Tuesday, May 07, 2013

Press Note



ಪತ್ರಿಕಾ ಪ್ರಕಟಣೆ
ವಿಧಾನಸಭಾ- 2013 ರ ಮತಎಣಿಕೆಯ ಬಂದೋಬಸ್ತ್ ಮಾಹಿತಿ
ದಿನಾಂಕ 05/05/2013 ರಂದು ಉಡುಪಿ ಜಿಲ್ಲೆಯ ಐದು (05) ವಿಧಾನಸಭಾ ಕ್ಷೇತ್ರದ ಮತದಾನ ನಡೆದಿದ್ದು ಈ ಸಂಬಂಧ ಮತಎಣಿಕೆಯ ಕಾರ್ಯವು ಉಡುಪಿಯ ಕುಂಜಿಬೆಟ್ಟುವಿನ್ಲಲಿರುವ ಟಿ.ಎ ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ: 08/05/2013 ರಂದು ಬೆಳಿಗ್ಗೆ 08:00 ಗಂಟೆಯಿಂದ ನಡೆಯಲಿದ್ದು ಮತಎಣಿಕೆ ಸಂದರ್ಭ ಹಾಗೂ ಮತಎಣಿಕೆಯ ನಂತರ ಜಿಲ್ಲೆಯಾದ್ಯಾಂತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸು ವರಿಷ್ಠಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಗೃಹರಕ್ಷಕ ಸಿಬ್ಬಂದಿಗಳು ಮತ್ತು ಕೇಂದ್ರೀಯ ಆರೆಸೇನಾ ಪಡೆಗಳ ನೆರವಿನೊಂದಿಗೆ ಬಂದೋಬಸ್ತ್ ನಡೆಯಲಿದೆ. ಈ ಮತಎಣಿಕೆಯ ಬಂದೋಬಸ್ತು ಕರ್ತವ್ಯಕ್ಕಾಗಿ 03 ಡಿವೈ.ಎಸ್.ಪಿ, 06 ಪೊಲೀಸ್ ವೃತ್ತ ನಿರೀಕ್ಷಕರು/ಪೊಲೀಸ್ ನಿರೀಕ್ಷಕರು, 24 ಪೊಲೀಸ್ ಉಪ-ನಿರೀಕ್ಷಕರು /ಸಹಾಯಕ ಪೊಲೀಸ್ ನಿರೀಕ್ಷಕರು, 108 ಪೊಲೀಸ್ ಸಿಬ್ಬಂದಿಗಳು, 55 ಗೃಹರಕ್ಷಕ ದಳದ ಸಿಬ್ಬಂದಿ, 02 ಕನಾಟಕ ರಾಜ್ಯ ಮೀಸಲು ಪಡೆ, 01 ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕುಡಿಗಳನ್ನು ಹಾಗೂ 01 ಕೇಂದ್ರಿಯಾ ಅರೆಸೇನಾ ಪಡೆ ಗಳನ್ನು ನಿಯೋಜಿಸಲಾಗಿದೆ.
ಇದರ ಹೊರತಾಗಿ ಜಿಲ್ಲೆಯಾದ್ಯಾಂತ ಮತ ಎಣಿಕೆ ನಂತರ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸ್ ಅಧಿಕಾರಿ/ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿಯವರಿಂದ ಸೂಕ್ತ ಬಂದೋಬಸ್ತು ಮಾಡಲಾಗುವುದು.      

No comments: