Tuesday, February 11, 2014

Daily Crime Reported on 11/02/2014 at 19:30 Hrs.

ಗಂಡಸು ಕಾಣೆ ಪ್ರಕರಣ

  • ದಿನಾಂಕ. 11/02/2014 ರಂದು 17:30 ಗಂಟೆಗೆ ಫಿರ್ಯಾದಿ ಶ್ರೀಮತಿ ಶೈಲಾ, ಗಂಡ: ಶ್ರೀಧರ ಮೇಸ್ತ, ಬಂಟ್ವಾಡಿ  ಪೊಸ್ಟ್‌‌, ಸೇನಾಪುರ ಗ್ರಾಮ, ಕುಂದಾಪುರ ತಾಲುಕುರವರ ಗಂಡ ಶ್ರೀಧರ ಮೇಸ್ತ(29ವರ್ಷ)ರವರೊಂದಿಗೆ ಕುಂದಾಪುರ ತಾಲೂಕು ಸೇನಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು. ದಿನಾಂಕ 05/01/2014 ರಂದು ಪಿರ್ಯಾದದಾರರ ಗಂಡ ಶ್ರೀಧರ ಮೇಸ್ತರವರು ಕೆಲಸಕ್ಕೆಂದು ಹೊರಗೆ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಶ್ರೀಮತಿ ಶ್ರೀಮತಿ ಶೈಲಾರವರು ನೀಡಿದ ಪಿರ್ಯಾದಿಯಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2014  ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದವರ ಚಹರೆ: ಸುಮಾರು 5.10 ಅಡಿ ಎತ್ತರವಿದ್ದು, ಸಾಧಾರಣ ಶರೀರ, ಗೋಧಿ ಮೈ ಬಣ್ಣ ಹೊಂದಿದ್ದು, ಶರ್ಟ್‌-ಪ್ಯಾಂಟ್‌  ಬಟ್ಟೆಯನ್ನು ಧರಿಸಿರುತ್ತಾರೆ. ಕನ್ನಡ,ಕೊಂಕಣಿ ಭಾಷೆಯನ್ನು ಬಲ್ಲವರಾಗಿರುತ್ತಾರೆ. ಮೇಲ್ಕಂಡ ಗಂಡಸು ಪತ್ತೆಯಾದಲ್ಲಿ ಗಂಗೊಳ್ಳಿ ಠಾಣಾ ದೂರವಾಣಿ ಸಂಖ್ಯೆ  ಅಥವಾ ಪೊಲೀಸ್‌ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತರವರಿಗೆ ಮಾಹಿತಿ ನೀಡುವಂತೆ ಕೋರಿಕೆ.(ದೂರವಾಣಿ ನಂ 08254-265333 & 08254-100).0820-2537999,2520329ಅಥವಾ ಜಿಲ್ಲಾ ಕಛೇರಿ ಸಂಖ್ಯೆ 0820-2534777 ನ್ನು ಸಂರ್ಪಕಿಸಲು ಕೋರಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಪಿರ್ಯಾದಿ ಪ್ರಮೋದ ಪ್ರಜಾಪತಿ, ತಂದೆ: ನಾರಯಣ ಲಾಲ್‌ , ವಾಸ : ಹರ್ಷವರ್ಧನ ಆಪಾರ್ಟ್‌ಮೆಂಟ್‌, ಫ್ಲಾಟ್‌ ನಂಬ್ರ 003, ಕುಂಜಿಬೆಟ್ಟು ಉಡುಪಿರವರ  ತಮ್ಮ ನಿತೇಶ್‌ ಪ್ರಜಾಪತಿ(21)ಎಂಬವನು ದಿನಾಂಕ 04-02-14ರಂದು ಸಂಜೆಯ ವೇಳೆಗೆ ಮನೆಯ ಯಾವುದೋ ವಿಷ ಪದಾರ್ಥವನ್ನು ಚಪಾತಿಯೊಂದಿಗೆ ಸೇವಿಸಿ ತಿಂದು ವಾಂತಿ ಮಾಡುತ್ತಿದ್ದವನನ್ನು ನೋಡಿ ಪಿರ್ಯಾದಿದಾರರು ಮತ್ತು ಅವರ ತಂದೆಯವರು ಒಂದು ವಾಹನದಲ್ಲಿ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಲಾಗಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿ, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆತನು ಈ ದಿನ ದಿನಾಂಕ 11-02-14ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ.ಈ ಬಗ್ಗೆ ಪ್ರಮೋದ ಪ್ರಜಾಪತಿರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 12/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಕುಂದಾಪುರ: ದಿನಾಂಕ 10/02/2014 ರಂದು ಫಿರ್ಯಾದಿ ಹರೀಶ(23) ತಂದೆ: ಸುರೇಶ ದೇವಾಡಿಗ ವಾಸ: ಬಿಸಿ ರಸ್ತೆ ವಡೆರಹೋಬಳಿ ಗ್ರಾಮ ಎಂಬವರು ಕುಂದಾಪುರ ಶಾಸ್ರೀ ಪಾರ್ಕ ಹತ್ತಿರ ಇರುವ ಕರ್ನಾ ಟಕ ಬ್ಯಾಂಕ್ ಎಟಿಎಮ್ ಹತ್ತಿರ ಹಣವನ್ನು  ಡ್ರಾ ಮಾಡಲು ತೆರಳಿದ್ದಾಗ ರಾತ್ರಿ 10:45 ಸಮಯಕ್ಕೆ ತನಗೆ ಪರಿಚಯವಿರುವ ಗೌತಮ್ ,ಅಲೋಕ್ ಮತ್ತು ರಮೇಶರವರುಗಳು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೈಯಿಂದ ತಲೆಗೆ ,ಎದೆಗೆ ಹೊಡೆದು ಕೈಯನ್ನು ತಿರುವಿ ಕೆಳಕ್ಕೆ ಕೆಡವಿ ಕಾಲಿನಿಂದ ಮುಖಕ್ಕೆ ಆಪಾದಿತರೆಲ್ಲರೂ ಸೇರಿ ತುಳಿದಿದ್ದಲ್ಲದೇ ,ಆಪಾದಿತ ಗೌತಮನು ಅಲ್ಲಿಯೇ ಹತ್ತಿರದಲ್ಲಿದ್ದ ಒಂದು ಕಲ್ಲಿನಿಂದ ಫಿರ್ಯಾದಿದಾರರ ಬಲ ಕಾಲಿಗೆ ಹೊಡೆದಿದ್ದು ಆ ಸಮಯ ಫಿರ್ಯಾದಿದಾರರು ಬೊಬ್ಬೆ ಹಾಕಿದಾಗ ಅಲ್ಲಿಗೆ ಬಂದ ಪ್ರಶಾಂತ ಮತ್ತು ವಿಮಲೇಶರವರು ಫಿರ್ಯಾದಿದಾರರಿಗೆ  ಹೊಡೆಯುತ್ತಿದ್ದನ್ನು ತಪ್ಪಿಸಿದಾಗ ಆಪಾದಿತರೆಲ್ಲರೂ ಅಲ್ಲಿಂದ ಹೋಗುತ್ತಾ ಕೈಯಲ್ಲಿದ್ದ ಕಲ್ಲನ್ನು ಅಲ್ಲಯೇ ಹತ್ತಿರ ಎಸೆದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಹರೀಶರವರು ಆರೋಪಿಗಳ ವಿರುದ್ಧ  ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 46/2014 ಕಲಂ 341.323.324.504.506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: