Monday, May 20, 2013

Daily Crimes Reported as On 20/05/2013 at 17:00 Hrs

ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ
  • ಬೈಂದೂರು: ಶ್ರೀಮತಿ ಪ್ರತಿಮಾ ಗಂಡ: ವಿಶ್ವನಾಥ ಪೂಜಾರಿ ವಾಸ ಪಡುವಾಯನಮನೆ, ನಾವುಂದ ಗ್ರಾಮರವರು ದಿನಾಂಕ 29/01/2013 ರಂದು ನಾವುಂದ ಗ್ರಾಮದ ಪಡುವಾಯನಮನೆ ಶೀನ ಪೂಜಾರಿಯವರ ಮಗನಾದ ವಿಶ್ವನಾಥ ಎಂಬವನೊಂದಿಗೆ ವಿವಾಹವಾಗಿದ್ದು ಮದುವೆಯ ಸಮಯ ವರನ ಕಡೆಯವರು 15 ಲಕ್ಷ  ನಗದು ಹಾಗು 50, ಪವನ್ ಬಂಗಾರವನ್ನು ವರದಕ್ಷಿಣೆಯಾಗಿ ಬೇಡಿಕೆ ಇಟ್ಟಿದ್ದು ಶ್ರೀಮತಿ ಪ್ರತಿಮಾ ರವರ ಮನೆಯವರು 40 ಪವನ್ ಬಂಗಾರವನ್ನು ವರದಕ್ಷಿಣೆಯಾಗಿ ನೀಡಿ ಮದುವೆಯ ಖರ್ಚು ಭರಿಸಲು ಒಪ್ಪಿ ಅದರಂತೆ ಮದುವೆ ಮಾಡಿಕೊಟ್ಟಿರುತ್ತಾರೆ. ನಂತರದ ದಿನಗಳಲ್ಲಿ ಅವರ ಗಂಡನಾದ ವಿಶ್ವನಾಥ, ಮಾವನಾದ ಶೀನ ಪೂಜಾರಿ, ಅತ್ತೆಯಾದ ದುಗ್ಗಮ್ಮ, ಗಂಡನ ಅತ್ತಿಗೆಯಾದ ಕವಿತಾ, ಗಂಡನ ಬಾವನಾದ ಬಾಬು ಪೂಜಾರಿಯವರು ನಾವುಂದ ಗ್ರಾಮದ ಪಡುವಾಯನ ಮನೆಯಲ್ಲಿ ಪ್ರತಿನಿತ್ಯ ಶ್ರೀಮತಿ ಪ್ರತಿಮಾ ರವರಿಗೆ ತವರು ಮನೆಯಿಂದ ಹೆಚ್ಚಿಗೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಕೈಯಿಂದ ಹೊಡೆದು ಮನೆಯಿಂದ ಹೊರಗೆ ಹಾಕಿ ಸೀಮೆ ಎಣ್ಣೆ ಹಾಕಿ ಸಾಯಿಸುವುದಾಗಿ ಬೆದರಿಕೆಯೊಡ್ಡಿರುವುದಾಗಿದೆ. ಎಂಬುದಾಗಿ ಶ್ರೀಮತಿ ಪ್ರತಿಮಾರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 154/2013 ಕಲಂ 498(ಎ) 504,323,506 ಜೊತೆಗೆ 149  ಐ ಪಿ ಸಿ ಮತ್ತು 3, 4 ವರದಕ್ಷಿಣೆ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: