Saturday, May 25, 2013

Daily Crimes Reported as On 25 /05/2013 at 07:00 Hrs

ಅಪಘಾತ ಪ್ರಕರಣಗಳು 
  • ಕಾಪು: ದಿನಾಂಕ  24-05-2013  ರಂದು  ಬೆಳಿಗ್ಗೆ 10-30 ಗಂಟೆಗೆ  ಉಡುಪಿ ತಾಲೂಕು  ಉಳಿಯಾರಗೊಳಿ ಗ್ರಾಮದ  ದಂಢತಿರ್ಥ ಶಾಲೆಯ ಬಳಿ ಶಶಿಧರ (35) ತಂದೆ ಗುರುವ ದೇವಾಡಿಗ  ವಾಸ  ಚಂದ್ರಿಕಾ ನಿವಾಸ್  ಪಣಿಯೂರು ಎಲ್ಲೂರುರವರ  ಸ್ನೇಹಿತ  ನಾಗೇಶ್  ರವರು ತನ್ನ  ಮೋಟಾರ್  ಸೈಕಲ್  ನಂಬ್ರ  ಕೆಎ20-ಇಎ-4086ನ್ನು  ರಸ್ತೆ ಕಾಮಗಾರಿ ನಡಯುತ್ತಿದ್ದ  ರಸ್ತೆಗೆ  ತಿರುಗಿಸಿ ರಸ್ತೆ ದಾಟುವರೇ ನಿಂತುಕೊಂಡಿರುವಾಗ  ಆಪಾದಿತ  ಬಸ್ಸು ಚಾಲಕ   ಕೆಎ-19 ಡಿ-9711 ನ್ನು ಬಸ್ಸನ್ನು ಪಾಂಗಾಳ  ಕಡೆಯಿಂದ ಆತೀ ವೇಗ   ಹಾಗೂ ಅಜಾಗರೂಕತೆಯಿಂದ   ರಸ್ತೆಯು ಬಲ  ಬದಿಗೆ ಚಲಾಯಿಸಿಕೊಂಡು ಬಂದು  ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ  ಪರಿಣಾಮ ಮೋಟಾರ್  ಸೈಕಲ್  ಸವಾರ ನಾಗೇಶ್ ರವರ   ರಸ್ತೆ ಬಿದ್ದು ,ಬಲಕಾಲಿನ  ಮಣಿಗಂಟಿನ  ಮೇಲ್ಬಾಗಕ್ಕೆ    ರಕ್ತಗಾಯವಾಗಿರುತ್ತದೆ ಈ ಬಗ್ಗೆ  ಶಶಿಧರ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 147 /2013 ಕಲಂ 279 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ಚೇತನ್(26),ತತಂದೆ:ಹೂವಪ್ಪ ಗೌಡ,ವಾಸ:ಬೆಳ್ಳಂಗಿ ಗ್ರಾಮ,ಮೇಗರಮಕ್ಕಿ ಅಂಚೆ,ಎನ್ ಆರ್ ಪುರ, ಚಿಕ್ಕಮಗಳೂರು ಎಂಬವರು  ದಿನಾಂಕ 23/05/2013 ರಂದು ಹೂವಿನ ವ್ಯಾಪಾರದ ಬಗ್ಗೆ ಮಾತನಾಡಲು   ಬೃಂದಾವನ ಹೋಟೆಲ್  ಸಮೀಪದ  ನಾಗಬನಕ್ಕೆ  ಬಂದಿದ್ದು  ಹಾಗೂ ಅಲ್ಲೆ ಸ್ವಲ್ಪ ಸಮಯ ನಿಂತಿರುವಾಗ ನಮ್ಮ ಊರಿನವರಾದ ಹಾಗೂ ನನ್ನ ಸ್ನೇಹಿತ  ಸಚಿನ ಎಂಬಾತನು  ತನ್ನ ಸೈಕಲನಲ್ಲಿ  ಬಂದು ಬೃಂದಾವನ ಹೋಟೆಲ್  ಹತ್ತಿರ ಇರುವ ಡಿವೈಡರ್ ದಾಟಿ  ರಾಮಕೃಷ್ಣ ಹೋಟೆಲ್ ಕಡೆಗೆ ರಸ್ತೆ ದಾಟಲು ನಿಂತಿರುವಾಗ  ಸಮಯ ಸುಮಾರು 21:50 ಗಂಟೆ ಸಮಯಕ್ಕೆ   ಮಣಿಪಾಲ ಕಡೆಯಿಂದ  ಉಡುಪಿ ಕಡೆಗೆ KA 20 EB 9201ನೇ ಮೋಟಾರು ಸೈಕಲ್ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಲಾಹಿಸಿಕೊಂಡು ಬಂದು  ಸ್ನೇಹಿತನಾದ ಸಚಿನ್ ಗೆ  ಡಿಕ್ಕಿ ಹೊಡೆದ ಪರಿಣಾಮ ನೆಲಕ್ಕೆ ಬಿದ್ದು  ಸಚಿನ್ ಗೆ ಎಡ ಮುಖಕ್ಕೆ ಗುದ್ದಿದ ಗಾಯ ಹಾಗೂ  ತಲೆಗೆ ರಕ್ತಗಾಯವಾಗಿದ್ದು  ಚಿಕಿತ್ಸೆಯ ಬಗ್ಗೆ  ಮಣಿಪಾಲದ ಕೆ ಎಮ್ ಸಿ  ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಅಪಘಾತದ ಬಗ್ಗೆ ಚೇತನ್ ರವರು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 253/2013 ಕಲಂ 279 338  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ಹರೀಶ ತಂದೆ: ಮಾದವ ವಾಸ: ನಾರಾಯಣಗುರು  ಹಾಲ್ ಬಳಿ,ಬನ್ನಂಜೆ ,ಉಡುಪಿರವರು ಕರಾವಳಿ ಜಂಕ್ಷನ್ ಬಳಿ ರಾತ್ರಿ ಸಮಯದಲ್ಲಿ  ಆಟೋರಿಕ್ಷಾ ಬಾಡಿಗೆಗೆ ನಿಲ್ಲುತ್ತಿದ್ದು  ದಿನಾಂಕ 24/05/203 ರಂದು ಕರಾವಳಿ ಜಂಕ್ಷನ್ ಬಳಿ ರಾತ್ರಿ 10:00 ಗಂಟೆಯಿಂದ ಬಾಡಿಗೆಗೆ ಕಾಯುತ್ತಿರುವಾಗ ಸಮಯ ಸುಮಾರು 11:00 ಗಂಟೆಗೆ ಮಂಗಳೂರು ಕಡೆಯಿಂದ ಕುಂದಾಪುರ ಕಡೆಗೆ  ಲಾರಿ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಅಡ್ಡದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಕುಂದಾಪುರದ ಕಡೆಗೆ ಮುಖಮಾಡಿರುವ ಟ್ರಾಫಿಕ್ ಸಿಗ್ನಲ್  ಲೈಟಿನ ಕಂಬಕ್ಕೆ ಬಂದು ಡಿಕ್ಕಿ ಹೊಡೆದ ಪರಿಣಾಮ  ಟ್ರಾಫಿಕ್ ಸಿಗ್ನಲ್  ಲೈಟಿನ ಕಂಬ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಸಿಗ್ನಲ್  ಲೈಟ್ ಕಂಬ  ಮತ್ತು ಅದಕ್ಕೆ ಅಳವಡಿಸಿದ ಸಿಗ್ನಲ್  ಲೈಟ್ ಗಳು ಹಾಗೂ ಜಾಹೀರಾತು ಫಲಕಗಳು ಸಂಪೂರ್ಣ ಜಖಂ ಗೊಂಡಿರುವುದಾಗಿದೆ.ಈ  ಸಿಗ್ನಲ್  ಲೈಟ್ ಕಂಬ,  ಸಿಗ್ನಲ್  ಲೈಟ್ ಗಳು ಜಖಂಗೊಳ್ಲಲು ಲಾರಿ  KA 25 B 5562 ನೇ ಚಾಲಕ ಪುಂಡಲೀಕಪ್ಪನ ಅತಿವೇಗ ಮತ್ತು ನಿರ್ಲಕ್ಷತನವೇ ಕಾರಣವಾಗಿರುತ್ತದೆ ಎಂಬುದಾಗಿ ಹರೀಶರವರು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 254/2013 ಕಲಂ 279   ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಹಲ್ಲೆ ಪ್ರಕರಣ
  • ಕುಂದಾಪುರ: ದಿನಾಂಕ:24/05/2013 ರಂದು ಸಂಜೆ 7:00 ಗಂಟೆಗೆ ಕುಂದಾಪುರ  ಕೊಟೇಶ್ವರದ ಮೀನು ಮಾರ್ಕೆಟ್ ನಿಂದ ಸ್ವಲ್ಪ ಮುಂದೆ ವೈ ಜಂಕ್ಷನ್ ಬಳಿ ನಿಂತುಕೊಂಡಿದ್ದಾಗ ಕೆಇಬಿ ಜೀಪು ಚಾಲಕ ಆನಂದ ಹಾಗೂ ಇತರ 3 ಜನರು ಹಣದ ವಿಚಾರದಲ್ಲಿ ಇಬ್ರಾಹಿಂ (43), ತಂದೆ: ದಿ ಅಬ್ದುಲ್ ರೆಹಮಾನ್, ವಾಸ: ನವನಗರ, ವಕ್ವಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬವರನ್ನ ಅಡ್ಡಗಟ್ಟಿ ತಡೆದು ನಿಲ್ಲಿಸಿ  ಕೈಯಿಂದ ಹೊಡೆದು ಕಾಲಿನಿಂದ ತುಳಿದು, ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಎಂಬುದಾಗಿ ಇಬ್ರಾಹಿಂರವರು ಆರೋಪಿತರುಗಳ ವಿರುದ್ಧ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 220/13 ಕಲಂ 341, 323, 504 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣ
  • ಕುಂದಾಪುರ: ಮೃತ  ಶಕ್ತಿ ಕುಮಾರ್ (52ವರ್ಷ)ಈತನು ಮದುವೆಯಾಗದೇ ಇದ್ದು  ವಿಪರೀತವಾಗಿ ಶರಾಬು ಕುಡಿಯುವ ಅಬ್ಯಾಸವನ್ನಿಟ್ಟುಕೊಂಡಿದ್ದು ಕೊಟೇಶ್ವರದ ನಂಬಿಯಾರ್ ಕ್ಲಿನಿಕ್ ಹತ್ತಿರ ವಿರುವ ಸ್ವಂತ ಕಟ್ಟಡದಲ್ಲಿ ರಾತ್ರಿ ಮಲಗಿಕೊಂಡಿದ್ದವನು  ದಿನಾಂಕ 24/5/2013ರಂದು ರಾತ್ರಿಸುಮಾರು 10-30 ಗಂಟೆಗೆ ತನ್ನ ಪಂಚೆಯಿಂದ  ಮಲಗುತ್ತಿದ್ದ ಕೋಣೆಯ ಹೊರಗಡೆ ಮಾಡಿನ ಪಕ್ಕಾಸಿನಲ್ಲಿದ್ದ ಕಬ್ಬಿ|ಣದ ಹುಕ್ಸಿಗೆ ಪಂಚೆಯನ್ನು ಕಟ್ಟಿ ಕುತ್ತಿಗೆಗೆನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೆ. ವಿಠಲ್ ದಾಸ್ ಭಟ್ ರವರು ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 31/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: