Saturday, May 25, 2013

Daily Crimes Reported as On 25/05/2013 at 19:30 Hrs

ಕಳವು ಪ್ರಕರಣ
  • ಶಿರ್ವಾ: ಫಿರ್ಯಾದಿದಾರರಾದ ರಮೇಶ ಶೆಟ್ಟಿ (53) ತಂದೆ ಬೂಬ ಶೆಟ್ಟಿ ವಾಸ ಶ್ರೀ ಶಾರದಾಂಬ ನಿವಾಸ, ಮಾಣಿಬೆಟ್ಟು, ಶಿರ್ವ ಗ್ರಾಮ, ಉಡುಪಿ ತಾಲೂಕು ಎಂಬವರ ಟಾಟಾ ಸ್ಪೇಶಿಯೋ ಟೂರಿಸ್ಟ್ ವಾಹನ ಕೆಎ 20 ಎ 5711 ನೇಯದನ್ನು ದಿನಾಂಕ 24/05/2013 ರ ರಾತ್ರಿ 21:30 ಗಂಟೆಗೆ ಉಡುಪಿ ತಾಲೂಕು ಬೆಳಪು ಗ್ರಾಮದ ಫಣಿಯೂರು ಬಬ್ಬು ಸ್ವಾಮಿ ದೇವಸ್ಥಾನದ ಹತ್ತಿರ ಫಿರ್ಯಾದಿದಾರರ ಅಂಗಡಿಯ ಎದುರು ಅದರ ಚಾಲಕ ಪ್ರಶಾಂತ ಎಂಬವರು ನಿಲ್ಲಿಸಿದ್ದು ಬೆಳಿಗ್ಗೆ 06:30 ಗಂಟೆಗೆ ನೋಡಿದಾಗ   ಯಾರೋ ಕಳ್ಳರು ಸದ್ರಿ ವಾಹನವನ್ನು ಕಳವು ಮಾಡಿರುವುದಾಗಿದೆ.ಕಳವಾದ ವಾಹನದ ನೋಂದಣಿ ನಂಬ್ರ ಕೆಎ 20 ಎ 5711, ಟಾಟಾ ಸ್ಪೇಶಿಯೋ ಟೂರಿಸ್ಟ್ ಟ್ಯಾಕ್ಸಿ, ಬಣ್ಣ  ಬಿಳಿ, ಚಾಸಿಸ್ ನಂಬ್ರ 421065CUZ917752, ಇಂಜಿನ್ ನಂಬ್ರ 497SP 27CUZ 832632 ಆಗಿದ್ದು, ಇದರ ಎದುರು ಗ್ಲಾಸಿನಲ್ಲಿ ಶ್ರೀ ಶಾರದಾಂಬ ಮತ್ತು ಹಿಂಬದಿಯಲ್ಲಿ ಶ್ರೇಯ, ಶೃದ್ಧ, ವೈಷ್ಣವಿ ಮತ್ತು ಫೋನ್ ನಂಬ್ರ ಬರೆದಿರುತ್ತದೆ. ಕಳವಾದ ವಾಹನದ ಅಂದಾಜು ಮೌಲ್ಯ 1,75000/ ರೂಪಾಯಿ ಆಗಿರುತ್ತದೆ ಎಂಬುದಾಗಿ ರಮೇಶ ಶೆಟ್ಟಿರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 52/2013 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣಗಳು

  • ಕೋಟ: ದಿನಾಂಕ 24/05/2013 ರಂದು ಸಂಜೆ 5:00 ಗಂಟೆಗೆ ಉಡುಪಿ ತಾಲೂಕು ಮಣೂರು ಗ್ರಾಮದ ಕಾಸನಗುಂದು ಎಂಬಲ್ಲಿ ಆರೋಪಿಗಳಾದ 1) ಗೋಪಾಲ ಮಡಿವಾಳ, 2) ಚಂದ್ರ ಮಡಿವಾಳ, 3) ನಾರಾಯಣ ಮಡಿವಾಳ ಎಂಬವರು ಪಿರ್ಯಾದಿದಾರರಾದ ಸುಬ್ರಾಯ ಮಡಿವಾಳ (66) ತಂದೆ ದಿವಂಗತ ಸೋಮ ಮಡಿವಾಳ ವಾಸ: ಕಾಸನಗುಂದು ಮಣೂರು ಗ್ರಾಮ ಉಡುಪಿ ತಾಲೂಕು ಎಂಬವರನ್ನು ಅಡ್ಡಗಟ್ಟಿ ನಿಲ್ಲಿಸಿ ಕಪಾಳಕ್ಕೆ ಹಾಗೂ ತಲೆಗೆ ಕೈಯಿಂದ ಹೊಡೆದು, ಅವ್ಯಾಚ್ಯ ಶಬ್ದಗಳಿಂದ ಬೈದು, ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಪಿರ್ಯಾದಿದಾರರಿಗೆ ಹಾಗೂ ಆರೋಪಿಗಳಿಗೆ ದೈವದ ಮನೆಯ ವಿಚಾರದಲ್ಲಿನ ತಕರಾರೇ ಈ ಹಲ್ಲೆಗೆ ಕಾರಣವಾಗಿರುತ್ತದೆ ಎಂಬುದಾಗಿ ಆರೋಪಿಸಿ ಸುಬ್ರಾಯ ಮಡಿವಾಳರವರು ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2013 ಕಲಂ 323 341 504 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಪಡುಬಿದ್ರಿ: ಪಿರ್ಯಾಧಿದಾರರಾದ ರಘುರಾಮ್ ನಾಯಕ್ (52) ತಂದೆ ದಿವಂಗತ ಪುಟ್ಟಣ್ಣ ನಾಯಕ್ ವಾಸ ಅಳುಂಬೆ ಮನೆ, ಸಾಂತೂರು ಗ್ರಾಮ, ಪಿಲಾರ್ ಪೋಸ್ಟ್, ಉಡುಪಿ ತಾಲೂಕು ಎಂಬವರು ಉಡುಪಿ ತಾಲೂಕು ಸಾಂತೂರು ಗ್ರಾಮದಲ್ಲಿ ಸರ್ವೆ ನಂಬ್ರ 17/2ಎ ರಲ್ಲಿ 83 ಸೆಂಟ್ಸ್ ಜಾಗ ಭೂನ್ಯಾಯ ಮಂಡಳಿಯಿಂದ ತೀರ್ಪಾದ ಪ್ರಕಾರ ಸ್ವಾಧೀನಹೊಂದಿ ಅನುಭವಿಸಿಕೊಂಡಿದ್ದು ದಿನಾಂಕ 20/05/2013 ರಂದು ಮಧ್ಯಾಹ್ನ 3:30 ಗಂಟೆಗೆ ಆರೋಪಿಗಳಾದ ಉಡುಪಿ ತಾಲೂಕು ಸಾಂತೂರು ಗ್ರಾಮದ ರಹಮತ್ತುಲ್ಲಾ ಸಾಹೇಬ್ ರವರ ಮಕ್ಕಳಾದ 1) ನಜೀರ್ 2) ಸಲೀಂ, 3. ಮುಸ್ತಾಕ್ ಎಂಬವರು ಸಮಾನ ಉದ್ದೇಶದಿಂದ ಪಿರ್ಯಾಧಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗದಲ್ಲಿ ಜೆಸಿಬಿ ತಂದು ಬಲತ್ಕಾರದಲ್ಲಿ ರಸ್ತೆ ಮಾಡುವ ಪ್ರಯತ್ನ ಮಾಡಿದ್ದು ಇದನ್ನು ತಡೆಯಲು ಹೋದ ಪಿರ್ಯಾಧಿದಾರರಿಗೆ ಜೆಸಿಬಿ ಅಡಿಗೆ ಹಾಕಿ ಕೊಲೆ ಮಾಡುವ ಪ್ರಯತ್ನ ಮಾಡಿರುವುದಲ್ಲದೇ ಬೆದರಿಕೆ ಹಾಕಿ ಮರದ ಸೊಂಟೆಯಿಂದ ಹಲ್ಲೆ ನಡೆಸಿರುವುದಾಗಿದೆ ನಂತರ ದಿನಾಂಕ 23/05/2013 ರಂದು 10:00 ಗಂಟೆಗೆ ಆರೋಪಿಗಳು ಪುನಃ ಪಿರ್ಯಾಧಿದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅಚಾಚ್ಯ ಶಬ್ದಗಳಿಂದ ಬೈದು  ಬೆದರಿಕೆ ಹಾಕಿರುವುದಾಗಿದೆ. ಜಾಗದ ತಕರಾರು ಈ ತಕ್ಷೀರಿಗೆ ಕಾರಣವಾಗಿರುತ್ತದೆ ಎಂಬುದಾಗಿ ಆರೋಪಿಸಿ ರಘುರಾಮ್ ನಾಯಕ್ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 86/2013 ಕಲಂ 447, 324, 448, 504, 506, 511 ಜೊತೆಗ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಕುಂದಾಪುರ: ದಿನಾಂಕ 26/05/2013 ರಂದು  04:30  ಗಂಟೆಗೆ  ಕುಂದಾಪುರ ತಾಲೂಕಿನ ಕೊಟೇಶ್ವರ ಗ್ರಾಮದ ಕೊಟೇಶ್ವರ ಪಟ್ಟಾಭಿ ದೇವಸ್ಥಾನದ ಬದಿಯಲ್ಲಿ ಆರೋಪಿ ಅಕ್ಬರ್ ಆಲಿ ಎಂಬಾತನು ಯಾವುದೋ ಬೇವಾರಂಟು ತಕ್ಷೀರು ಮಾಡುವ  ಉದ್ದೇಶದಿಂದ ಮುಖವನ್ನು ಮರೆಮಾಚಿ ಅವಿತು ಕುಳಿತುಕೊಂಡಿರುವಾತನನ್ನು ಕುಂದಾಪುರ ಠಾಣಾ ಅಪರಾಧ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ರೇವತಿ ಪಿ ರವರು ದಸ್ತಗಿರಿ ಮಾಡಿ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 221/2013 ಕಲಂ 109 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಬೈಂದೂರು: ದಿನಾಂಕ 25/05/13 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಮೋಹನ ಪೂಜಾರಿ (50) ತಂದೆ ದಿವಂಗತ ರಾಮ ಪೂಜಾರಿ ವಾಸ: ಬಾಸನಹಿತ್ಲು, ತೆಗ್ಗರ್ಸೆ ಗ್ರಾಮ, ಕುಂದಾಪುರ ತಾಲೂಕು ಎಂಬವರ ಮಗಳು ಸುಮಾರು 20 ವರ್ಷ ಪ್ರಾಯದ ಕುಮಾರಿ ರೇಣುಕಾ ಎಂಬವಳು ತೆಗ್ಗರ್ಸೆ ಗ್ರಾಮದ ಬಾಸನಹಿತ್ಲು ಎಂಬಲ್ಲಿ ಮನೆಯಲ್ಲಿ ಇಸ್ತ್ರಿ ಪೆಟ್ಟಿಗೆಯಿಂದ ಬಟ್ಟೆಗೆ ಇಸ್ತ್ರಿ ಹಾಕುತ್ತಿರುವಾಗ ಆಕಸ್ಮಿಕವಾಗಿ ಇಸ್ತ್ರಿ ಪೆಟ್ಟಿಗೆಯಿಂದ ದೇಹಕ್ಕೆ ಶಾಕ್ ತಗುಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವಳನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾಗಿರುತ್ತದೆ ಎಂಬುದಾಗಿ ಮೋಹನ ಪೂಜಾರಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 15/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ಪಿರ್ಯಾದಿದಾರರಾದ ಮರ್ಲಿ ಮೊಗೇರ್ತಿ (50) ಗಂಡ ದುಗ್ಗು ಮೊಗೇರ ವಾಸ ಪುಟುಹಿತ್ಲು, ಕರಾವಳಿ, ಶಿರೂರು ಗ್ರಾಮ ಎಂಬವರ ಗಂಡ ಸುಮಾರು 65 ವರ್ಷ ಪ್ರಾಯದ ದುಗ್ಗು ಮೊಗೇರ ಎಂಬವರು ಕೆಲವು ದಿನಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರು ಈ ಬಗ್ಗೆ ಹಲವಾರು ಕಡೆ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಇದ್ದು, ಈ ಬಗ್ಗೆ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು, ದಿನಾಂಕ 25/05/2013 ರಂದು ಬೆಳಿಗ್ಗೆ 06:00 ಗಂಟೆಯಿಂದ ಮಧ್ಯಾಹ್ನ 2:30 ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಶಿರೂರು ಗ್ರಾಮದ ಸಾವಂತಗುಡ್ಡೆ ಎಂಬಲ್ಲಿ ಪಿರ್ಯಾದಿದಾರಿಗೆ ಸಂಬಂಧಿಸಿದ ಇನ್ನೊಂದು ಮನೆಯಲ್ಲಿ ಮಾಡಿನ ಅಡ್ಡೆಗೆ ಕೇಬಲ್ ವಯರ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮರ್ಲಿ ಮೊಗೇರ್ತಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 16/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ಮಾರ್ಕೋಸ್ ವಿ ಜೆ (58) ಎಂಬವರು ಬೈಂದೂರು ಗ್ರಾಮದ ಅತ್ಯಾಡಿ ದೇವರಗದ್ದೆ ಎಂಬಲ್ಲಿ ವಾಸವಾಗಿದ್ದು ದಿನಾಂಕ 25/05/2013 ರಂದು ಬೆಳಿಗ್ಗೆ 07:30 ಗಂಟೆಗೆ ಅವರ ಜಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಬಗ್ಗೆ ಸದ್ರಿ ಬೆಂಕಿ ನಂದಿಸಲು ಕೊಡಪಾನದಲ್ಲಿ ನೀರು ತೆಗೆದುಕೊಂಡು ಹೋಗುವಾಗ ಗುಡ್ಡದಲ್ಲಿ ಯಾವುದೋ ಒಂದು ಮರದ ಗುತ್ತಿಯ ಮೇಲೆ ಬಿದ್ದು, ಅವರ ಹಿಂಭಾಗದ ತೊಡೆಗಳ ಮಧ್ಯೆ ಮರದ ಗುತ್ತಿ ಹೊಕ್ಕಿ ಗಂಭೀರ ಗಾಯಗೊಂಡವರನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಾರ್ಕೋಸ್ ರವರು ದಿನಾಂಕ 25/05/13 ರಂದು ಮಧ್ಯಾಹ್ನ 2:30 ಗಂಟೆಗೆ ಮೃತಪಟ್ಟಿದ್ದಾಗಿರುತ್ತದೆ ಎಂಬುದಾಗಿ ರಾಜು ಟಿ ಜೆ (35) ತಂದೆ ಜೋಸೆಫ್ ಎಂ ಸಿ ವಾಸ ಚಡತ್ ಕಲ್ ಮನೆ, ಶಿರೂರು ಪೋಸ್ಟ್ ಬೈಂದೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಣಿಪಾಲ: ದಿನಾಂಕ 25/05/2013 ರಂದು ಕರ್ವಾಲು ಎಂಬಲ್ಲಿನ ದಿವಂಗತ ಕೃಷ್ಣ ಮೂರ್ತಿ ನಾಯಕ್ ರವರ ಮಗ ಪ್ರತೀಕ್ (8 ವರ್ಷ) ಹಾಗೂ ಮೋಹನ್ ನಾಯಕ್‌ರವರ ಮಗ ಕಾರ್ತಿಕ್ (6 ವರ್ಷ) ಎಂಬ ಮಕ್ಕಳು ಅಲೆವೂರು ಗ್ರಾಮದ ಶಾಲೆಯ ಬದಿಯ ನದಿಯಲ್ಲಿ ಸುಮಾರು ಮಧ್ಯಾಹ್ನ 12:00 ಗಂಟೆಗೆ ಸ್ನಾನಕ್ಕೆಂದು ಹೋದ ಮಕ್ಕಳು ಮಧ್ಯಾಹ್ನ 3:30 ಗಂಟೆಯ ವೇಳೆಗೆ ಮಕ್ಕಳು ಕಾಣದೆ ಇದ್ದುದರಿಂದ ಪಿರ್ಯಾದಿದಾರರು ಮತ್ತು ಇತರರು ಸೇರಿ ಹುಡುಕಾಡಿದಾಗ ನದಿಯ ನೀರಿನಲ್ಲಿ ಮುಳುಗಿ ಹುಡುಕಾಡಿದಲ್ಲಿ ಇಬ್ಬರು ಮಕ್ಕಳು ಪತ್ತೆಯಾಗಿ ಅವರನ್ನು ಕೂಡಲೆ ಕೆ.ಎಂ.ಸಿ ಮಣಿಪಾಲಕ್ಕೆ ಹಾಜರುಪಡಿಸಿದಾಗ ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಯವರು ತಿಳಿಸಿದ್ದು, ಅವರು ಸ್ನಾನ ಮಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಶ್ರೀಕಾಂತ ನಾಯಕ್ (33) ತಂದೆ: ಪಾಂಡುರಂಗ ನಾಯಕ್, ವಾಸ: ಕರ್ವಾಲು ಮನೆ, ಅಲೆವುರು ಗ್ರಾಮ, ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 29/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: