Wednesday, May 22, 2013

Daily Crimes Reported as On 22/05/2013 at 07:00 Hrs


ಅಪಘಾತ ಪ್ರಕರಣಗಳು
  • ಕಾಪು:ದಿನಾಂಕ 21/05/2013 ರಂದು ಸಂಜೆ 4:20 ಗಂಟೆಗೆ ಆರೋಪಿ ಕೆ.ಎ-01 ಎಫ್ಎ 2160 ನೇ ಕೆ.ಎಸ್.ಆರ್.ಟಿ.ಸಿ. ವೋಲ್ವೊ ಬಸ್ಸನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾಪು ಹಳೆ ಮಾರಿಗುಡಿ ದೇವಸ್ಥಾನದ ಸ್ವಾಗತ ಗೋಪುರ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೀರಾ ಬಲಬದಿಗೆ ಅಂದರೆ ರಸ್ತೆಯ ಪೂರ್ವ ಬದಿಗೆ ಬಂದು ಕೆಎ 20 ಡಬ್ಲ್ಯೂ 2273 ನೇ ಹೊಂಡಾ ಆಕ್ಟೀವ್‌ಗೆ ಢಿಕ್ಕಿ ಹೊಡೆದ ಪರಿಣಾಮ ಹೊಂಡಾ ಆಕ್ಟಿವ್ ಸವಾರ, ಪಿರ್ಯಾದಿದಾರರಾದ ಸುನಿಲ್ ಭಂಡಾರಿ (34) ತಂದೆ: ದಾಮೋದರ್ ಭಂಡಾರಿ ವಾಸ ಶುಭ ನಿವಾಸ ಕೆರ್ಮಾಲ್ ಗ್ರಾಮ ಮತ್ತು ಅಂಚೆ ಮಂಗಳೂರು ತಾಲೂಕುರವರ ಮಾವ, ಬಾಲಕೃಷ್ಣ ಶೆಟ್ಟಿ(45) ಮತ್ತು ಸಹಸವಾರ ಸುನಿಲ್ ಭಂಡಾರಿರವರ ಅತ್ತೆ ಮಮತಾ ಬಿ ಶೆಟ್ಟಿ (38) ರವರು ಹೊಂಡಾ ಆಕ್ಟಿವ್‌ ಸಮೇತ ರಸ್ತೆಗೆ ಬಿದ್ದು, ತಲೆಗೆ ತೀರ್ವ ತರಹದ ಪೆಟ್ಟಾದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋದಲ್ಲಿ ಸಂಜೆ ಸುಮಾರು 5:30 ಗಂಟೆಗೆ ಬಾಲಕೃಷ್ಣ ಶೆಟ್ಟಿ ಹಾಗೂ ಸಂಜೆ 5:45 ಗಂಟೆಗೆ ಮಮತಾ ಬಿ ಶೆಟ್ಟಿ ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುನಿಲ್ ಭಂಡಾರಿರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 145/2013 ಕಲಂ: 279 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ:ದಿನಾಂಕ 21/05/2013 ರಂದು ಪಿರ್ಯಾದಿದಾರರಾದ ಪರಶುರಾಮ (32) ತಂದೆ: ದಿವಂಗತ ಬಾಳಪ್ಪ, ವಾಸ:ಮಣ್ಣಿನಕಟ್ಟಿ ಗ್ರಾಮ, ಬಾಗಲಕೋಟೆ ತಾಲೂಕುರವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುವರೇ ಉಡುಪಿ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 19:30 ಗಂಟೆಗೆ ಶಾರದಾ ಕಲ್ಯಾಣ ಮಂಟಪ ಜಂಕ್ಷನ್‌ ಬಳಿ ರಸ್ತೆಯ ಬಲ ಭಾಗದಲ್ಲಿ ನಡೆದುಕೊಂಡು  ಹೋಗುತ್ತಿರುವಾಗ ಕೆಎ 20 ಇಸಿ 8008 ನೇ ಮೋಟಾರು ಸೈಕಲ್‌ ಸವಾರನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪರಶುರಾಮರವರಿಗೆ ಢಿಕ್ಕಿ ಹೊಡೆದ ಪರಿಣಾಮ ಪರಶುರಾಮರವರು ರಸ್ತೆಗೆ ಬಿದ್ದು, ಪರಿಣಾಮ ಎಡ ಕಣ್ಣಿನ ಬಳಿ ಹಾಗೂ ಹಣೆಯಲ್ಲಿ ಹಾಗೂ ಮೂಗಿಗೆ ತಾಗಿ ರಕ್ತ ಗಾಯವಾಗಿರುತ್ತದೆ ಮತ್ತು ಬಲ ಕೈ ಅಂಗೈ ಹೆಬ್ಬೆರಳಿಗೆ ಒಳ ಜಖಂ ಆಗಿದ್ದು, ಹೊಟ್ಟೆಯ ಬಳಿ ಗುದ್ದಿದ ನೋವು ಉಂಟಾಗಿರುತ್ತದೆ. ಪರಶುರಾಮರ ಸಂಬಂಧಿ ಹಾಗೂ ಬೈಕ್‌ ಸವಾರ ಗಾಂಧಿ  ಆಸ್ಪತ್ರೆಗೆ ಕರೆದುಕೊಂಡು ಬಂದು ಒಳ ರೋಗಿಯಾಗಿ ದಾಖಲಿಸಿದ್ದು. ಬೈಕನ ಸವಾರ ಹಾಗೂ ಸಹಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಪರಶುರಾಮರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 248/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: