Sunday, May 19, 2013

Daily Crimes Reported as On 19/05/2013 at 07:00 Hrs

ಹೆಂಗಸು ಮತ್ತು ಹುಡುಗ ಕಾಣೆ ಪ್ರಕರಣ
  • ಹಿರಿಯಡ್ಕ: ದಿನಾಂಕ 16/05/2013  ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದುದಾರರಾದ ತಾರಾನಾಥ (58) ತಂದೆ ದಿವಂಗತ ಸೀನ ವಾಸಪಂಚಮಿ”, ಕುಕ್ಕಿಕಟ್ಟೆ ಅಂಚೆ, ಬೆಳ್ಳಂಪಳ್ಳಿ ಗ್ರಾಮ, ಉಡುಪಿ ತಾಲೂಕು ಎಂಬವರ ಮಗಳು ಶ್ರೀಮತಿ ವಿನೋದಾ (25) ಎಂಬವಳು ತನ್ನ ಮಗ ಗಗನ್ (3) ಎಂಬವನನ್ನು ಜೊತೆಯಲ್ಲಿ ಕರೆದುಕೊಂಡು ಉದ್ಯಾವರ ಆಯುರ್ವೇದ ಆಸ್ಪತ್ರೆಯಲ್ಲಿ ಸ್ವರ್ಣ ಪ್ರಾಷಾನ ಹಾಕಿಸಿಕೊಂಡು ಬರುತ್ತೇನೆಂದು ಹೇಳಿ ಪಿರ್ಯಾದುದಾರರ ಮನೆಯಿಂದ ಹೋದವಳು ಬಳಿಕ ಮನೆಗೆ ವಾಪಾಸ್ಸು ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎಂಬುದಾಗಿ ತಾರಾನಾಥರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 72/2013 ಕಲಂ ಹೆಂಗಸು ಮತ್ತು ಹುಡುಗ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಕೊಲ್ಲೂರು: ದಿನಾಂಕ 17/05/2013 ರಂದು ಮಧ್ಯಾಹ್ನ 02:30 ಗಂಟೆಗೆ ಪಿರ್ಯದಿದಾರರಾದ ಬಾಲಕೃಷ್ಣ ಶೆಟ್ಟಿ (45) ತಂದೆ: ದಿವಂಗತ ಗೋವಿಂದ ಶೆಟ್ಟಿ ವಾಸ: ಹಡುವಲು ಗದ್ದೆ ಮನೆ, ಹೊಸೂರು ಗ್ರಾಮ, ಕುಂದಾಪುರ ತಾಲೂಕು ಎಂಬವರು ತನ್ನ ಚಿಕ್ಕಪ್ಪನಾದ ಶಿವರಾಮ ಶೆಟ್ಟಿಯವರೊಂದಿಗೆ ಮಾರಣಕಟ್ಟೆ ಕಡೆಯಿಂದ ಚಿತ್ತೂರು ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಮಾರಣಕಟ್ಟೆ ಸೇತುವೆ ಬಳಿ ಚಿತ್ತೂರು ಕಡೆಯಿಂದ ಮೋಟಾರು ಬೈಕ್ ನಂಬ್ರ ಕೆಎ 47 0037 ನೇದರ ಸವಾರನಾದ ಪ್ರಸನ್ನ ಎ ಚಂದನರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲ ಬಾಗಕ್ಕೆ ಚಲಾಯಿಸಿಕೊಂಡು ಬಂದು ಶಿವರಾಮ ಶೆಟ್ಟಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಶಿವರಾಮ ಶೆಟ್ಟಿಯವರು ರಸ್ತೆಗೆ ಬಿದ್ದು ತಲೆಯ ಹಿಂಬಾಗಕ್ಕೆ ರಕ್ತಗಾಯ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಅಲ್ಲದೆ ಅಪಘಾತ ಸಮಯ ಅಪಾದಿತ ಗಾಯಳುವಿಗೆ ಯಾವುದೇ ರೀತಿಯಿಂದ ಸಹಕರಿಸಿರುವುದಿಲ್ಲ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಆರೋಪಿಸಿ ಬಾಲಕೃಷ್ಣ ಶೆಟ್ಟಿರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2013 ಕಲಂ 279, 337 ಐಪಿಸಿ ಮತ್ತು 134 ()(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: