Tuesday, February 11, 2014

Daily Crime Reported on 11/02/2014 at 17:00 Hrs.



ಅಪಘಾತ ಪ್ರಕರಣ 
  • ಕಾರ್ಕಳ ನಗರ: ದಿನಾಂಕ;10/02/2014 ರಂದು ಮಧ್ಯಾಹ್ನ 12;30 ಗಂಟೆ ಸಮಯಕ್ಕೆ  ಕಾರ್ಕಳ ಕಸಬಾ ಗ್ರಾಮದ ಟಾಪ್ ಇನ್ ಟೌನ್ ಹೋಟೆಲ್ ಮುಂಭಾಗದಲ್ಲಿ ಆರೋಪಿ  ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ 20 ವಿ 7295ನೇ ದನ್ನು ಜೋಡುರಸ್ತೆ ಕಡೆಯಿಂದ ಸಾಲ್ಮರದ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹತೋಟಿ ತಪ್ಪಿ ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ  ಬಿದ್ದು ಗಂಭೀರ ಗಾಯಗೊಂಡವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ  ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಎಂಬುದಾಗಿ ಲೂಯಿಸ್ ಗೋಮ್ಸ್ (58), ತಂದೆ:  ದಿವಂಗತ ಲಿಯೋ ಗೋಮ್ಸ್  , ವಾಸ:  ಕಾರ್ಕಳ ತಾಲೂಕು ಕಛೇರಿ ಬಳಿ ಕಸಬಾ ಗ್ರಾಮ ಕಾರ್ಕಳರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/14 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಇತರೆ ಪ್ರಕರಣಗಳು   
  • ಬೈಂದೂರು: ದಿನಾಂಕ 10-02-2014 ರಂದು ಬೈಂದೂರಿನ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದ್ದಾಗ ಮಧ್ಯಾಹ್ನ 03-00 ಗಂಟೆಗೆ ಅದೇ ಕಾಲೇಜಿನ ತೃತೀಯ ಬಿ.ಕಾಂ ನ ಐದನೇ ಸೆಮಿಸ್ಟರ್ ಪರೀಕ್ಷೆಯ ಪ್ರವೇಶ ಪತ್ರ ಪಡೆಯಲು ಅನರ್ಹನಾಗಿ ಕಾಲೇಜಿನ ಆರನೇ ಸೆಮಿಸ್ಟರ್ ಪ್ರವೇಶಕ್ಕೆ ಅನರ್ಹಗೊಂಡ ವಿದ್ಯಾರ್ಥಿ ಆರೋಪಿ ಸಂತೋಷ್ ಪರಮೇಶ್ವರ ಗಾಣಿಗ ಎಂಬಾತನು ಕಾಲೇಜಿನ ಕಟ್ಟಡದ ಪ್ರಥಮ ಮಹಡಿಯ ತರಗತಿ ಕಿಟಕಿ ಗಾಜುಗಳನ್ನು ಒಡೆದು, ಸ್ಪೀಕರ್ ಬಾಕ್ಸ್ ಗಳನ್ನು ಒಡೆದು ಹಾಕಿ  ಅಂದಾಜು 20000/- ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟ ಉಂಟುಮಾಡಿರುತ್ತಾನೆ ಎಂಬುದಾಗಿ ಪ್ರಾಂಶುಪಾಲರು ಪ್ರಥಮ ದರ್ಜೆ ಕಾಲೇಜು ಬೈಂದೂರುರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/14 ಕಲಂ 448, 427 ಐ.ಪಿ.ಸಿ ಮತ್ತು 3(1) PREVENTION OF DAMAGE TO PUBLIC PROPERTY ACT, 1984 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments: