Tuesday, February 11, 2014

Daily Crime Reported on 11/02/2014 at 07:00 Hrs



ಹಲ್ಲೆ ಪ್ರಕರಣ

  • ಉಡುಪಿ: ದಿನಾಂಕ 09/02/2014 ರಂದು  ಚಂದ್ರ ಶೇಖರ ಐತಾಳ್ ರವರು  ಮಹೇಶ್ ಎಂಬವರ ಕಾರ್ಯಕ್ರಮಕ್ಕೆ  ಊಟದ ವ್ಯವಸ್ಥೆ ವಹಿಸಿಕೊಂಡಿದ್ದು ಸದ್ರಿ ಸಮಾರಂಭಕ್ಕೆ ಊಟ ಸಾಗಿಸುವರೇ ಪಿರ್ಯಾದಿದಾರರಾದ ಕೃಷ್ಣ ರಾಜ ಭಟ್ (27) ತಂದೆ : ಶ್ರೀನಿವಾಸ ಭಟ್ ವಾಸ; ಶ್ರೀ ಲಕ್ಷ್ಮೀ ನಿವಾಸ ಕೊರವಡಿ ಕುಂಭಾಶಿ ಗ್ರಾಮ ರವರು  ಊಟವನ್ನು ರಿಕ್ಷಾದಲ್ಲಿ ತೆಗೆದುಕೊಂಡು ಕುಂದಾಪುರದ ಹಂಗಳೂರು ವೆಂಕಟಲಕ್ಷ್ಮೀ ಸಭಾಂಗಣದಿಂದ ಹೊರಟು ಉಡುಪಿ ಸಂತೆಕಟ್ಟೆ ಬಸ್ ನಿಲ್ದಾಣದ ಬಳಿ ಇರುವ ಬೇಕರಿ ಎದುರು ಬಂದಾಗ ಯಾರೋ 4 ಜನರು 12:35 ಗಂಟೆಗೆ ಪಿರ್ಯಾದಿದಾರರ ಬಳಿ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಎಷ್ಟೋತ್ತಿಗೆ ಊಟ ತರುವುದು ಯಾವನು ನಿನಗೆ ಊಟ ಕಳುಹಿಸಿಕೊಟ್ಟಿರುವುದು ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಅವರಲ್ಲಿ ಒಬ್ಬರು ಪಿರ್ಯಾದಿದಾರರಿಗೆ ಕೈಯಿಂದ ಕೆನ್ನೆಗೆ ಬೆನ್ನಿಗೆ ಹೊಡೆದಿದ್ದು ಪಿರ್ಯಾದಿದಾರರು ಮನೆಗೆ ಬಂದು ಸ್ವಲ್ಪ ಹೊತ್ತಿನ ನಂತರ ನೋವು ಜಾಸ್ತಿಯಾದ ಕಾರಣ ಚಿಕಿತ್ಸೆಯ ಬಗ್ಗೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಕೃಷ್ಣ ರಾಜ ಭಟ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2014 ಕಲಂ 323, 504 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 10/02/2014 ಸಂಜೆ 14:00  ಗಂಟೆಯ ಸಮಯಕ್ಕೆ ಆರೋಪಿ ಸಂತೋಷ್ ಪೂಜಾರಿ ಎಂಬಾತನು ತನ್ನ ಕೆಎ 20 ಬಿ 8701 ನೇ ನಂಬ್ರದ ಮಹೇಂದ್ರ ಬುಲೆರೋ ಪಿಕಪ್ ವಾಹನವನ್ನು ಅಂಪಾರು ಕಡೆಯಿಂದ ಬಸ್ರೂರು ಕಡೆಗೆ ಅಂಪಾರು ಬಸ್ರೂರು ಮುಖ್ಯ ರಸ್ತೆಯಲ್ಲಿ ಕುಂದಾಪುರ ತಾಲೂಕು ಅಂಪಾರು ಗ್ರಾಮದ ದಾಸರಮಕ್ಕಿ ಎಂಬಲ್ಲಿ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿಕಾಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಡಾಂಬಾರು ರಸ್ತೆಯ ಉತ್ತರ ಬದಿಯ ಮಣ್ಣು ರಸ್ತೆಗೆ ಬಿದ್ದಿದ್ದು ಅದೇ ಸಮಯ ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ವಿಶ್ವನಾಥ ಎಂಬವರಿಗೆ ಸದ್ರಿ ವಾಹನ ತಾಗಿ ಅವರ ಎಡಕೈ ಮತ್ತು ಕಾಲುಗಳಿಗೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ ಹಾಗೂ ಸದ್ರಿ ವಾಹನದಲ್ಲಿದ್ದ ಮಹೇಶ ಎಂಬಾತನಿಗೆ ತಲೆಗೆ ಹಾಗೂ ಎಡಭುಜಕ್ಕೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ ಅಲ್ಲದೇ ಆರೋಪಿಗೆ ಕೂಡಾ ಬಲಭುಜಕ್ಕೆ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಸಂದೀಪ ಗಾಣಿಗ (27) ತಂದೆ: ಬಚ್ಚ ಗಾಣಿಗ, ವಾಸ: ಯಡೂರು ಕೆರೆಮನೆ, ಆಜ್ರಿ ಗ್ರಾಮ, ಕುಂದಾಪುರ ತಾಲೂಕು ಎಂಬವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2014 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಚೇತನ್‌ (17) ತಂದೆ ದಿ. ನಾರಾಯಣ ಆಚಾರಿ ವಾಸ ಮಾವಿನ ಕಟ್ಟೆ ಪಡುಕುಡೂರು ಗ್ರಾಮ ಎಂಬವರ ತಾಯಿ ಶ್ರೀಮತಿ ಹೇಮಾವತಿ (45) ಎಂಬವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 02/02/14 ರಂದು ರಾತ್ರಿ 02:00 ಗಂಟೆಗೆ ತನ್ನ ಮನೆಯ ಬಚ್ಚಲಿಗೆ ನೀರು ಕಾಯಿಸಲು  ಒಲೆಗೆ ಬೆಂಕಿ ಹಚ್ಚುವ ವೇಳೆ,  ಚಿಮಿಣಿ ದೀಪದ ಬೆಂಕಿ  ಆಕಸ್ಮಿಕವಾಗಿ ಉಟ್ಟ ನೈಟಿಗೆ ತಗುಲಿ ಸುಟ್ಟ ಗಾಯಗಳು ಉಂಟಾಗಿದ್ದು ಅವರನ್ನು ಕೂಡಲೇ ಚಿಕಿತ್ಸೆಗೆ ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಗೆ ಸೇರಿಸಿದ್ದು, ದಿನಾಂಕ 10/02/14 ರಂದು ಗಾಯಾಳು ಚಿಕಿತ್ಸೆಗೆ ಸ್ಪಂದಿಸದೇ ಇರುವುದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ವಾಪಸು ಮನೆಗೆ ತರುವಾಗ ಅಪರಾಹ್ನ 03:30 ಗಂಟೆಗೆ ದಾರಿ ಮಧ್ಯ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಚೇತನ್‌ ರವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 03/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: