Friday, May 24, 2013

Daily Crimes Reported as On 24/05/2013 at 19:30 Hrsಕಳವು ಪ್ರಕರಣ 
  • ಉದುಪಿ : ಪ್ರಕಾಶ್  ತಂದೆ: ಶಂಕರ ಸುವರ್ಣ ,ವಾಸ: ಮಲ್ಪೆ ಕ್ರಾಸ್ ರಸ್ತೆ ,ಸಂತೆಕಟ್ಟೆ ಅಂಚೆ ,ಪುತ್ತೂರು,ಉಡುಪಿರವರು ಸ್ಪಂದನ ಅಪಾರ್ಟ್ ಮೆಂಟ್ ನ ಕೆಳ ಅಂತಸ್ತಿನಲ್ಲಿ ಬಾಡಿಗೆಗೆ ಮೊಬೈಲ್ ಅಂಗಡಿಯನ್ನು ಸುಮಾರು ನಾಲ್ಕ ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು ಪ್ರತಿ ದಿನ  ಬೆಳಗ್ಗೆ 09:00 ಗಂಟೆಗೆ  ಅಂಗಡಿಗೆ ಬಂದು  ರಾತ್ರಿ 09:30 ಗಂಟೆಗೆ  ಅಂಗಡಿಯನ್ನು ಮುಚ್ಚಿ ಮನೆಗೆ  ಹೋಗಿರುವರು  ಈ ದಿನ ಬೆಳಗ್ಗೆ  07:30 ಗಂಟೆಗೆ  ಸಂತೆಕಟ್ಟೆಯ  ರಿಕ್ಷಾ ಚಾಲಕ ಬದ್ರುದ್ದಿನರವರು ಮನೆಗೆ  ಬಂದು ಅಂಗಡಿಯ  ಶೆಟರ್ ಬಾಗಿಲಿನ ಬೀಗ  ಮುರಿದಿರುವ ವಿಚಾರವನ್ನು  ತಿಳಿಸಿದ್ದು ,ತಕ್ಷಣ ಹೋಗಿ ನೋಡಲಾಗಿ  ಅಂಗಡಿಯ  ಉತ್ತರ ದಿಕ್ಕಿನ  ಶೆಟರ್ ಗೆ ಹಾಕಿದ ಬೀಗವು ಮುರಿದು ನೆಲದ ಮೇಲೆ ಬಿದ್ದಿದ್ದು ,ಶೆಟರ್ ಬಾಗಿಲು  ತೆರೆದು ನೋಡಿದಾಗ ಶೋಕೆಸಿನಲ್ಲಿದ್ದ 9 ಹೊಸ  ಸ್ಯಾಮ್ ಸಂಗ್  ಕಂಪನಿಯ ಮೊಬೈಲ್ ಪೋನುಗಳು  ಕಳವಾಗಿರುವುದು ಕಂಡುಬಂದಿದೆ ಕಳವಾದ ಎಲ್ಲಾ ಮೊಬೈಲ್ ಗಳ  ಒಟ್ಟು ಮೌಲ್ಯ ರೂ 25,975.32 ಆಗಿರುತ್ತದೆ ಯಾರೋ ಕಳ್ಳರು  ದಿನಾಂಕ 23-05-2013ರ ರಾತ್ರಿ 21:30 ಗಂಟೆಯಿಂದ ದಿನಾಂಕ 24-05-2013 ರ ಬೆಳಗ್ಗೆ 07:30 ಗಂಟೆಯ ಮದ್ಯದ ಅವಧಿಯಲ್ಲಿ ಪಿರ್ಯಾದಿದಾರರ ಮೊಬೈಲ್ ಅಂಗಡಿಯ ಶೆಟರ್ ಬಾಗಿಲಿಗೆ  ಹಾಕಿದ್ದ  ಬೀಗವನ್ನು ಯಾವುದೋ ಸಾಧನದಿಂದ  ಮುರಿದು  ಶೆಟರ್ ಬಾಗಿಲನ್ನು ತೆರೆದು ಕಳವು ಮಾಡಿರುವುದಾಗಿದೆ ಎಂಬುದಾಗಿ ಪ್ರಕಾಶ್  ರವರು ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 252/2013 ಕಲಂ 457,380  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.   
ಅಪಘಾತ ಪ್ರಕರಣಗಳು 
  • ಕೋಟ: ದಿನಾಂಕ 23/05/2013 ರಂದು ಮಧ್ಯಾಹ್ನ 3:00 ಗಂಟೆಯ ಸಮಯ ಆಂತೋನಿ ಡಿಸೋಜ ತಂದೆ:ಬೆನ್ನಿ ಡಿಸೋಜ ವಾಸ: ದಂಡೆಬೆಟ್ಟು ಐರೋಡಿ ಗ್ರಾಮರವರ  ಭಾವ ಮ್ಯಾಕ್ಸಿಮ್ ಡಿಸೋಜ ಎಂಬವರು ಕೆ.ಎ.20-6625 ನೇ ಆಟೋರಿಕ್ಷಾವನ್ನು ಸಾಲಿಗ್ರಾಮ ಕಡೆಯಿಂದ ಚಲಾಯಿಸಿಕೊಂಡು ಬಂದು ಸಾಯಬ್ರಕಟ್ಟೆ ಕಡೆ ಹೋಗುವರೇ ಉಡುಪಿ ತಾಲೂಕು ಚಿತ್ರಪಾಡಿ ಗ್ರಾಮದ ಕೋಟ ಮೂರುಕೈ ಎಂಬಲ್ಲಿ ರಾ.ಹೆ.66 ರಲ್ಲಿ ತನ್ನ ಆಟೋರಿಕ್ಷಾವನ್ನು ತಿರುಗಿಸುವ ಸಮಯ ಆರೋಪಿಯು ಕೆ.ಎ.19 ಝಡ್-6657 ನೇ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭಾವನವರಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದಾಗಿದೆ ಈ ಬಗ್ಗೆ  ಆಂತೋನಿ ಡಿಸೋಜ ರವರು ಆರೋಪಿ ಕಾರು ಚಾಲಕನ ವಿರುದ್ಧ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 142 /2013 ಕಲಂ 279 338  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

1 comment:

Anonymous said...

I am extremely impressed along with your writing skills and also with the layout to your blog.
Is that this a paid theme or did you modify it yourself?

Anyway stay up the nice high quality writing, it is rare to look
a great weblog like this one nowadays..

my website; http://atozgate.com/