Monday, May 20, 2013

Daily Crimes Reported as On 20/05/2013 at 07:00 Hrs ಅಪಘಾತ ಪ್ರಕರಣಗಳು  
  • ಕುಂದಾಪುರ: ದಿನಾಂಕ 19/05/2013 ರಂದು ಸಮಯ ಸುಮಾರು  ಸಂಜೆ  5:10 ಗಂಟೆಗೆ ಕುಂದಾಪುರ ತಾಲೂಕಿನ   ಹಂಗಳೂರು   ಗ್ರಾಮದ  ದುರ್ಗಾಂಭಾ  ಆಪೀಸಿನ  ಎದುರುಗಡೆ, ರಾ.ಹೆ 66 ರಲ್ಲಿ     ಆಪಾದಿತ ದಿನೇಶ ಎಂಬವರು KA01-F-9150 ನೇ KSRTC ಬಸ್‌ ನ್ನು    ಉಡುಪಿ ಕಡೆಯಿಂದ  ಕುಂದಾಪುರ  ಕಡೆಗೆ ಅತೀವೇಗದಿಂದ  ಚಲಾಯಿಸಿಕೊಂಡು ಬಂದು,  ಪ್ರವೀಣ ಕುಮಾರ್ ರವರು ಪೂರ್ವ ಬದಿಯ ರಾ.ಹೆ  ರಸ್ತೆಗೆ ಬರಲು ಡಿವೈಡರ್ ಬದಿಯ ರಾ.ಹೆ  ರಸ್ತೆಯ  ಅಂಚಿನಲ್ಲಿ ನಿಲ್ಲಿಸಿಕೊಂಡಿದ್ದ KA20-D-1991 ನೇ  ಮೋಟಾರ್ ಸೈಕಲ್‌‌ ಗೆ   ನಿರ್ಲಕ್ಷತನದಿಂದ ಡಿಕ್ಕಿ ಹೊಡೆದ ಪರಿಣಾಮ, ಪ್ರವೀಣ ಕುಮಾರ್  ವಾಹನ ಸಮೇತ ರಸ್ತೆಗೆ  ಬಿದ್ದು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಸಚಿನ್ ಪೈ (25 ವರ್ಷ) ಚಿತ್ರಾನಂದ ಪೈ, ವಾಸ: ಕುದ್ರೆಕೆರೆ ಬೆಟ್ಟು, ಮಾರ್ಕೋಡು, ಕೊಟೇಶ್ವರ ಗ್ರಾಮ, ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2013 ಕಲಂ:279,337 ಐ.ಪಿ.ಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಆತ್ಮಹತ್ಯೆ ಪ್ರಕರಣ  
  • ಉಡುಪಿ: ದಿನಾಂಕ 19/05/2013 ರಂದು 17:30 ಗಂಟೆಯಿಂದ 18:15 ಗಂಟೆಯ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಮಾರ್ಪ್ಪಳಿ ಕಾರ್ತೀಕ್ (17) ತಂದೆ ಕೃಷ್ಣ ಮೂರ್ತಿ ವಾಸ: ನಾಗ ಜ್ಯೋತಿ ನಿಲಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಎಂಬವರ ಮನೆಯಲ್ಲಿ  ಕೃಷ್ಣ ಮೂರ್ತಿ (49) ಎಂಬವವರು ಬಬ್ಬು ಸ್ವಾಮಿ ದೇವರ ಬ್ರಹ್ಮ ಕಲಶೋತ್ಸವಕ್ಕೆ  ಹೋದವರು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲಿನ ಚಿಲಕವನ್ನು ಒಳಗಡೆಯಿಂದ ಹಾಕಿಕೊಂಡು  ಮಲಗುವ ಕೋಣೆಯಲ್ಲಿರುವ ಸಿಲೀಂಗ್ ಫ್ಯಾನ್‌ಗೆ ಕುತ್ತಿಗೆಗೆ ನೈಲಾನ್ ಹಗ್ಗೆದಿಂದ ಬಿಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಆತ್ಮಹತ್ಯೆಗೆ ಆರ್ಥಿಕ ಆಡಚಣೆಯಲ್ಲದೇ ಮಾನಸಿಕವಾಗಿ ಜೀವನದಲ್ಲಿ ಜಿಗುಪ್ಸೆ  ಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಕಾರ್ತೀಕ್ ರವರು ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಯು ಡಿಆರ್ 21/13 ಕಲಂ 174 ಸಿ ಆರ್ ಪಿ ಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಇತರೆ ಪ್ರಕರಣ  
  • ಮಲ್ಪೆ: ದಿನಾಂಕ 19/05/2013ರಂದು ಪ್ರಸನ್ನ ಕುಮಾರ್ (29ವರ್ಷ)ತಂದೆ:ಅಪ್ಪಾಜಿ ಗೌಡ ವಾಸ:ನರ್ಸಯ್ಯನ ಅಗ್ರಹಾರ ಕಾಡನೂರ್ ಅಂಚೆ ಮದುರೆ ಹೋಬಳಿ ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬವರು ತನ್ನ ಹೆಂಡತಿ ಶ್ರೀಮತಿ ನಳಿನಿ 2 ವರ್ಷದ ಮಗ ಹಿತೇಶ್ ಗೌಡ ಹಾಗೂ ಕುಟುಂಬದವರೊಂದಿಗೆ ಮಲ್ಪೆಯಿಂದ ಸೈಂಟ್ ಮೇರಿಸ್ ಐಲ್ಯಾಂಡಿಗೆ ಪ್ರಯಾಣಿಕರನ್ನು ಪ್ರಯಾಣಿಸುತ್ತಿದ್ದ ಬೋಟಿನಲ್ಲಿ ಇತರ ಪ್ರಯಾಣಿಕರೊಂದಿಗೆ ಪ್ರಯಾಣಿಸಿ ವಾಪಾಸ್ಸು ಸಂಜೆ 5.30ಗಂಟೆಗೆ ಸೈಂಟ್ ಮೇರಿಸ್ ಐಲ್ಯಾಂಡಿನಿಂದ ವಾಪಾಸ್ಸು ಹೋರಟು ಮಲ್ಪೆ ಪ್ಯಾರಡೈಸ್ ಕಡೆಗೆ ಬರುತ್ತಾ ದಡ ಸಮೀಪಿಸುತ್ತಿದ್ದಂತೆ ಸಂಜೆ 6.10ಗಂಟೆಗೆ ನೀರಿನ ಅಲೆಗಳ ಅಬ್ಬರ ಜಾಸ್ತಿಯಾಗಿ ಬೋಟ್ ಮಗುಚಿ ಬಿದ್ದು ಸಮುದ್ರದಲ್ಲಿ ಮುಳುಗುತ್ತಿದ್ದವರನ್ನು ತಮಿಳು ಮೀನುಗಾರರು ರಕ್ಷಿಸಿದರು ಕೂಡ 2 ವರ್ಷದ ಮಗು ಕಣ್ಮರೆಯಾಗಿದ್ದು ಪಿರ್ಯಾದಿದಾರರ ಕುಟುಂಬದ 4 ಮಕ್ಕಳು ಇಬ್ಬರು ಮಹಿಳೆಯರು ಅಸ್ವಸ್ಥರಾಗಿದ್ದು ನಂತರ ತಿಳಿಯಲಾಗಿ ಮೇ 15ರ ಬಳಿಕ ಸಮುದ್ರದಲ್ಲಿ ಪ್ರಯಾಣಿಕರ ಬೋಟ್ ಬಿಡಬಾರದೆಂಬ ನಿಬಂದನೆ ಇದ್ದರು ಯಾವುದೇ ಲೈಫ್ ಜಾಕೆಟ್ ನೀಡದೆ ಬೋಟ್ ನಲ್ಲಿ ಸಾಗಿಸಬಹುದಾದ ಪ್ರಯಾಣಿಕರ ಮಿತಿಗಿಂತ ಜಾಸ್ತಿ ಪ್ರಯಾಣಿಕರನ್ನು ತುಂಬಿಸಿಕೊಂಡು ದುಡುಕಿನಿಂದ ಬಾಡಿಗೆ ಪಡೆದು ಈ ಬೋಟ್ ದುರಂತಕ್ಕೆ ಕಾರಣರಾದ ಅಪಾದಿತ ಶಿವಪಂಚಾಕ್ಷರಿ ಬೋಟ್ ರೈಡರ್ ಮತ್ತು ಬೋಟಿಗೆ ಸಂಬಂಧಪಟ್ಟ ವ್ಯೆಕ್ತಿಗಳು ಇವರ ವಿರುದ್ದ ಸೂಕ್ತ ಕ್ರಮ ಜರಗಿಸುವರೇ ಇವರ ವಿರುದ್ಧ ಪ್ರಸನ್ನ ಕುಮಾರ್ ರವರು ನೀಡಿದ ದೂರಿನನ್ವಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2013 ಕಲಂ 280. 282. 337. 304A ಐಪಿಸಿ ಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: