Tuesday, February 25, 2014

Daily Crime Reported As On 25/02/2014 At 07:00 Hrs



ಅಪಘಾತ ಪ್ರಕರಣಗಳು
  • ಬೈಂದೂರು: ಪಿರ್ಯಾದುದಾರರಾದ ರಮೇಶ ವಿ ದೇವಾಡಿಗ (35) ತಂದೆ ವೆಂಕಟ ದೇವಾಡಿಗ, ವಾಸ ದೀಟಿಮನೆ ಮುರ್ಗೋಳಿಹಕ್ಲು ರಸ್ತೆ ಬಿಜೂರು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 24/02/2014ರಂದು ರಾತ್ರಿ 08:00 ಗಂಟೆಗೆ ಉಪ್ಪುಂದದ ಶಾಲೆಬಾಗಿಲಿನಿಂದ ಬಿಜೂರಿನ ನಂಬಿಯಾರ್ಕ್ಲಿನಿಕ್ಗೆಂದು ತನ್ನ ಸೈಕಲ್ನಲ್ಲಿ ಬರುತ್ತಿರುವಾಗ ಕುಂದಾಪುರ ತಾಲೂಕು ಉಪ್ಪುಂದ ಗ್ರಾಮದ ದೇವಪ್ಪ ಬಳೆಗಾರ ರವರ ಮನೆಯ ಹತ್ತಿರ ರಾ.ಹೆ 66ರ ಪಶ್ಚಿಮ ಬದಿಯ ಮಣ್ಣಿನ ಕಚ್ಚಾ ರಸ್ತೆಯಲ್ಲಿ ರಮೇಶ ವಿ ದೇವಾಡಿಗರವರ ಎದುರಿನಲ್ಲಿ ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ರಂಗನಾಥ ದೇವಾಡಿಗ ಎಂಬವರು ಸೈಕಲ್ಸವಾರಿ ಮಾಡಿಕೊಂಡು ಹೋಗುತ್ತಿದ್ದು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಲಾರಿ ನಂಬ್ರ KL 05AA 3609ನೇದರ ಚಾಲಕ ಬೇಬಿ ಜೊಸೆಫ್ಎಂಬಾತನು ತನ್ನ ಲಾರಿಯನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ರಾ ಹೆ 66 ರ ಪಶ್ಚಿಮಕ್ಕೆ ಚಲಾಯಿಸಿ ರಮೇಶ ವಿ ದೇವಾಡಿಗ ಎದುರುಗಡೆಯಿಂದ ಹೋಗುತ್ತಿದ್ದ ರಂಗನಾಥ ದೇವಾಡಿಗರು ಸವಾರಿ ಮಾಡಿಕೊಂಡಿದ್ದ ಸೈಕಲ್ಗೆ ಢಿಕ್ಕಿ ಹೊಡೆದು ಅಪಘಾತ ಎಸಗಿದ್ದು ಪರಿಣಾಮ ಸೈಕಲ್ಸವಾರ ರಂಗನಾಥ ದೇವಾಡಿಗರು ಡಾಂಬರು ರಸ್ತೆಯ ಅಂಚಿಗೆ ಬಿದ್ದು ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ರಮೇಶ ವಿ ದೇವಾಡಿಗ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 40/14 ಕಲಂ 279, 304(A) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಪಡುಬಿದ್ರಿ: ದಿನಾಂಕ 23/02/2014ರಂದು 19:30 ಗಂಟೆಗೆ ಪಿರ್ಯಾದಿದಾರರಾದ ಲೋಕನಾಥ.ಎಸ್.ಶೆಟ್ಟಿ (45) ತಂದೆ ದಿ. ಸುಂದರ ಶೆಟ್ಟಿ ವಾಸ ಅಬೋಡಿ ಕಲಾ, ಅದಮಾರು ರಸ್ತೆ, ಎರ್ಮಾಳ್ ತೆಂಕ ಗ್ರಾಮ, ಉಡುಪಿ ಜಿಲ್ಲೆ ಇವರು ಮನೆಗೆ ಹೋಗಲು ಎರ್ಮಾಳ್ ತೆಂಕ ಗ್ರಾಮದ ಅಪೂರ್ವ ಬಾರ್ ಎದುರು ರಾ.ಹೆ 66 ರಲ್ಲಿ ಪಶ್ವಿಮ ಕಡೆಯಿಂದ ಪೂರ್ವದ ಕಡೆಗೆ ರಸ್ತೆ ದಾಟುತ್ತಿದ್ದಾಗ ಪಡುಬಿದ್ರಿ ಕಡೆಯಿಂದ ಉಚ್ಚಿಲದ ಕಡೆಗೆ ಕೆಎ 20ಬಿ 360ನೇ ಆಟೋ ರಿಕ್ಷಾವನ್ನು ಅದರ ಚಾಲಕ ಗೋಪಾಲ ಆಚಾರಿ ಎಂಬವರು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ದಾಟುತ್ತಿದ್ದ ಲೋಕನಾಥ.ಎಸ್.ಶೆಟ್ಟಿರವರಿಗೆ ಆಟೋ ರಿಕ್ಷಾದ ಎದುರು ಗ್ಲಾಸ್ ತಾಗಿ ಲೋಕನಾಥ.ಎಸ್.ಶೆಟ್ಟಿರವರು ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯ ಹಾಗೂ ಬಲ ಕಣ್ಣಿನ ಹತ್ತಿರ ಗುದ್ದಿದ ಗಾಯವಾಗಿರುತ್ತದೆ ಎಂಬುದಾಗಿ ಲೋಕನಾಥ.ಎಸ್.ಶೆಟ್ಟಿ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 19/2014  ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಹಿರಿಯಡ್ಕ: ದಿನಾಂಕ 24/2/2014ರಂದು 17:00 ಗಂಟೆಗೆ ಉಡುಪಿ ತಾಲೂಕಿನ ಭೈರಂಪಳ್ಳಿ ಗ್ರಾಮದ ಅಣ್ಣಾಲು ಕಂಚಿಗುಂಡಿ ಎಂಬಲ್ಲಿ ಮಂಜುನಾಥ ಕೆ.ಎ ಎಂಬವರು ಮೋಟಾರು ಸೈಕಲ್ ನಂಬ್ರ ಕೆಎ 05ಇಡಬ್ಲ್ಯೂ 6290ನೇದರಲ್ಲಿ ಪೆರ್ಡೂರು ಗ್ರಾಮದ ಹತ್ರಬೈಲು ವಾಸಿ ಕೃಷ್ಣ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೋಟಾರು ಸೈಕಲನ್ನು ಕುಂಟಾಲಕಟ್ಟೆ ಕಡೆಯಿಂದ ಪೆರ್ಡೂರು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ  ಮೋಟಾರು ಸೈಕಲ್ ಸ್ಕಿಡ್ ಆಗಿ ಸವಾರ ಮತ್ತು ಸಹಸವಾರ ಮೋಟಾರು  ಸೈಕಲ್ ಸಮೇತ  ರಸ್ತೆಗೆ ಬಿದ್ದ  ಪರಿಣಾಮ ಸಹ ಸವಾರ ಕೃಷ್ಣ ರವರಿಗೆ  ಬಲಕಾಲಿನ ಮೂಳೆ ಮುರಿತದ ಗಾಯವಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ಸತೀಶ್ ಕುಮಾರ್ (28), ತಂದೆ ಸುಬ್ಬ ಪೂಜಾರಿ, ವಾಸ ಅಲಂಗಾರು ಅಂತುಬೆಟ್ಟು, ಪೆರ್ಡೂರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 20/2014 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಪ್ರೀತಿ ದೇವಾಡಿಗ (20) ತಂದೆ ಕೃಷ್ಣ ದೇವಾಡಿಗ ಮಕ್ಕಿಮನೆ, ನೆರಂಬಳ್ಳಿ, ಹಂಗಳೂರು ಗ್ರಾಮ ಕುಂದಾಪುರ ಇವರ ತಂದೆ ಕೃಷ್ಣ ದೇವಾಡಿಗ (56) ಎಂಬವರು ಸುಮಾರು 10 ವರ್ಷಗಳಿಂದ ಶರಾಬು ಕಡಿಯುವ ಚಟವಿದ್ದು  ಮನೆಗೆ ಬರುವಾಗ ಶರಾಬು ಕುಡಿದು ಬರುತ್ತಿದ್ದು  ಕಳೆದ 6-7 ತಿಂಗಳಿಂದ ಬಾಯಿಯಲ್ಲಿ ಹುಣ್ಣು ಆಗಿದ್ದು ಬಲ ಮತ್ತು ಎಡ ದವಡೆ ಊದಿಕೊಂಡಿದ್ದು ಅವರಿಗೆ ಊಟ ಮಾಡಲು ಅಗದೆ ಇರುವುದರಿಂದ ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24/02/2014 ರಂದು ಸಂಜೆ 6:30 ಗಂಟೆಗೆ ನೆರಂಬಳ್ಳಿಯಲ್ಲಿರುವ ತನ್ನ  ಹಳೆ ಮನೆಯ ಮಾಡಿನ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಪ್ರೀತಿ ದೇವಾಡಿಗ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 10/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಹಲ್ಲೆ ಪ್ರಕರಣ
  • ಮಲ್ಪೆ: ಪಿರ್ಯಾದಿದಾರರಾದ ಗಿರೀಶ @ ಉಮೇರ (28), ತಂದೆ ಬಾಸ್ಕರ್ ಬೆಲ್ಚಡ, ವಾಸ ತೊಟ್ಟಂ, ಮಲ್ಪೆ ಇವರು ದಿನಾಂಕ 24/02/2014 ರಂದು ಸಂಜೆ  ಮಣಿಪಾಲದಿಂದ ಹೊರಟು ಸಂತೆಕಟ್ಟೆ ಕಲ್ಯಾಣಪುರ ಮಾರ್ಗವಾಗಿ  ನೇಜಾರಿನಿಂದ ನಿಡಂಬಳ್ಳಿ ಕಡೆಗೆ ಹೋಗುವಾಗ 4 ಜನ ಹುಡುಗಿಯರು ಹೋಗುತ್ತಿದ್ದು ಅವರಿಗೆ ಗಿರೀಶ @ ಉಮೇರರವರು ಏನೂ ಮಾಡದಿದ್ದರು ಬೊಬ್ಬೆ ಹೊಡೆದು ಜನ ಸೇರಿಸಿದ್ದರು. ಸೇರಿದ್ದ ಜನರು ಗಿರೀಶ @ ಉಮೇರ ಕೈಯಿಂದ ಕೆನ್ನೆಗೆ ಮೈಗೆ ಹೊಡೆದರು, ಪಂಚ್ ನಿಂದ ಗಿರೀಶ @ ಉಮೇರರವರ ಮುಖಕ್ಕೆ ಹೊಡೆದು ನಂತರ ತಲೆಗೆ ಬ್ಯಾಟಿನಿಂದ ಹೊಡೆದರು ಗಿರೀಶ @ ಉಮೇರರವರು ಅಲ್ಲಿ ಸೇರಿದ್ದ 6-7 ಜನ ಹೊಡೆದಿದ್ದು ಅವರ ಪರಿಚಯ ಗಿರೀಶ @ ಉಮೇರ ಇರುವುದಿಲ್ಲ, ಮುಂದೆ ಅವರನ್ನು ನೋಡಿದರೆ ಗುರುತಿಸುವುದಾಗಿ ತಿಳಿಸಿದ್ದು. ಈ ಘಟನೆ ರಾತ್ರಿ 20:00 ಗಂಟೆಗೆ ನಿಡಂಬಳ್ಲಿ ರಸ್ತೆಯ ಕೆಳ ನೇಜಾರಿನಲ್ಲಿ ನಡೆದಿರುವುದಾಗಿದೆ ಎಂಬುದಾಗಿ ಗಿರೀಶ @ ಉಮೇರ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 35/2014 ಕಲಂ 143, 147. 148. 324. 323. 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.


 
 

No comments: