Friday, May 17, 2013

Daily Crimes Reported as On 17/05/2013 at 17:00 Hrs


ಅಪಘಾತ ಪ್ರಕರಣ
  • ಗಂಗೊಳ್ಳಿ:ಪಿರ್ಯಾದಿದಾರರಾದ ಭಾಸ್ಕರ (48) ತಂದೆ:ಮುತ್ತು ಪೂಜಾರಿ, ಕುಂಜೂರುಬೈಲು, ಅರಾಟೆ, ಹೊಸಾಡು ಗ್ರಾಮ, ಕುಂದಾಪುರ ತಾಲೂಕು,ಉಡುಪಿ ಜಿಲ್ಲೆರವರು ದಿನಾಂಕ 17/05/2013 ರಂದು ಚಿಕ್ಕಯ್ಯ ಹಾಗೂ ಶೀನ ಪೂಜಾರಿಯವರೊಂದಿಗೆ ಗಂಗೊಳ್ಳಿಗೆ ಹೋಗುವರೇ ಹೊಸಾಡು ಗ್ರಾಮದ ಅರಾಟೆ ಬಸ್ಸು ನಿಲ್ದಾಣದ ಬಳಿ ಬೆಳಿಗ್ಗೆ 7:10 ಗಂಟೆಗೆ ನಿಂತಿದ್ದು. ಅದೇ ಸಮಯ ಬೈಂದೂರು ಕಡೆಯಿಂದ ಕೆಎಲ್‌-8-ವಿ-4614 ನೇ ವ್ಯಾಗ್ನರ್‌ ಕಾರು ಚಾಲಕನಾದ ಬೀನು ಥೋಮಸ್ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಾಹೆ-66 ರಲ್ಲಿ ಚಲಾಯಿಸಿಕೊಂಡು ಬಂದು ಭಾಸ್ಕರರವರಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಬಿದ್ದಿದ್ದು. ಇದರ ಪರಿಣಾಮ ಭಾಸ್ಕರ ಹಾಗೂ ಕಾರಿನಲ್ಲಿದ್ದ ಅಚ್ಚಮ್ಮ ಹಾಗೂ ಹುಡುಗ ಹ್ಯಾರಿ ಥೋಮಸ್‌‌ ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಭಾಸ್ಕರರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 70/2013 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ:ದಿನಾಂಕ 17/05/2013 ರಂದು ಬೆಳಿಗ್ಗೆ ಸುಮಾರು 8:30 ಗಂಟೆಗೆ ಕೊಟೇಶ್ವರ ಗ್ರಾಮದ ಯುವ ಗಾರ್ಡಿನ್ ಎಂಬ ಹೊಸ ಕಟ್ಟಡದಲ್ಲಿ ಪಿರ್ಯಾದಿದಾರರಾದ ರವೀಂದ್ರ (31) ತಂದೆ:ದಾಸ ಪೂಜಾರಿ ವಾಸ:ಸಾಲಿಗ್ರಾಮ ನ್ಯೂ ಕಾರ್ಕಡ, ಉಡುಪಿ ತಾಲೂಕು ರವರೊಂದಿಗೆ ಕೆಲಸ ಮಾಡಿಕೊಂಡಿದ್ದ ಒರಿಸ್ಸಾದ ಬಿಸು ದೆಹುರಿ ಎಂಬವನು ರಾತ್ರಿ ಕಟ್ಟಡದಲ್ಲಿಯೇ ಮಲಗಿಕೊಂಡಿದ್ದವನು, ಎದ್ದು ಬಂದು ಕಟ್ಟಡದಲ್ಲಿ ಕೆಲಸದ ಬಟ್ಟೆಯನ್ನು ಒಣ ಹಾಕಿದ್ದನ್ನು ತೆಗೆದುಕೊಂಡು ಬರಲು ಹೋದವನು ಆಕಸ್ಮಿಕವಾಗಿ ಕಾಲು ಜಾರಿ ಕಟ್ಟಡದಿಂದ ಕೆಳಗೆ ಬಿದ್ದು ತಲೆಗೆ ಮುಖಕ್ಕೆ ತೀವೃ ಗಾಯಗೊಂಡವರನ್ನು ಕೂಡಲೇ ಕುಂದಾಪುರದ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ಕೊಂಡುಹೋಗಿದ್ದು ನಂತರ ಅಲ್ಲಿಂದ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಸಾಗಿಸುವ ಸಮಯ ದಾರಿ ಮಧ್ಯದಲ್ಲಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ರವೀಂದ್ರರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಬಾವಿಕ ಮರಣ ಕ್ರಮಾಂಕ 29/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

No comments: