Sunday, May 26, 2013

Daily Crimes Reported as On 26/05/2013 at 17:00 Hrs

ಕಳವು ಪ್ರಕರಣ
  • ಮಲ್ಪೆ:ಪಿರ್ಯಾದಿದಾರರಾದ ಶ್ರೀ ಆನಂದ ನಾಯಕ್‌ (40) ತಂದೆ:ಲಕ್ಷ್ಮಣ ನಾಯಕ್, ವಾಸ:ಶ್ರೀ ದುರ್ಗಾ ನಿವಾಸ, ಕೊಪ್ಪಲ ತೋಟ, ಮಲ್ಪೆರವರು ಮಲ್ಪೆ ಬಸ್ ನಿಲ್ದಾಣದ ಬಳಿಯಲ್ಲಿನ ಬಂದರು ಕಛೇರಿಯ ಎದುರು ಶ್ರೀ ದುರ್ಗಾ ಜನರಲ್ ಸ್ಟೋರ್ಸ್‌ ಎಂಬ ಹೆಸರಿನ ದಿನಸಿ ಅಂಗಡಿಯನ್ನು ಹೊಂದಿದ್ದು, ನಿನ್ನೆ ದಿನ ದಿನಾಂಕ:25/05/2013 ರಂದು ರಾತ್ರಿ ಸುಮಾರು 8 ಗಂಟೆಗೆ ಅಂಗಡಿಯ ಕೆಲಸಗಾರರಾದ ಗಣೇಶ ಹಾಗೂ ಶೇಖರ ಎಂಬುವರು ಅಂಗಡಿಗೆ ಶೆಟರ್ ಎಳೆದುಕೊಂಡು ಬೀಗ ಹಾಕಿ ಆನಂದ ನಾಯಕ್‌ರವರ ಮೂಲ ಮನೆಯಾದ ಕುಂದಾಪುರದ ಕೆರಾಡಿಯಲ್ಲಿರುವ ಮನೆಯಲ್ಲಿ ನಡೆಯಲಿದ್ದ ಶ್ರೀರಾಮ ಭಜನಾ ಕಾರ್ಯಕ್ರಮಕ್ಕೆಂದು ಹೋಗಿದ್ದು, ಈ ದಿನ ದಿನಾಂಕ:26/05/2013 ರಂದು ಬೆಳಿಗ್ಗೆ ಸುಮಾರು 06:30 ಗಂಟೆಗೆ ಗಣೇಶ್‌ರವರು ಬಂದು ನೋಡುವಾಗ, ಅಂಗಡಿಯ ಶೆಟರ್‌ಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ತೆಗೆದು, ಅಂಗಡಿಯ ಕ್ಯಾಷ್ ಡ್ರಾವರಿನಲ್ಲಿರಿಸಿದ್ದ ಸುಮಾರು 1 ಲಕ್ಷ ರೂಪಾಯಿ ನಗದು ಹಾಗೂ ಆನಂದ ನಾಯಕ್‌ರವರ ಶ್ರೀ ದುರ್ಗಾ ಟ್ರಾವೆಲ್ಸ್‌ನ ಚಾಲಕನಾದ ಸಾಗರದ ಸುರೇಶ ಎಂಬವರ 3 ಪವನ್ನಿನ ಚಿನ್ನದ ಸರ ಹಾಗೂ 2 ಚಿನ್ನದ ಪೆಂಡೆಂಟ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂಪಾಯಿ 1,50,000/- ಆಗಿರುವುದಾಗಿದೆ. ಈ ಬಗ್ಗೆ ಆನಂದ ನಾಯಕ್‌ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 85/2013 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಅಪಘಾತ ಪ್ರಕರಣ
  • ಮಲ್ಪೆ:ದಿನಾಂಕ:25/05/2013 ರಂದು ಪಿರ್ಯಾದಿದಾರರಾದ ಶಶಿಧರ್ (32) ತಂದೆ:ಸದಾನಂದ ವಾಸ:ಮೂಡುಕುದ್ರು ಕಲ್ಯಾಣಫುರ ಪೋಸ್ಟ್ ಮೂಡುತೋನ್ಸೆ ಗ್ರಾಮರವರು ತನ್ನ ತಮ್ಮನ ಪಲ್ಸರ್ ಮೋಟಾರು ಸೈಕಲ್ ನಂಬ್ರ ಕೆಎ 20 ಇಡಿ 6822 ರಲ್ಲಿ ಸಹಸವಾರರನ್ನಾಗಿ ತನ್ನ ಸಂಬಂಧಿ ಪುರಂದರ್ (32) ಎಂಬವರನ್ನು ಕುಳ್ಳಿರಿಸಿಕೊಂಡು ಸಂತೆಕಟ್ಟೆಯಿಂದ ಕಲ್ಮಾಡಿ ಕಡೆಗೆ ಬರುತ್ತಿರುವಾಗ, ರಾತ್ರಿ ಸುಮಾರು 09:35 ಗಂಟೆಗೆ ಕೊಡವೂರು ಶಂಕರನಾರಾಯಣ ದೇವಸ್ಥಾನದ ಎದುರು ಜಂಕ್ಷನ್‌ನಲ್ಲಿ ರಸ್ತೆಯ ಎಡಬದಿಯಿಂದ ತನ್ನ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಹೋಗುವಾಗ ಎದುರಿನಿಂದ ಅಂದರೆ ಮಲ್ಪೆ ಕಡೆಯಿಂದ ಕೆಎ 20 ಇಬಿ 6320 ಮೋಟಾರು ಸೈಕಲ್ ಸವಾರನು ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಶಶಿಧರ್‌ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರರಾದ ಪುರಂದರ್‌ರವರಿಗೆ ಬಲಕಾಲಿನ ಗಂಟಿನ ಕೆಳಗೆ ತೀವ್ರ ಜಖಂಗೊಂಡು ಚಿಕಿತ್ಸೆಯ ಬಗ್ಗೆ ಆದರ್ಶ ಆಸ್ಪತ್ರೆ ಉಡುಪಿಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಶಶಿಧರ್‌ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 86/2013 ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೆಟ್ಟಿಂಗ್‌ ಪ್ರಕರಣ
  • ಕಾರ್ಕಳ ಗ್ರಾಮಾಂತರ:ದಿನಾಂಕ 25/05/2013 ರಂದು 19:00 ಗಂಟೆಗೆ ಪಿರ್ಯಾದಿದಾರರಾದ ಅಝ್ಮತ್‌ ಅಲಿ ಜಿ ಪಿಎಸ್‌ಐ, ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆರವರಿಗೆ ಬಂದ ಖಚಿತ ಮಾಹಿತಿಯಂತೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಪೇಟೆಯಲ್ಲಿ ಆರೋಪಿ ಪ್ರವೀಣ್‌ ಅಲಿಯಾಸ್‌ ಅಪ್ಪು ಎಂಬಾತನು ದಿನಾಂಕ 26/05/2013 ರಂದು ಚೆನ್ನೈ ಮತ್ತು ಮುಂಬೈ ತಂಡಗಳ ನಡುವೆ ನಡೆಯುವ ಫೈನಲ್‌ ಕ್ರಿಕೆಟ್‌ ಪಂದ್ಯಾಟದಲ್ಲಿ ಸ್ವಂತ ಲಾಭಕ್ಕೊಸ್ಕರ ಚೆನ್ನೈ ಗೆದ್ದರೆ ನೂರಕ್ಕೆ ತೊಂಬತ್ತು ರೂಪಾಯಿ ನೀಡುವುದಾಗಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುವ ಉದ್ದೇಶದಿಂದ ಕೂಗಾಡುತ್ತಿದ್ದ ಆರೋಪಿಯನ್ನು ಅಝ್ಮತ್‌ ಅಲಿ ಜಿ, ಪಿಎಸ್‌ಐರವರು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ತೆಗೆದುಕೊಂಡು ಆತನ ಬಳಿಯಲ್ಲಿದ್ದ  ಜೂಜಾಟಕ್ಕೆ ಬಳಸಿದ ಒಂದು ಮೊಬೈಲ್‌ ಸೆಟ್‌‌ ಮತ್ತು ರೂಪಾಯಿ 4,000/- ಅನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 63/2013 ಕಲಂ:78(iii) ಕೆ.ಪಿ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಮಣಿಪಾಲ:ಪಿರ್ಯಾದಿದಾರರಾದ ಆಸಂಗ್ಯಪ್ಪ ಸೇಬಿನಕಟ್ಟಿ (33) ತಂದೆ:ಮಲ್ಲಪ್ಪ ಸೇಬಿನಕಟ್ಟಿ ವಾಸ:ಲಾಯದಗುಂದಿ ಗ್ರಾಮ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ ಪ್ರಸ್ತುತ ವಾಸ:ಡಯಟ್‌ ಶಿಕ್ಷಣ ತರಬೇತಿ ಕೇಂದ್ರದ ಹಿಂಭಾಗ, ಪ್ರಗತಿ ನಗರ, ಅಲೆವೂರು ಗ್ರಾಮ, ಉಡುಪಿ ತಾಲೂಕುರವರ ಮಗ ಭೀಮ್‌ಸಿ (5) ಎಂಬವರಿಗೆ ದಿನಾಂಕ 25/05/2013 ರಂದು 18:30 ಗಂಟೆಗೆ ಉಡುಪಿ ತಾಲೂಕು ಅಲೆವೂರು ಗ್ರಾಮದ ಪ್ರಗತಿ ನಗರ ಎಂಬಲ್ಲಿ ಯಾವುದೋ ವಿಷ ಹಾವು ಕಚ್ಚಿದ್ದು, ಅವರನ್ನು ಆಸಂಗ್ಯಪ್ಪ ಸೇಬಿನಕಟ್ಟಿರವರು ಚಿಕಿತ್ಸೆ ಬಗ್ಗೆ ಉಡುಪಿಯ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಭೀಮ್‌ಸಿರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಆಸಂಗ್ಯಪ್ಪ ಸೇಬಿನಕಟ್ಟಿರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 30/2013 ಕಲಂ 174 ಸಿ.ಆರ್‌.‌ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ:ಪಿರ್ಯಾದಿದಾರರಾದ ರೊನಾಲ್ಡ್ ಕರ್ನೆಲಿಯೋ (53) ತಂದೆ:ದಿವಂಗತ ಜೆರೋಮ್ ಕರ್ನೆಲಿಯೋ ವಾಸ:ಅಂತೋನಿ ಆಶೀರ್ವಾದ್, ಮಲ್ಪೆ ಕ್ರಾಸ್ ರೋಡ್, ಸಂತೆಕಟ್ಟೆ, ಉಡುಪಿ ಜಿಲ್ಲೆರವರು ತನ್ನ ಹೆಂಡತಿ, ಮಗ ಹಾಗೂ   ತನ್ನ ತಮ್ಮ ಅವಿವಾಹಿತ ಮನೋಹರ್ ಒಸ್ವಾಲ್ಡ್ ಕರ್ನೆಲಿಯೋ (44) ಅವರೊಂದಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಅಂಟನಿಆಶೀರ್ವಾದ್ ಮಲ್ಪೆ ಕ್ರಾಸ್ ರಸ್ತೆ, ಸಂತೆಕಟ್ಟೆ ಎಂಬಲ್ಲಿ ವಾಸವಾಗಿದ್ದು, ರೊನಾಲ್ಡ್ ಕರ್ನೆಲಿಯೋರವರ ತಮ್ಮ ಮನೋಹರ್ ಒಸ್ವಾಲ್ಡ್ ಕರ್ನೆಲಿಯೋರವರಿಗೆ ಬ್ಲಡ್ ಪ್ರೆಶರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇದ್ದು, ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ದಿನ ದಿನಾಂಕ:26/05/2013 ರಂದು ಬೆಳಿಗ್ಗೆ 08:00 ಗಂಟೆಗೆ ರೊನಾಲ್ಡ್ ಕರ್ನೆಲಿಯೋರವರು ತನ್ನ ಹೆಂಡತಿ ಹಾಗೂ ಮಗನೊಂದಿಗೆ ಕಲ್ಯಾಣಪುರ ಚರ್ಚಿಗೆ ಹೋಗಿದ್ದು,  ಮನೆಯಲ್ಲಿ  ಮನೋಹರ್ ಒಸ್ವಾಲ್ಡ್ ಕರ್ನೆಲಿಯೋ ಮಾತ್ರ ಇದ್ದು, ರೊನಾಲ್ಡ್ ಕರ್ನೆಲಿಯೋ ಚರ್ಚಿನಿಂದ ವಾಪಾಸ್ಸು ಮನೆಗೆ ಬೆಳಿಗ್ಗೆ 09:30 ಗಂಟೆಗೆ ಬಂದಾಗ ಮನೆಯಲ್ಲಿದ್ದ  ಮನೋಹರ್ ಒಸ್ವಾಲ್ಡ್ ಕರ್ನೆಲಿಯೋನ  ಕೋಣೆ ಬಾಗಿಲು ಹಾಕಿದ್ದು, ಕರೆದಾಗ ಪ್ರತಿಕ್ರಿಯಿಸದೇ ಇದ್ದು ಬಾತ್ ರೂಮಿನ ಕಿಟಕಿಯಲ್ಲಿ ಇಣಕಿದಾಗ ನೆಲದಲ್ಲಿ ಬಿದ್ದುಕೊಂಡಿದ್ದು, ಆತನಿಂದ ಪ್ರತಿಕ್ರಿಯೆ ಬಾರದೇ ಇದ್ದು,  ನಂತರ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದಲ್ಲಿ ಚಿಕಿತ್ಸೆಗೆ ಸ್ಪಂದಿಸದೇ 11:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಮನೋಹರ್ ಒಸ್ವಾಲ್ಡ್ ಕರ್ನೆಲಿಯೋರವರು ಮಲಗುವ ಕೋಣೆಯ ಬಾತ್‌ರೂಮಿಗೆ ಹೋದಾಗ ಬ್ಲಡ್ ಪ್ರೆಶರ್ ಹಾಗೂ ಹೃದಯದ ಕಾಯಿಲೆ ಉಲ್ಬಣಿಸಿ ಮೃತಪಟ್ಟಿದ್ದಾಗಿದೆ.ಈ ಬಗ್ಗೆ ರೊನಾಲ್ಡ್ ಕರ್ನೆಲಿಯೋರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 23/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: