Tuesday, May 21, 2013

Daily Crimes Reported as On 21/05/2013 at 19:30 Hrs

ಅಪಘಾತ ಪ್ರಕರಣ
  • ಪಡುಬಿದ್ರಿ:ದಿನಾಂಕ 21/05/2013 ರಂದು ಮಧ್ಯಾಹ್ನ 2:30 ಗಂಟೆಗೆ ನಡ್ಸಾಲು ಗ್ರಾಮದ, ಪಡುಬಿದ್ರಿ ಬೀಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಎ-19 ಎನ್-2042 ನೇ ಕಾರು ಚಾಲಕನಾದ ಸತೀಶ್ ಕುಮಾರ್ ಎಂಬವರು ಕಾರನ್ನು ಪಡುಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಮಂಗಳೂರು ಕಡೆಯಿಂದ ಬರುತ್ತಿದ್ದ ಕೆಎ-01 ಬಿ-7539 ನೇ ಹೆಚ್.ಪಿ ಗ್ಯಾಸ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂರು ಮಂದಿಗೂ ತಲೆಗೆ ಹಣೆಗೆ ಮೈ ಕೈಗಳಿಗೆ ರಕ್ತಗಾಯವಾಗಿ ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ಕೊಂಡು ಹೋದಲ್ಲಿ ಕಾರಿನ ಚಾಲಕ ಸತೀಶ್ ಕುಮಾರ್ ಎಂಬವರು ಮೃತಪಟ್ಟಿದ್ದು ಹಾಗೂ ಕಾರಿನಲ್ಲಿದ್ದ ಅರುಣ ಎಸ್‌ ರೈ ಹಾಗೂ ಸತೀಶ್ ರೈ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಡೆಗೆ ಕೊಂಡು ಹೋಗಿದ್ದು ಅವರು ಕೂಡಾ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಟಿ. ಪಳನಿವೇಲು (32), ತಂದೆ: ತಾಸ ಗೌಂಡರ್, ವಾಸ: 1/39 ಎ, ನಡುರಸ್ತೆ, ವಿ.ಪಿ ಅಗರಂ ಪೋಸ್ಟ್. ಕಲ್ಲಕುರ್ಚಿ ತಾಲೂಕು, ವಿಲಪುರಂ ಜಿಲ್ಲೆ, ತಮಿಳುನಾಡುರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 83/2013 ಕಲಂ 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಂಡಸು ಕಾಣೆ ಪ್ರಕರಣ
  • ಬೈಂದೂರು:ಪಿರ್ಯಾದಿದಾರರಾದ ಶೇಷಗಿರಿ ಯಾನೆ ಪ್ರಕಾಶ ಆಚಾರ್ಯ (38) ತಂದೆ:ಹೆರಿಯಣ್ಣ ಆಚಾರ್ಯ ವಾಸ:ಬೆಟ್ಟಿನಮನೆ, ನಾವುಂದ ಗ್ರಾಮರವರ ತಮ್ಮನಾದ ಸುಮಾರು ಶ್ರೀನಿವಾಸ ಆಚಾರ್ಯ (30) ಎಂಬವನು ನಾವುಂದದ ಮಸ್ಕಿ ಎಂಬಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದು, ಪ್ರತೀ ದಿನ ಬೆಳಿಗ್ಗೆ 08:00 ಗಂಟೆಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನದ ನಂತರ ಹೋಗುತ್ತಿರಲಿಲ್ಲ. ಎಂದಿನಂತೆ ದಿನಾಂಕ:19/05/2013 ರಂದು ಬೆಳಿಗ್ಗೆ 08:00 ಗಂಟೆಗೆ ತನ್ನ ಮನೆಯಾದ ನಾವುಂದ ಗ್ರಾಮದ ಬೆಟ್ಟಿನಮನೆ ಎಂಬಲ್ಲಿಂದ ಕೆಲಸಕ್ಕೆ ಎಂದು ಹೇಳಿ ಹೊರಟು ಹೋದವನು ಕೆಲಸಕ್ಕೆ ಸಹ ಹೋಗದೇ ಈವರೆಗೆ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾನೆ.ಈ ಬಗ್ಗೆ ಶೇಷಗಿರಿ ಯಾನೆ ಪ್ರಕಾಶ ಆಚಾರ್ಯರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 155/2013 ಕಲಂ ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: