Tuesday, May 21, 2013

Daily Crimes Reported as On 21/05/2013 at 17:00 Hrs


ಅಪಘಾತ ಪ್ರಕರಣಗಳು
  • ಬ್ರಹ್ಮಾವರ: ದಿನಾಂಕ:20/05/2013 ರಂದು 19:45 ಗಂಟೆಗೆ ಉಡುಪಿ ತಾಲೂಕು ಚಾಂತಾರು ಗ್ರಾಮದ ಎಸ್.ಎಮ್.ಎಸ್ ಬಸ್ಸು ನಿಲ್ದಾಣದ ಬಳಿ ಪಿರ್ಯಾದಿದಾರರಾದ ಥೋಮಸ್ ರೋಡ್ರಿಗಸ್ (42) ತಂದೆ: ಜೋನ್ ರೋಡ್ರಿಗಸ್ ವಾಸ:ಜೋನ್ಸನ್ಸ್ ನಡುಬೆಟ್ಟು ಉಪ್ಪೂರು ಗ್ರಾಮ, ಉಡುಪಿ ತಾಲೂಕುರವರ ಗುರುತು ಪರಿಚಯವಿರುವ ಎಸ್ತೆಲ್ ರೋಡ್ರಿಗಸ್ (70) ಎಂಬವರು ಎಸ್.ಎಮ್.ಎಸ್ ಬಸ್ಸು ನಿಲ್ದಾಣದ ಬಳಿ ಉಡುಪಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಆರೋಪಿಯು ತನ್ನ ಟಾಟಾ ಏಸ್ ನಂಬ್ರ ಕೆಎ-20 ಬಿ-4792 ನೇಯದನ್ನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಎಸ್ತೆಲ್ ರೋಡ್ರಿಗಸ್‌ರವರಿಗೆ ಢಿಕ್ಕಿ  ಹೊಡೆದ ಪರಿಣಾಮ ಎರಡೂ ಕಾಲಿಗೂ ಮೂಳೆ ಮುರಿತದ ಗಾಯವಾಗಿದ್ದು,ಸೊಂಟಕ್ಕೆ, ತಲೆಯ ಹಿಂಭಾಗಕ್ಕೆ ತೀವ್ರ ತರದ ಗಾಯಗೊಂಡವರನ್ನು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ 22:30 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಥೋಮಸ್ ರೋಡ್ರಿಗಸ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 179/2013 ಕಲಂ 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ ಸಂಚಾರ:ದಿನಾಂಕ 21/05/2013 ರಂದು ಸುಮಾರು ಬೆಳಿಗ್ಗೆ 8:15 ಗಂಟೆಗೆ ಕುಂದಾಪುರ ತಾಲೂಕಿನ   ಹಂಗಳೂರು ಗ್ರಾಮದ ದುರ್ಗಾಂಬಾ ಗ್ಯಾರೇಜಿನ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆಪಾದಿತ ಸದಾಶಿವ ಶೆಟ್ಟಿ  ಎಂಬವರು ಕೆಎ 51 ಬಿ 2471 ನೇ ಬಸ್ಸನ್ನು ಕುಂದಾಪುರ ಕಡೆಯಿಂದ ವೇಗದಿಂದ ಹಾಗೂ ದುಡುಕಿನಿಂದ ಚಲಾಯಿಸಿಕೊಂಡು ಬಂದು, ಡಿವೈಡರ್ ಬದಿಯಿಂದ ರಾಷ್ಟ್ರೀಯ ಹೆದ್ದಾರಿ 66 ರಸ್ತೆಗೆ ಅಡ್ಡ ಚಲಾಯಿಸಿ, ಪಿರ್ಯಾದಿದಾರರಾದ ಮಂಜು ಬಿಲ್ಲವ (47) ತಂದೆ:ಕಾಳ ಪೂಜಾರಿ ವಾಸ:ಪ್ರಕೃತಿ, ಕೋಡಿ ರಸ್ತೆ, ಹಂಗಳೂರು, ಕುಂದಾಪುರ ತಾಲೂಕುರವರು ಕೋಟೇಶ್ವರ ಕಡೆಯಿಂದ ಬರುತ್ತಿದ್ದ ಕೆಎ 20 ಎನ್‌ 3872 ನೇ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಪಿರ್ಯಾದಿ ಮಂಜು ಬಿಲ್ಲವ, ಗಣಪತಿ  ಆಚಾರ್ ಹಾಗೂ ಕಾರು ಚಾಲಕ ಸುರೇಶ ಕುಂದರ್ ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಮಂಜು ಬಿಲ್ಲವರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 39/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಕುಂದಾಪುರ ಸಂಚಾರ:ದಿನಾಂಕ 21/05/2013 ರಂದು ಬೆಳಿಗ್ಗೆ ಸುಮಾರು 8:00 ಗಂಟೆಗೆ ಕುಂದಾಪುರ ತಾಲೂಕಿನ   ಹಂಗಳೂರು ಗ್ರಾಮದ ದುರ್ಗಾಂಬಾ ಆಫೀಸ್/ಗ್ಯಾರೇಜಿನ  ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆಪಾದಿತ ಜಾನ್ ಡಿಸೋಜಾ ಎಂಬವರು ಕೆಎ 19 ಎಮ್‌ಸಿ 6185 ನೇ ಕಾರನ್ನು ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗದಿಂದ  ಚಲಾಯಿಸಿಕೊಂಡು ಬಂದು, ರಸ್ತೆ ದಾಟಲು ನಿಂತುಕೊಂಡಿದ್ದ ಚೇತನ್ ಕುಮಾರ್ ರೈ ಎಂಬವರಿಗೆ ನಿರ್ಲಕ್ಷತನದಿಂದ ಢಿಕ್ಕಿ ಹೊಡೆದ ಪರಿಣಾಮ, ಚೇತನ್ ಕುಮಾರ್ ರೈ ರಸ್ತೆಗೆ  ಬಿದ್ದು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಚಂದ್ರಶೇಖರ ಬಿ  (40) ತಂದೆ ಕುಷ್ಟ ಮೊಗವೀರ ವಾಸ:ರವೀಂದ್ರ ನಿಲಯ, ಬ್ರಹ್ಮನ ಗುಡಿ ರಸ್ತೆ, ಹಂಗಳೂರು ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 40/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ ನಗರ:ದಿನಾಂಕ:20/05/2013 ರಂದು ರಾತ್ರಿ 11:30 ಗಂಟೆಗೆ ಜೋರಾಗಿ ಸಿಡಿಲು ಮಳೆ ಇದ್ದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಮಾನಿಗುಡ್ಡೆ ಎಂಬಲ್ಲಿ ಪಿರ್ಯಾದಿದಾರರಾದ ಅಣ್ಣಿ (30) ತಂದೆ:ದಿವಂಗತ ಮೆಣ್ಪ ವಾಸ: ಮಾಣಿಗುಡ್ಡೆ, ನಕ್ರೆ, ಕುಕ್ಕುಂದೂರು ಗ್ರಾಮ, ಕಾರ್ಕಳರವರ ಮನೆಯ ಬಳಿ ವಾಸ್ತವ್ಯವಿರುವ ಅಣ್ಣಿರವರ ಹಿರಿಯ ಸಹೋದರ ರಾಜು ಯಾನೆ ಚಿಂಗ ಎಂಬವರಿಗೆ ಆಕಸ್ಮಿಕ ಸಿಡಿಲು ಬಡಿದಿದ್ದು ಇವರನ್ನು ಚಿಕಿತ್ಸೆ ಬಗ್ಗೆ 108 ನೇ ಆರೋಗ್ಯ ಕವಚ ವಾಹನದಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕೊಂಡುಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಯವರು ರಾಜು ಯಾನೆ ಚಿಂಗರವರನ್ನು ಪರೀಕ್ಷೀಸಿ ಮೃತಪಟ್ಟಿದ್ದಾಗಿ ತಿಳಿಸಿದ್ದಾಗಿದೆ. ಈ ಬಗ್ಗೆ ಅಣ್ಣಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 12/13 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಕಾಪು:ದಿನಾಂಕ 21/05/2013 ರಂದು ಬೆಳಿಗ್ಗೆ 7:30 ಗಂಟೆಗೆ ಮಲ್ಲಾರು ಗ್ರಾಮದ ಆನಂದ ಹಾಗೂ ಇಂದಾದ್‌ ಇವರು ಮಲ್ಲಾರು ಗ್ರಾಮದ ಸಾನದ ಮನೆ ಎಂಬಲ್ಲಿಯ ರಮೇಶ್ ಪೂಜಾರಿಯವರ ಮನೆಯ ತೆಂಗಿನ ಮರಗಳನ್ನು ಕಡಿಯುವರೆ ಹೋಗಿದ್ದು, ಆನಂದ (34) ಎಂಬುವವರು ಒಂದು ಮರವನ್ನು ಕಡಿದು ಇನ್ನೊಂದು ತೆಂಗಿನ ಮರವನ್ನು ಕಡಿಯುವರೆ ಮರವನ್ನು ಹತ್ತಿ ಅದರ ಗರಿಗಳನ್ನು ಕಡಿದು ಕೆಳಗೆ ಇಳಿಯುತ್ತಿರುವಾಗ್ಗೆ ಆಕಸ್ಮಿಕವಾಗಿ ಕೈಜಾರಿ ಅವರು ಮರದಿಂದ ಕೆಳಕ್ಕೆ ಪ್ರೇಮ ಕೋಟ್ಯಾನ್‌ರವರ ಮನೆಯ ಅಂಗಳದ ತಗಡಿನ ಮಾಡಿನ ಮೇಲೆ ಬಿದ್ದು, ನಂತರ ಅಂಗಳಕ್ಕೆ ಬಿದ್ದು ಪೆಟ್ಟಾಗಿ ಪ್ರಜ್ಞೆ ತಪ್ಪಿದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ 09:45 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಗೋಪಾಲ ಪೂಜಾರಿ (57) ತಂದೆ:ದಿವಂಗತ ತನಿಯಾ ಕೋಟ್ಯಾನ್ ವಾಸ:ತ್ರಿಶಾ ನಿವಾಸ ಬಡಗು ಮಲ್ಲಾರು ಗ್ರಾಮರವರು ನೀಡಿದ ದೂರಿನಂತೆ ಕಾಪು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 15/2013 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಲ್ಪೆ:ದಿನಾಂಕ 20/05/2013 ರಂದು ಸಂಜೆ 6:30 ಗಂಟೆಗೆ ಮೂಡತೋನ್ಸೆ ಗ್ರಾಮದ ಸಂತೆಕಟ್ಟೆ ಕಲ್ಯಾಣಪುರ ರಸ್ತೆಯ ಬದಿಯಲ್ಲಿ ಸುಮಾರು 60 ರಿಂದ 65 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಕಂಡುಬಂದಿದ್ದು ಈತನು ವಯೋವೃದ್ದನಾಗಿದ್ದು, ಮರದ ಬಳಿಯಲ್ಲಿ ಕುಳಿತು ಸ್ವಾಭಾವಿಕವಾಗಿ ಸಾವನ್ನಪ್ಪಿದಂತೆ ಕಂಡುಬಂದಿರುತ್ತದೆ.ಈ ಬಗ್ಗೆ ಮರೀನಾ (37) ತಂದೆ:ರೋಜಿ ಜೋನ್ ವಾಸ:ಗೊರಟ್ಟಿ ಆಸ್ಪತ್ರೆಯ ಎದುರು ಕಲ್ಯಾಣಪುರ ಅಂಚೆ ಪುತ್ತೂರು ಗ್ರಾಮರವರು ನೀಡಿದ ದೂರಿನಂತೆ 33/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: