Sunday, May 19, 2013

Daily Crimes Reported as On 19/05/2013 at 17:00 Hrs



ಅಪಘಾತ ಪ್ರಕರಣಗಳು  
  • ಉಡುಪಿ: ನಾಸೀರ್‌ ಹುಸೇನ್‌, ತಂದೆ:ದಿ.ಅಬ್ದುಲ್‌ ಖಾದರ್, ವಾಸ: ಮದನಿ ಮಂಜಿಲ್‌, ಆತ್ರಾಡಿ,ಉಡುಪಿ ಎಂಬವರು ತಮ್ಮ  ಸ್ವಿಫ್ಟ್‌ ಕಾರು ನಂಬ್ರ ಕೆಎ20ಪಿ6641ನೇದರಲ್ಲಿ ಮದುವೆ ಸಮಾರಂಭಕ್ಕೆ ಉದ್ಯಾವರಕ್ಕೆ ಹೋಗುವರೇ ತನ್ನ ತಾಯಿ ಹಾಗೂ ತಮ್ಮ ಹೆಂಡತಿಯವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ್ಗೆ ಸಮಯ ಸುಮಾರು 11:45ಗಂಟೆಗೆ ಉಡುಪಿ ಬಿಗ್‌‌ ಬಜಾರ್‌ನ ಎದುರು ಏಕಮುಖ ರಸ್ತೆಯಲ್ಲಿ ಕಿನ್ನಿಮೂಲ್ಕಿ ಕಡೆಗೆ ಹೋಗುತ್ತಿರುವಾಗ್ಗೆ ಉಡುಪಿನಗರ ಸಭೆಯ ಗೂಡ್ಸ್‌ ರಿಕ್ಷಾ ನಂಬ್ರ ಕೆಎ20ಬಿ7862ನೇದನೆಯನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಗರೂಕತೆಯಿಂದ ಕಿನ್ನಿಮೂಲ್ಕಿ ಕಡೆಯಿಂದ ರಸ್ತೆಯ ವಿರುದ್ದ ದಿಕ್ಕಿನಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಎದುರು ಬದಿ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರು ಬದಿ ಜಖಂಗೊಂಡಿರುತ್ತದೆ. ಅಲ್ಲದೆ ಅಪಘಾತವೆಸಗಿದ ರಿಕ್ಷಾದಲ್ಲಿದ್ದ ಒಬ್ಬ ವ್ಯಕ್ತಿಗೆ ರಕ್ತಗಾಯ ಉಂಟಾಗಿದ್ದಾಗಿದೆ ಈ ಬಗ್ಗೆ ನಾಸೀರ್‌ ಹುಸೇನ್‌ ರವರು ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 247/13 ಕಲಂ 279,337  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಿರ್ವಾ: ದಿನಾಂಕ 18-05-2013 ರಂದು ಸಂಜೆ 16-00 ಗಂಟೆಗೆ ಉಡುಪಿ ತಾಲೂಕು ಶಿರ್ವ ಗ್ರಾಮದ ಮಟ್ಟಾರು ಸೊಸೈಟಿ ಹತ್ತಿರ ನೋಯೆಲ್ ಕೆನ್ಯೂಟ್ ಮೆಂಡೋನ್ಸ ಎಂಬವರು ಮೋಟಾರು ಸೈಕಲು KA 20 EA 7277 ನ್ನು ಸವಾರಿ ಮಾಡಿಕೊಂಡು ಶಿರ್ವಾ ಕಡೆಯಿಂದ ಮೂಡುಬೆಳ್ಳೆ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಮೂಡುಬೆಳ್ಳೆ ಕಡೆಯಿಂದ ಶಿರ್ವ ಕಡೆಗೆ ಲಾರಿ MEG 8007 ನ್ನು ಅದರ ಚಾಲಕ ಪ್ರದೀಪ್ ನಾಯಕ್  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮೋಟಾರು ಸೈಕಲಿಗೆ   ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲು ಸವಾರ ನೋಯೆಲ್ ಕೆನ್ಯೂಟ್ ಮೆಂಡೋನ್ಸ ಅವರ ತಲೆಗೆ ಮತ್ತು ಮೈ ಕೈಗಳಿಗೆ ಗಾಯವಾಗಿರುತ್ತದೆ ಈ ಬಗ್ಗೆ ಶ್ರೀ ನೀಲ್ ಕ್ವಾಡ್ರಸ್ (43 ವರ್ಷ)ತಂದೆ ಫೆಡ್ರಿಕ್ ಕ್ವಾಡ್ರಸ್ ,ವಾಸ ಜಾಲಮೇಲು , ಪೆರ್ನಾಲು ಅಂಚೆ , ಪಿಲಾರು ಗ್ರಾಮ ಉಡುಪಿ ತಾಲೂಕು ಫೋನ್ ರವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 247/13 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಮೋಸ ಪ್ರಕರಣ  
  • ಬೈಂದೂರು: ಕುಂದಾಫುರ ತಾಲೂಕು ನಂದನವನ ಗ್ರಾಮದ ಸಾಗರ್ ಗ್ರಾನೈಟ್ ಕಟ್ಟಿಂಗ್ ಹಾಗೂ ಪಾಲಿಶ್ ಉದ್ದಿಮೆಯು ಶ್ರೀಮತಿ ಸೌಮ್ಯ ಭಟ್ ಎಂಬವರ ಮಾಲೀಕತ್ವದಲ್ಲಿದ್ದು,ಈ ಉದ್ದಿಮೆಯನ್ನು ನಡೆಸಲು ಯಾವುದೇ ಪರವಾನಿಗೆಯನ್ನು ಪಡೆಯದೇ, ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಉದ್ದಿಮೆಯನ್ನು ನಡೆಸುತ್ತಿದ್ದು, ಜಿಲ್ಲಾಧಿಕಾರಿಯವರ ಆದೇಶದಂತೆ  ದಿನಾಂಕ:05/04/2013 ರಂದು ಬೈಂದೂರು ವಿಶೇಷ ತಹಶೀಲ್ದಾರರು ಸ್ಥಳ ತನಿಖೆ ಮಾಡಿ ಈ ಬಗ್ಗೆ ಕೈಗಾರಿಕೆಗೆ ಬೀಗಮುದ್ರೆ ಮಾಡಿ  ಕೈಗಾರಿಕೆ ನಡೆಸದಂತೆ ಕೈಗಾರಿಕಾ ಮಾಲಿಕರಿಗೆ ತಿಳಿಸದರೂ ಕೂಡಾ ಹಾಗೂ ಕಂದಾಯ ನಿರೀಕ್ಷಕರು ಬೈಂದೂರು ರವರು ಪಿ ಡಿ ಓ ರವರೊಂದಿಗೆ ಸೇರಿ ಸ್ಥಳ ತನಿಖೆ ಮಾಡಿ ಕೈಗಾರಿಕೆ ನಡೆಸದಂತೆ ಸೂಕ್ತ ಎಚ್ಚರಿಕೆ ನೀಡಿದ್ದರೂ ಕೂಡಾ ಕೈಗಾರಿಕೆ ಮಾಲಿಕರು ಬೆಳಗಿನ ಜಾವ ಹಾಗೂ ರಾತ್ರಿಯ ಸಮಯದಲ್ಲಿ ಕಾನೂನುಬಾಹಿರವಾಗಿ ಕೈಗಾರಿಕೆ ನಡೆಸುತ್ತಿದ್ದು ದಿನಾಂಕ 18/05/2013 ರಂದು ಮಟ್ಟುಗೋಲು ಹಾಕಲು ತೀರ್ಮಾನಿಸಿ ಮಹಜರು ತಯಾರಿಸಲಾಗಿದೆ.ಈ ಬಗ್ಗೆ ನಿರಂಜನ್ ಎ ಎಂ (42) ತಂದೆ:ಮರಿಯಪ್ಪ ಗಣಿ ಹಾಗೂ ಭೂ ವಿಜ್ಞಾನ ಅಧಿಕಾರಿ ರಜತಾದ್ರಿ ಮಣಿಪಾಲರವರು ನೀಡಿದ ದೂರಿನಂತೆ ಬೈಂದೂರು  ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/13 ಕಲಂ 188, 420 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಬಾವಿಗೆ ಹಾರಿ ವೃದ್ದೆಯ ಸಾವು ಪ್ರಕರಣ  
  • ಹೆಬ್ರಿ: ಶ್ರೀಮತಿ ವನಜಾ ಶೇರಿಗಾರ್ತಿ, ವಾಸ: ಮುಳ್ಳುಗುಡ್ಡೆ, ಶಿವಪುರ ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬವರು ತನ್ನ ತಾಯಿ ಶ್ರೀಮತಿ ಬಾಬ್ಬಕ್ಕ ಶೆರಿಗಾರ್‌ (80)ರವರೊಂದಿಗೆ ಶಿವಪುರ ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ಒಂದೇ ಮನೆಯಲ್ಲಿ ಬೇರೆಬೇರೆಯಾಗಿ ವಾಸ ಮಾಡಿಕೊಂಡಿದ್ದು ತಾಯಿಯವರು ಸುಮಾರು 8-9 ವರ್ಷಗಳಿಂದ ಎಡಕಾಲಿನ ಪಾದದ ಗಂಟಿನ ಗಾಯದ ಬಗ್ಗೆ ಬಳಲುತ್ತಿದ್ದು ಈ ಬಗ್ಗೆ ಅವರು ಮದ್ದು ಮಾಡಿದರೂ ಗುಣವಾಗದ ಕಾರಣ ಅವರು ಮಾನಸಿಕವಾಗಿ ನೊಂದುಕೊಂಡಿದ್ದು  ಅದೇ ಉದ್ದೇಶದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 18/05/2013 ರಂದು ಸಂಜೆ 6:30 ಗಂಟೆಗೆ ತನ್ನ ಮನೆಯ ಬಳಿ ಇದ್ದ ಆವರಣ ಇಲ್ಲದ ಬಾವಿಗೆ ಹಾರಿ ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ.ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಶ್ರೀಮತಿ ವನಜಾ ಶೇರಿಗಾರ್ತಿರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/13 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಹಲ್ಲೆ ಪ್ರಕರಣಗಳು  
  • ಮಲ್ಪೆ: ದಿನಾಂಕ: 19-05-2013 ರಂದು ರಾತ್ರಿ 12.30 ಗಂಟೆಗೆ ಮಲ್ಪೆ ಬಂದರಿನ ಬೋಟಿನಲ್ಲಿ ಶ್ರೀ ಲಕ್ಷ್ಮಣ ಕೋಟ್ಯಾನ್(40ವರ್ಷ), ತಂದೆ:ದಿ:ಮುತ್ತ ಸುವರ್ಣ, ವಾಸ: ಪಿತ್ರೋಡಿ, ಬೆಳ್ಳಿಕುದ್ರು, ಉದ್ಯಾವರ ಗ್ರಾಮ, ಉಡುಪಿ ತಾಲೂಕು ಎಂಬವರು ಇದ್ದು, ಸ್ನೇಹಿತ ಚಂದ್ರ ಎಂಬಾತನೊಂದಿಗೆ ಮಾತನಾಡುತ್ತಿದ್ದಾಗ, ಆರೋಪಿತ ರಾಘು @ ರಾಘವೇಂದ್ರ ಎಂಬಾತನು ಬೋಟಿನಿಂದ ಕೆಳಗಿಳಿದು ಬರಲು ಹೇಳಿ ಬೋಟಿನಿಂದ ಕೆಳಗಿಳಿದು ಬರುತ್ತಿದ್ದಾಗಲೇ ಏಕಾಏಕಿ ಬಾಟ್ಲಿಯಿಂದ ತಲೆಗೆ ಹೊಡೆದುದರಿಂದ ತಲೆಗೆ ತೀವ್ರ ಗಾಯವಾಗಿ ರಕ್ತ ಸುರಿದುದಲ್ಲದೇ, ತಲೆ ತಿರುಗಿ ಬಿದ್ದು ಬಲಕೈ, ಬಲ ಅಳ್ಳೆಗೆ ಗಾಯವಾಗಿದ್ದು ಈ ಬಗ್ಗೆ ಲಕ್ಷ್ಮಣ ಕೋಟ್ಯಾನ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2013 ಕಲಂ 326, 324 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: