Sunday, May 19, 2013

Daily Crimes Reported as On 19/05/2013 at 19:30 Hrs

ಅಪಘಾತ ಪ್ರಕರಣಗಳು 
  • ಬೈಂದೂರು: ದಿನಾಂಕ: 18/05/2013 ರಂದು ರಾತ್ರಿ ಸಮಯ ಸುಮಾರು 22:00 ಗಂಟೆಗೆ ಬೋನಿಪಸ್ ನಝರತ್ (42) ತಂದೆ: ದಿ.ಫಸ್ಕಲ್ ನಝರತ್ ವಾಸ: ಪಡುವರಿ ಚರ್ಚ್ ಬಳಿ, ಪಡುವರಿ ಗ್ರಾಮರವರು ಪಡುವರಿ ಗ್ರಾಮದ ಕಲ್ಲರಹಿತ್ಲು, ಬೆಸ್ಕೂರ್ ಹೊಳೆಯ ಮೋರಿಯ ಎಡಗಡೆಯ ಅಂಚಿನಲ್ಲಿ ನಿಂತು ಜಾರಿ ಹಿಡಿಯುತ್ತಿರುವ ಸಂದರ್ಭದಲ್ಲಿ ಬೈಂದೂರು ಕಡೆಯಿಂದ ಸೀತಾರಾಮಚಂದ್ರ ಮಂದಿರ ರಸ್ತೆಯಿಂದಾಗಿ ಒಂದು ರಿಕ್ಷಾ ಟೆಂಪೋವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋರಿಯ ತೀರಾ ಎಡಬದಿಯ ಅಂಚಿನಲ್ಲಿ ನಿಂತುಕೊಂಡಿದ್ದ ಬೋನಿಪಸ್ ನಝರತ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಎಡಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿ, ಬಲಕೈ ಮೊಣಗಂಟಿಗೆ ಒಳಜಖಂ ಹಾಗೂ ರಕ್ತ ಗಾಯವಾಗಿರುತ್ತದೆ. ದಾರಿದೀಪದ ಬೆಳಕಿಲ್ಲದ ಕಾರಣ ಅಪಘಾತ ನಡೆಸಿದ ರಿಕ್ಷಾದ ನಂಬ್ರವನ್ನು ನೋಡಲು ಸಾಧ್ಯವಾಗದೇ ಇದ್ದು, ಆರೋಪಿ ರಿಕ್ಷಾ ಟೆಂಪೋ ಚಾಲಕನು ಅಪಘಾತ ನಡೆಸಿ ಅಲ್ಲಿಂದ ಪರಾರಿಯಾಗಿರುತ್ತಾನೆ ಈ ಬೋನಿಪಸ್ ನಝರತ್ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 153/2013 ಕಲಂ:279,338 ಐ ಪಿ ಸಿ ಮತ್ತು 134(ಎ)(ಬಿ) ಐ ಎಂ ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಗಂಗೊಳ್ಳಿ: ಗುರುಪ್ರಸಾದ್‌ (23) ತಂದೆ: ಸುಬ್ರಮಣ್ಯ ಬಿ.ಜಿರವರು ಜುಬೀರ್‌ ಹಾಗೂ ಆತನ ಗೆಳೆಯರಾದ ಸುರೇಶ್‌ರಾಜ್‌, ಕ್ರಾಂತಿ ಕುಮಾರ್, ನಿತಿನ್, ಮುರುಗನ್‌, ಸುಬ್ರಮಣ್ಯ ರವರೊಂದಿಗೆ ಎಪಿ-22-ಎ-2655 ನೇ ಟವೇರಾ ಚವರ್ಲೆಟ್ ಕಾರಿನಲ್ಲಿ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದು. ಗುರುಪ್ರಸಾದ್‌ ರವರು ಕಾರನ್ನು ಚಲಾಯಿಸುತ್ತಿದ್ದು ಮುರುಡೇಶ್ವ ಪ್ರವಾಸ ಮುಗಿಸಿ ದಿನಾಂಕ 19-05-2013 ರಂದು ವಾಪಾಸು ಆಂದ್ರಪ್ರದೇಶಕ್ಕೆ ಎಪಿ-22-ಎ-2655 ನೇ ಟವೇರಾ ಚವರ್ಲೆಟ್ ಕಾರಿನಲ್ಲಿ ಹೊರಟಿದ್ದು. ಕುಂದಾಪುರ ತಾಲೂಕು ಹೊಸಾಡು ಗ್ರಾಮದ ರಾಹೆ-66 ರ ಮಂಜುನಾಥ ಬಾಡಿ ಗ್ಯಾರೇಜ್‌ನಿಂದ ಸ್ವಲ್ಪ ಮುಂದೆ ಬೆಳಿಗ್ಗೆ 10.45 ಗಂಟೆಗೆ ತಲಪಿದಾಗ ಎದುರಿನಿಂದ ಕುಂದಾಪುರದಿಂದ ಬೈಂದೂರು ಕಡೆಗೆ ಕೆಎ-25-ಎನ್‌-6429 ನೇ ಮಾರುತಿ 800 ಕಾರಿನ ಚಾಲಕನಾದ ಇಮ್ರಾನ್‌ ಆಲಿ ಖಾನ್‌ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟವೆರಾ ಕಾರಿಗೆ ಡಿಕ್ಕಿ ಹೊಡದಿದ್ದು. ಪರಿಣಾಮ ಟವೇರಾ ಕಾರಿನಲ್ಲಿದ್ದ ಸುರೇಶರಾಜ್‌ ರವರು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಹಾಗೂ ಕೆಎ-25-ಎನ್‌-6429 ನೇ ಮಾರುತಿ 800 ಕಾರಿನಲ್ಲಿದ್ದ ಚಾಲಕ ಇಮ್ರಾನ್‌ ಆಲಿ ಖಾನ್‌ ಹಾಗೂ ಎಕ್ರಾ ಖಾನ್‌ ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆ ಯಲ್ಲಿ  ನಸ್ರಿನ್‌ ಬಾನು, ತೆಹಸಿನ್‌ ಬಾನು, ನಾಜ್ರಿನ್‌ ಖಾನ್‌, ಉಮಾರ್‌ ಫಾರುಕ್‌ ಶೇಖ್‌‌ ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಅಪಘಾತದ ಬಗ್ಗೆ ಗುರುಪ್ರಸಾದ್‌ ರವರು ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2013 ಕಲಂ:279,337,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: