Monday, May 20, 2013

Daily Crimes Reported as On 20/05/2013 at 19:30 Hrsಅಪಘಾತ ಪ್ರಕರಣ

  • ಕೋಟಾ: ದಿನಾಂಕ 19/05/2013 ರಂದು ಸಮಯ 20:45 ಗಂಟೆಗೆ ರಾಘು ತಂದೆ: ಗುಲ್ಲ ವಾಸ: ಗಾವಳಿ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಕುಂದಾಪುರರವರು ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಗಾವಳಿಯ ತನ್ನ ಮನೆ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ರಶ್ವತ್ ಶೆಟ್ಟಿಯವರ ಮನೆಯ ಎದುರು ತಲುಪುವಾಗ ಆರೋಪಿಯು ಬಿದ್ಕಲಕಟ್ಟೆ ಕಡೆಯಿಂದ ಕೆ.ಎ.20 ಡಬ್ಲೂ-1361 ನೇ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಮದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಘುರವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರಿಗೆ ಸಾದಾ ಸ್ವರೂಪದ ರಕ್ತಗಾಯವಾಗಿದ್ದು ಢಿಕ್ಕಿ ಹೊಡೆದ ಮೋಟಾರು ಸೈಕಲ್ ಸವಾರನಿಗೂ ಕೂಡ ಪೆಟ್ಟಾಗಿದ್ದಾಗಿದೆ ಎಂಬುದಾಗಿ ರಾಘುರವರು ನೀಡಿದ ದೂರಿನಂತೆ 138/2013 ಕಲಂ 279,337 ಐ.ಪಿ.ಸಿ.& 134 (ಎ) (ಬಿ) ಐ.ಎಂ.ವಿ.ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಜನಾರ್ಧನ ಶೆಟ್ಟಿಗಾರ ತಂದೆ: ನಾರಾಯಣ ಶೆಟ್ಟಿಗಾರ ವಾಸ: ಶ್ರೀಮಾತಾ, ವಿ.ಪಿ ನಗರ 4ನೇ ಮೈನ್‌ ರೋಡ್‌, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ತಂಗಿ ಗಾಯತ್ರಿ (30 ವರ್ಷ) ಎಂಬವರು ದಿನಾಂಕ 20/05/2013 ರಂದು ಮಧ್ಯಾಹ್ನ 12:00 ಗಂಟೆಯಿಂದ 01:00 ಗಂಟೆ ನಡುವಿನ ಅವಧಿಯಲ್ಲಿ ತನ್ನ ತವರು ಮನೆಯಾದ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿ.ಪಿ ನಗರ 4ನೇ ಮೈನ್‌ ರೋಡ್‌ನಲ್ಲಿರುವ ಶ್ರೀಮಾತಾ ಎಂಬ ಹೆಸರಿನ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ದಾಂಪತ್ಯ ವಿರಸದಿಂದ ಮನನೊಂದು ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮಾನಸಿಕವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಜನಾರ್ಧನ ಶೆಟ್ಟಿಗಾರರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 28/2013 ಕಲಂ: 174 ಸಿ.ಆರ್‌.‌ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ  ಪ್ರಕರಣ
  • ಶಂಕರನಾರಾಯಣ: ಶ್ರೀಮತಿ ಜಯಲಕ್ಷ್ಮೀ ತಂದೆ ದಿವಂಗತ ಸುಬ್ಬ ಕುಲಾಲ ವಾಸ: 5 ಸೆಂಟ್ಸ್‌, ನೆಲ್ಲಿಕಟ್ಟೆ, ಕಾವ್ರಾಡಿ ಅಂಚೆ, ಆಂಪಾರು ಗ್ರಾಮ ಕುಂದಾಪುರ ತಾಲೂಕುರವರಿಗೆ ಮತ್ತು ಆರೋಪಿ ಶ್ರೀಮತಿ ರಮೀಝಾರವರಿಗೆ ಕೋಳಿ ವಿಷಯದಲ್ಲಿ ಸುಮಾರು ಮೂರು ದಿನಗಳ ಹಿಂದೆ ಜಗಳವಾಗಿದ್ದು ಅದೇ ಉದ್ದೇಶದಿಂದ ದಿನಾಂಕ 19/05/2013 ರಂದು ರಾತ್ರಿ 09;00 ಗಂಟೆಗೆ ಆರೋಪಿ ಶ್ರೀಮತಿ ರಮೀಝಾರವರು ಶ್ರೀಮತಿ ಜಯಲಕ್ಷ್ಮೀರವರ ಮನೆಯಾದ ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಆಂಪಾರು ಗ್ರಾಮದ  ನೆಲ್ಲಿಕಟ್ಟೆಯ 5 ಸೆಂಟ್ಸ್ ಎಂಬಲ್ಲಿನ ಅವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶಮಾಡಿ ಅವರನ್ನು ಉದ್ದೇಶಿಸಿ ಆವಾಚ್ಯ ಶಬ್ದದಿಂದ ಬೈದು ಅವರ ತಲೆಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಶ್ರೀಮತಿ ಜಯಲಕ್ಷ್ಮೀರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/13 ಕಲಂ 447,324,504,506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: