾಲ ಕೆ ಶೇರುಗಾರ್ ವಾಸ-ಗುಡೇಮನೆ, ಪಡುವರಿ ಗ್ರಾಮಕುಂದಾಪುರ ತಾಲೂಕು  ಎಂಬವರ  ಮಗಳು ನಾಗಶ್ರೀ ಜಿ ಕೆ(25) ದಿನಾಂಕ 11-02-2014 ರಂದು ಮಧ್ಯಾಹ್ನ ಸುಮಾರು 01-30 ಗಂಟೆಗೆ ತನ್ನ ಮನೆಯಲ್ಲಿ ಮನೆಯವರೊಂದಿಗೆ ಕುಳಿತು ಊಟ ಮಾಡುತ್ತಿರುವಾಗ ಆಕೆಯು ತಿಂದ ಅನ್ನವು ಅವಳ ಗಂಟಲಿಗೆ ಸಿಲುಕಿ ಒಮ್ಮೆಲೇ ಆಕೆಯು ತನ್ನ ಎದೆಯನ್ನು ಒತ್ತಿಕೊಂಡು ಜೋರಾಗಿ ಕೆಮ್ಮಿ ನೆಲದಲ್ಲಿ ಹೊರಳಾಡುತ್ತಿದ್ದವರನ್ನು ಫಿರ್ಯಾದಿದಾರರು ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮಧ್ಯಾಹ್ನ ಸುಮಾರು 03-15 ಗಂಟೆಗೆ ಆಕೆಯು ಮೃತಪಟ್ಟಿರುತ್ತಾರೆ.ಈ ಬಗ್ಗೆ ಶ್ರೀಮತಿ ಲಕ್ಷ್ಮೀರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 09/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: