Friday, May 24, 2013

Daily Crimes Reported as On 24/05/2013 at 17:00 Hrs



ಅಪಘಾತ ಪ್ರಕರಣಗಳು   
  • ಶಿರ್ವಾ: ದಿನಾಂಕ 23-05-2013 ರಂದು ನಟರಾಜ (70 ವರ್ಷ)ತಂದೆ: ದಿ ರಾ ಮ ಸ್ವಾಮಿ,ವಾಸ : ಪರಶುರಾಮ ನಗರ ಕುಂಜಾರುಗಿರಿ ಕುರ್ಕಾಲು ಗ್ರಾಮ ಉಡುಪಿ ತಾಲೂಕುರವರು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೋರಟವರು ಶಿರ್ವಕ್ಕೆ ಬಂದು ಅಲ್ಲಿದ ಕೆಲಸದಾಳುವನ್ನು ಅರಸಿಕಟ್ಟೆ ಕೆಲಸಕ್ಕೆ ಬಿಟ್ಟು ವಾಪಾಸು ಮನೆ ಕಡೆಗೆ ಹೋಗುವರೇ ಅರಸಿಕಟ್ಟೆ ಯಲ್ಲಿ ರಸ್ತೆ ದಾಟುವಾಗ ಮದ್ಯಾಹ್ನ 12.15 ಗಂಟೆಗೆ ಶಿರ್ವ ಕಡೆಯಿಂದ ಮೋಟಾರ್‌ ಸೈಕಲ್‌ ಸವಾರ ಕೆಎ 19 ಡಿ 9742ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ನಟರಾಜರವರಿಗೆ ಢಿಕ್ಕಿ ಹೊಡೆದ ಪರಿಣಾಮ ಎಡಕಾಲಿನ ಮೊಣ ಗಂಟಿನ ಬಳಿ ಕೋಲುಕಲಿಗೆ ಹಾಗೂ ಎಡಕಣ್ಣಿನ ಉಬ್ಬಿಗೆ ರಕ್ತ ಬರು ಗಾಯವಾಗಿರುತ್ತದೆ ಎಂಬುದಾಗಿ ನಟರಾಜರವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2013 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.   
  • ಬ್ರಹ್ಮಾವರ: ದಿನಾಂಕ 24.05.2013 ರಂದು  ಬೆಳಿಗ್ಗೆ 02.15 ಗಂಟೆಯ ವೇಳೆಗೆ ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದ ಎನ್.ಎನ್. ಟ್ರೇಡರ್ಸ್ ಬಳಿ ರಾ.ಹೇ-66 ರಲ್ಲಿ  ಆರೋಪಿ ತನ್ನ ಟಿಪ್ಪರ್ ಎಪಿ 25 ಡಬ್ಲೂ 5036 ನೇ ದನ್ನು ಬಹ್ಮಾವರ ಕಡೆಯಿಂದ ಉಡುಪಿ ಕಡೆಗೆ  ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಗಣೇಶ (47) ತಂದೆ: ದಿ:ಫಕೀರಪೂಜಾರಿ, ವಾಸ:ಅಂಚಿಕಟ್ಟೆಮನೆ, ವಗ್ಗ ಅಂಚೆ ಕಾವಳ ಪಡೂರು ಗ್ರಾಮ, ಬಂಟ್ವಾಳ ತಾಲೂಕುರವರು ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಟವೇರ ಕಾರು ಕೆಎ-19- ಬಿ-7280 ಗೆ  ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂದಿನ ಡೋರು, ಬಂಪರ್, ಬಲ ಬದಿಯ ಬಾಡಿ ಕಾರ್ನರ್ ಜಖಂ ಗೊಂಡಿರುವುದಾಗಿದೆ. ಅಪಘಾತದ ಬಗ್ಗೆ ಗಣೇಶರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/2013 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ:ದಿನಾಂಕ 23-05-2013 ರಂದು ಜಯರಾಮ್ ಭಟ್,ತಂದೆ:ಕೃಷ್ಣ ಭಟ್ ವಾಸ:ಮನೆ ನಂ 162/1 ಬಾರ್ಗವ  ಗೋಮ್ಮಟೇಶ್ವರ  ರಸ್ತೆ,ಅನಂತಶಯನ ,ಕಾರ್ಕಳ,ಉಡುಪಿರವರು ಶಾರದ ಕಲ್ಯಾಣ ಮಂಟಪಕ್ಕೆ ಬಂದಿದ್ದು  ಬಾವನಿಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಹಣ ತರಲು ಎಟಿಎಮ್ ಗೆ ಇಬ್ಬರು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು  ಹೋಗಿ ಅಲಿಮೊ ಸಾಬ್ಜಿ ಕಟ್ಟಡದ  ಬಳಿ  ಇರುವ  ಎಟಿಎಮ್ ನ ಎದುರು  ಎಡಬಾಗದ ರಸ್ತೆಯನ್ನು ದಾಟಿ ಡಿವೈಡರ್  ಹತ್ತಿ  ಬಲಬಾಗದ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ  ಕರಾವಳಿ ಕಡೆಯಿಂದ  ಕೆ ಎ 03 ಎಮ್ ಎಸ್ 1770 ನೇ ಕಾರು ಚಾಲಕ  ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ  ರಸ್ತೆಗೆ ಬಿದ್ದು ಎಡತಲೆಯ ಎಡಗಣ್ಣಿನ ಹಣೆಯ ಮೇಲ್ಬಾಗಕ್ಕೆ ರಕ್ತಗಾಯವಾಗಿದ್ದು ಮೂರ್ಚೆ  ಹೋಗಿರುತ್ತಾರೆ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ ಎಮ್ ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ,ಡಿಕ್ಕಿ ಹೊಡೆದ ಕಾರಿನ ಚಾಲಕನ ಹೆಸರು ತಿಳಿದು ಬಂದಿದ್ದು ಅವನ ಹೆಸರು ಗ್ಲೇಮ್ ಸುಶಾಂತ್ ಎಂಬುದಾಗಿದ್ದು ಕಾರು ಚಾಲಕನ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಜಯರಾಮ್ ಭಟ್ ರವರು ಆರೋಪಿ ಕಾರು ಚಾಲಕನ ವಿರುದ್ಧ ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 251/2013 ಕಲಂ 279 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಹಲ್ಲೆ ಪ್ರಕರಣ ದೂರು ದಾಖಲು  
  • ಮಲ್ಪೆ: ಅರುಣ ಪ್ರಸಾದ್,(31 ವರ್ಷ)ತಂದೆ: ಶ್ರೀನಿವಾಸ್, ಕಡ್ತಕುದುರು ಹೂಡೆ ಪಡುತೋನ್ಸೆರವರು  space matrix designing & consulting ಕಂಪೆನಿಯಲ್ಲಿ project in charge ಆಗಿ ಕೆಲಸ ಮಾಡಿಕೊಂಡಿದ್ದು . ಕಂಪೆನಿ ಕಡ್ತ ಕುದ್ರುವನ್ನು ತೆಗದುಕೊಂಡಿದ್ದು ಕುದ್ರುವಿನ ದುರಸ್ತಿ ಬಗ್ಗೆ ದಿನಾಂಕ 23/5/2013 ರಂದು ಸಂಜೆ 4:30 ಗಂಟೆ ಸಮಯಕ್ಕೆ ಬಿಹಾರದ ಕೂಲಿ ಕೆಲಸದವರನ್ನು ಹಿಡಿದು ನದಿಯಲ್ಲಿ ಮರಳು ತೆಗೆದು ಕುದ್ರವನ್ನು ಸಮ ತಟ್ಟು ಮಾಡುತ್ತಿರುವ ಸಮಯ ಆರೋಪಿಗಳಾದ ಭೋಜ ಕುಂದರ್, ಜಗನ್ ಕುಂದರ್ ನಾಗೇಶ್ , ಗಣೇಶ್ ಕುಂದರ್ ಹಾಗೂ ಚೇತನ್ ಸುವರ್ಣ ತನ್ನ ಬಳಿ ಬಂದು ಬಿಹಾರದ ಕೂಲಿಯವರನ್ನು ಮರಳು ತೆಗೆಯಲು ಕರೆಸಿದ್ದು ಯಾಕೆ ಎಂದು ಕೇಳಿದಾಗ ಮರಳನ್ನು ಮಾರಾಟ ಮಾಡಲು ತೆಗೆಯುತ್ತಿಲ್ಲ ನಮ್ಮ ಕಂಪೆನಿಯ ಕುದ್ರವನ್ನು  ನದಿ ಕೊರೆತದಿಂದ ರಕ್ಷಿಸಲು ಮರಳು ತೆಗೆಯುವುದಾಗಿ ತಿಳಿಸಿದಾಗ ಆರೋಪಿತರೆಲ್ಲರೂ  ಸೇರಿ  ಕೈಯಿಂದ ದೋಣಿಯ ಜಲ್ಲೆಯಿಂದ ಹಾಗೂ ಬಕೆಟ್ ನಿಂದ ಸಿಕ್ಕಾಪಟ್ಟೆ ಹೊಡೆದು ನಂತರ ನೀನು ಬೆಂಗಳೂರಿನಿಂದ ನಮ್ಮೂರಿಗೆ ಬಂದು ಮರಳು ತೆಗೆದರೆ ನಿನ್ನನ್ನು  ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕರುತ್ತಾರೆ. ಈ ಬಗ್ಗೆ  ಅರುಣ ಪ್ರಸಾದ್ ರವರು ಆರೋಪಿಗಳ ವಿರುದ್ಧ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2013 ಕಲಂ 143, 147, 148, 323, 324, 506 ಜೊತೆಗೆ 149  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ಸೂರಜ ಕುಮಾರ್ ಶೆಟ್ಟಿ (27ವರ್ಷ)ತಂದೆ: ಸುಧಾಕರ ಶೆಟ್ಟಿ ವಾಸ:ಗ್ರಾಮ ಕುಂದಾಪುರರವರು ದಿನಾಂಕ 22/05/2013ರಂದು ಗೆಳೆಯನ ಮನೆಗೆ ಆನಗಳ್ಳಿ ಎಂಬಲ್ಲಿಗೆ ಹೋಗುವಾಗ ರಾತ್ರಿ ಸುಮಾರು 10:45 ಗಂಟೆಗೆ ಕೋಣಿಯ ಹಾಲು ಡೈರಿಯ ಎದುರು ತಲುಪುವಾಗ ಪರಿಚಯದ ಪ್ರಶಾಂತ ಶೆಟ್ಟಿ, ಸುದಾಕರ ಶೆಟ್ಟಿ, ಶಾಂತರಾಮ ಶೆಟ್ಟಿರವರು ಅಡ್ಡ ಕಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ನಿನ್ನ ಊರಿನಲ್ಲಿ ನಿನ್ನನ್ನ ಬದುಕಲು ಬೀಡುವುದಿಲ್ಲವೆಂದು ಹೇಳಿ ಕೈಗಳಿಂದ ಹೊಟ್ಟೆಗೆ,ಬೆನ್ನಿಗೆ,ಕಣ್ಣಿಗೆ,ತುಟಿಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ, ಎಂಬುದಾಗಿ ಸೂರಜ ಕುಮಾರ್ ಶೆಟ್ಟಿ ರವರು  ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 208 /2013 ಕಲಂ 323,341,504,506 ಜೊತೆಗೆ 34  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: