Sunday, May 26, 2013

Daily Crimes Reported as On 26/05/2013 at 07:00 Hrs

ಅಪಘಾತ ಪ್ರಕರಣಗಳು
  • ಬ್ರಹ್ಮಾವರ: ದಿನಾಂಕ 25/05/2013 ರಂದು ಸಂಜೆ 7:30 ರ ವೇಳೆಗೆ ಉಡುಪಿ ತಾಲೂಕು ಉಪ್ಪೂರು ಗ್ರಾಮದ ಹೆರಾಯಿ ಬೆಟ್ಟು ರಾಹೆ 66 ರಲ್ಲಿ ಕೆಎ 20 ಸಿ 6037 ನೇ ಬಸ್ಸನ್ನು ಅದರ ಚಾಲಕ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಉಡುಪಿ ಕಡೆಯಿಂದ ಲಕ್ಷ್ಮಿ ಬಾರ್ ರಸ್ತೆಯಿಂದಾಗಿ ರೋಡ್ ಡಿವೈಡರ್ ನಲ್ಲಿ ತಿರುಗಿಸುತ್ತಿದ್ದ ಮೋಟಾರು ಸೈಕಲ್ ನಂಬ್ರ  ಕೆಎ 21-ಹೆಚ್-3426 ನೇ ದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೊಟಾರು ಸೈಕಲ್ ಸವಾರ ಶಶಿಧರ (29) ಎಂಬವರು ತೀವ್ರ ಗಾಯಗೊಂಡು ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ರಾತ್ರಿ 8:00 ಗಂಟೆಗೆ ಮೃತ ಪಟ್ಟಿರುತ್ತಾರೆ ಎಂಬುದಾಗಿ ರಮೇಶ್ ಕರ್ಕೆರಾ (41) ತಂದೆ ಸಂಜೀವ ಕುಂದರ್ ವಾಸ ವನಿತಾ ನಿಲಯ, ಉಗ್ಗೇಲ್ ಬೆಟ್ಟು, ಉಪ್ಪೂರು ಗ್ರಾಮ, ಉಡುಪಿ  ತಾಲೂಕು ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 184/2013 ಕಲಂ 279, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ದಿನಾಂಕ 25/05/2013 ರಂದು 19:45 ಗಂಟೆಗೆ KA 19 B 9706 ನೇ ಬಸ್ಸಿನ ಚಾಲಕ ಅಬ್ದುಲ್ ಶೂಕೂರ್ ಎಂಬಾತನು  ರಾಷ್ಟ್ರೀಯ  ಹೆದ್ದಾರಿ  66ರಲ್ಲಿ ಮಂಗಳೂರುನಿಂದ ಉಡುಪಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕನ್ನರಪಾಡಿಯ ಜಂಕ್ಷನ್ ಗೆ ತಲುಪುವಾಗ ಎದುರುಗಡೆ ಅಂದರೆ ಕರಾವಳಿ ಕಡೆಯಿಂದ AP 29 V 7844 ನೇ  ಕಂಟೈನರ್ ವಾಹನಕ್ಕೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪಿರ್ಯಾದಿದಾರರಾದ ಶರ್ಮಿಳ ಗಂಡ ಸ್ನೇಹಿತ್ ಕುಮಾರ್ ವಾಸ ರಾಧಾ ಮೂಡಬೆಟ್ಟು, ಮೂಡತೊನ್ಸೆ ಗ್ರಾಮ, ಕಲ್ಯಾಣಪುರ ಹಾಗೂ ಇತರ ಸಹ ಪ್ರಯಾಣಿಕರಾದ ಗುರುರಾಜ್ ಭಟ್, ಸುರೇಂದ್ರ, ಶಬ್ನಮ್ ಸಜೀಯಾಬಾನು, ಶಾರೂಕ್ ಖಾನ್, ಕಸ್ತೂರಿ, ಗುರುರಾಜ್, ಗೀತಾ, ಶರಣ್ ಪ್ರಸಾದ್, ಕಾರ್ತಿಕ್ ಮತ್ತು ಇತರರಿಗೆ ಸದಾ ಹಾಗೂ ತೀವ್ರ ಸ್ವರೂಪದ ರಕ್ತಗಾಯವಾಗಿ ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಶರ್ಮಿಳರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 255/2013 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಂಕರನಾರಾಯಣ: ದಿನಾಂಕ 25/05/2013 ರಂದು 19:30 ಗಂಟೆಗೆ KA 06-B-1259 ನೇ ನಂಬ್ರದ ಲಾರಿಯನ್ನು ಅದರ ಚಾಲಕನು ಹಾಲಾಡಿ ಕಡೆಯಿಂದ ಶಂಕರನಾರಾಯಣ ಕಡೆಗೆ ಹಾಲಾಡಿ - ಶಂಕರನಾರಾಯಣ ರಸ್ತೆಯಲ್ಲಿ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕುಟ್ರುಮಕ್ಕಿ ಎಂಬಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಚಲಾಯಿಸಿಕೊಂಡು ರಸ್ತೆಯ ತೀರ ಬಲಕ್ಕೆ ಬಂದು ಶಂಕರನಾರಾಯಣ ಕಡೆಯಿಂದ ಹಾಲಾಡಿ ಕಡೆಗೆ ಕುಳ್ಳಂಜೆ ಗ್ರಾಮದ ವಾಸಿ ಶ್ರೀದರ್‌ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ KA 20-X-8350 ನೇ ಮೋಟಾರು ಸೈಕಲ್ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಶ್ರೀದರ್ರವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮೃತಪಟ್ಟಿರುವುದಾಗಿದೆ. ಪಿರ್ಯಾದಿದಾರರಾದ ರಾಘವೇಂದ್ರ ನಾಯ್ಕ (35) ತಂದೆ: ಚಂದ್ರ ನಾಯ್ಕ  ವಾಸ: ಕೊಂಗನಾಡಿ, ಕುಳ್ಳುಂಜೆ  ಗ್ರಾಮ, ಕುಂದಾಪುರ ತಾಲೂಕು ಎಂಬವರು ಲಾರಿಯನ್ನು ಸ್ವಲ್ಪ ಮುಂದೆ ಬೈಕ್‌ನಲ್ಲಿ ಹೋಗಿ ನಿಲ್ಲಿಸಿದ್ದು ಆರೋಪಿಯು ಲಾರಿಯನ್ನು ನಿಲ್ಲಸಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸದೇ ಅಪಾಘತದ ವಿಷಯವನ್ನು ಪೊಲೀಸರಿಗೆ ತಿಳಿಸದೇ ಪರಾರಿ  ಆಗಿರುತ್ತಾನೆ ಎಂಬುದಾಗಿ ರಾಘವೇಂದ್ರ ನಾಯ್ಕ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2013 ಕಲಂ 279, 304(ಎ) ಐ.ಪಿ.ಸಿ ಮತ್ತು 134(ಎ) & (ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಮಟ್ಕಾ ದಾಳಿ ಓರ್ವನ ಬಂಧನ
  • ಗಂಗೊಳ್ಳಿ: ದಿನಾಂಕ 25/05/2013 ರಂದು 19:15 ಗಂಟೆಗೆ ಗಂಗೋಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಬಾಬುರವರು ಠಾಣಾ ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು, ಗುಜ್ಜಾಡಿ  ಗ್ರಾಮದ ನಾಯಕವಾಡಿ ಬಸ್‌‌ ನಿಲ್ದಾದ ಬಳಿ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ಒಟ್ಟು ಗೂಡಿಸಿ ಹಣವನ್ನು ವಸೂಲಿ ಮಾಡಿ ಮಟ್ಕ ಜುಗಾರಿ ಆಟ ಆಡುತ್ತಿರುವಲ್ಲಿಗೆ ದಾಳಿ ನಡೆಸಿ ಆರೋಪಿ ಸದಾಶಿವ ಪೂಜಾರಿ (37) ತಂದೆ ದಿವಂಗತ ನಂದಾ ಪೂಜಾರಿ ವಾಸ ಮೇಲಾಂಡಿ, ನಾಯಕ್ವಾಡಿ, ಗುಜ್ಜಾಡಿ ಗ್ರಾಮ ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ನಗದು ಹಣ 760/- ಮತ್ತು ಮಟ್ಕಾ ಆಟಕ್ಕೆ ಬಳಸಿದ ಇತರ ಪರಿಕರಗಳನ್ನು ಸ್ವ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿಯು ತಾನು ಸಾರ್ವಜನಿಕರಿಂದ ಹಣವನ್ನು ಒಟ್ಟು ಮಾಡಿಕೊಂಡು ಈಶ್ವರ ಖಾರ್ವಿಯವರಿಗೆ ನಿಡುವುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ  ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2013 ಕಲಂ 78 (1)(3) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: