Monday, May 13, 2013

Daily Crimes Reported as On 13/05/2013 at 17:00 Hrs

ಅಪಘಾತ ಪ್ರಕರಣಗಳು 
  • ಉಡುಪಿ: ದಿನಾಂಕ 12-05-13ರಂದು ಮಲ್ಲಿಕಾರ್ಜುನ.ಕೆ(34), ತಂದೆ: ದಿ.ಮಲ್ಲಯ್ಯ, ವಾಸ: ಪೂಜಾರ ಹಳ್ಳಿ, ಕಾನಹೊಸಹಳ್ಳಿ  ಅಂಚೆ, ಕೂಡಿಗ್ಲಿ, ಬಳ್ಳಾರಿರವರು ಹಾಗೂ ಅವರ ಸ್ನೇಹಿತ ಸಣ್ಣ ಬಸಯ್ಯರವರು ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಅಂಬಾಗಿಲಿಗೆ ಬಂದು ರಾತ್ರಿ 8:30ಗಂಟೆಗೆ ರಾ.ಹೆ 66ರ ಅಂಬಾಗಿಲು ಮರದ ಮಿಲ್ಸಮೀಪ ರಸ್ತೆ ದಾಟುತ್ತಿರುವಾಗ್ಗೆ ಕರಾವಳಿ ಬೈಪಾಸ್ಕಡೆಯಿಂದ ಅಂಬಾಗಿಲು ಕಡೆಗೆ ಕೆಎ20ಬಿ2202ನೇದರ ಆಟೋ ರಿಕ್ಷಾ ಚಾಲಕನು ತಾನು ಚಲಾಯಿಸಿಕೊಂಡು ಬರುತ್ತಿದ್ದ ಆಟೋ ರಿಕ್ಷಾವನ್ನು ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತಿದ್ದ ಸಣ್ಣ ಬಸಯ್ಯನವರಿಗೆ ಢಿಕ್ಕಿ ಹೊಡೆದನು. ಪರಿಣಾಮ ಸಣ್ಣ ಬಸಯ್ಯನವರ ಬಲಕಾಲಿಗೆ ತೀವ್ರ ತರದ ಒಳಜಖಂ ಉಂಟಾಗಿರುತ್ತದೆ. ಅವರನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಉಡುಪಿ ಹೈ-ಟೆಕ್ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವುದಾಗಿದೆ ಈ ಬಗ್ಗೆ ಮಲ್ಲಿಕಾರ್ಜುನ.ಕೆ(34), ತಂದೆ: ದಿ.ಮಲ್ಲಯ್ಯ, ವಾಸ: ಪೂಜಾರ ಹಳ್ಳಿ, ಕಾನಹೊಸಹಳ್ಳಿ  ಅಂಚೆ, ಕೂಡಿಗ್ಲಿ, ಬಳ್ಳಾರಿರವರು ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 235/13 ಕಲಂ 279 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ: ದಿನಾಂಕ 13/05/2013 ರಂದು ಆನಂದ ಜಿ ಅಂಚನ್, ತಂದೆ: ದಿ.ಗೋಪಾಲ ಪೂಜಾರಿ, ವಾಸ: ಸಿಂಧೂರ ಹೌಸ್, ಕೆಳನೇಜಾರು, ಮುಡುತೋನ್ಸೆ ಗ್ರಾಮ, ಉಡುಪಿರವರು ತನ್ನ ರಿಕ್ಷಾ ನಂಬ್ರ KA 20 C 4550 ನ್ನು ರಿಕ್ಷಾ ಸ್ಟಾಂಡ್ನಲ್ಲಿರುವಾಗ ಪರಿಚಯದ  ಕಸ್ತೂರಿ ಎಂಬವರು  ಲಕ್ಷ್ಮಿ ನಗರಕ್ಕೆ ಬಾಡಿಗೆಗೆ ಬರುವಂತೆ ಕೇಳಿಕೊಂಡ ಮೇರೆಗೆ ಅವರನ್ನು ಕುಳ್ಳಿರಿಸಿಕೊಂಡು ಲಕ್ಷ್ಮಿ ನಗರಕ್ಕೆ ಹೋಗುತ್ತಿರುವಾಗ  ಸಮಯ ಸುಮಾರು 10:15 ಗಂಟೆಗೆ ಅಶೋಕ ನಗರದ  ತಲುಪುವಾಗ ಲಕ್ಷ್ಮಿನಗರ ಕಡೆಯಿಂದ  KA 20 Z 0561 ನೇಯ ಕಾರಿನ ಚಾಲಕನ್ನು ಕಾರನ್ನು ಅತೀವೇಗ ಮತ್ತು  ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಅಡ್ಡ ಬಿದ್ದು ರಿಕ್ಷಾ ಚಾಲಕನಿಗೆ  ಬಲಕಾಲಿನ ತೋಡೆ ಮತ್ತು ಹಣೆಗೆ  ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ ಕಸ್ತೂರಿ ಎಂಬವರಿಗೆ ಕೈಯ ಮೂಳೆ ಮುರಿತ ಹಾಗೂ ಗಲ್ಲಕಕ್ಕೆ ರಕ್ತ ಗಾಯವಾಗಿದ್ದು, ಅವರನ್ನು ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಹಾಗೂ ಅಪಘಾತವೆಸಗಿದ ಕಾರಿನ ಚಾಲಕನಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಆನಂದ ಜಿ ಅಂಚನ್ರವರು ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 235/13 ಕಲಂ 279 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಬ್ರಹ್ಮಾವರ: ದಿನಾಂಕ 12/05/13 ರಂದು ನಾಗೇಶ್ ಶ್ರಿಯಾನ್ (28) ತಂದೆ: ದಿ: ಕೂಸ ಮರಕಾಲ, ವಾಸ; ಸಂಕಿ ಶ್ರಿಯಾನ್, ಉಪ್ಪುನೀರಕೆರೆ, ಕಚ್ಚೂರು ಗ್ರಾಮ, ಬಾರ್ಕೂರು ಅಂಚೆ ಎಂಬವರ ತಮ್ಮ ಸುರೇಶ್(38)ರವರು ಬಾರ್ಕೂರು ಕಡೆಯಿಂದ ಕಚ್ಚೂರು ಮನೆ  ಕಡೆಗೆ ನಡೆದುಕೊಂಡು ಬರುವಾಗ ಉಡುಪಿ ತಾಲೂಕು ಕಚ್ಚೂರು ಗ್ರಾಮದ ಕೃಷ್ಣ ಪೂಜಾರಿ ರವರ ಮನೆಯ ಬಳಿ ಮೋರಿಯ ಹತ್ತಿರ ಆಕಸ್ಮಿಕವಾಗಿ ಕಾಲು ಜಾರಿ 15 ಅಡಿ ಆಳದ ತೋಡಿಗೆ ಮುಖ ಅಡಿಯಾಗಿ ಬಿದ್ದು ಅದೇ ಗಾಯದಿಂದ ಸ್ಥಳದಲ್ಲಿ ಮೃತ ಪಟ್ಟಿದ್ದಾಗಿದೆ ಈ ಬಗ್ಗೆ ನಾಗೇಶ್ ಶ್ರಿಯಾನ್ ರವರು ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 27/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ: ಮೃತ ರೋಬರ್ಟ್ ಡಿಸೊಜಾ ಎಂಬಾತನು ವಿಪರೀತ ಅಮಲು ಸೇವನೆ ಮಾಡುತ್ತಿದ್ದು ದಿನಾಂಕ; 12/05/13 ರಂದು ವಿಪರೀತ ಅಮಲು ಸೇವನೆ ಮಾಡಿದವರನ್ನು ಸಂಜೆ 4:00 ಗಂಟೆಗೆ ಹಾವಂಜೆ ಗ್ರಾಮದ ಕೊಳಲಗಿರಿ ಕಾರ್ತಿಬೈಲು ಮನೆಯಲ್ಲಿ ಬಿದ್ದವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ದಿನಾಂಕ; 13/058/2013 ರಂದು ಬೆಳಗ್ಗೆ 05:00 ಗಂಟೆಗೆ ಮೃತಪಟ್ಟಿದ್ದು ಅಮಲು ಸೇವನೆ ಜಾಸ್ತಿಯಾಗಿ ಮೃತ ಪಟ್ಟಿದ್ದಾಗಿದೆ. ಈ ಬಗ್ಗೆ ಅಗೊಸ್ಷಿನ್ ಡಿಸೋಜಾ (66) ತಂದೆ: ದಿ: ಲೋರೆನ್ಸ್ ಡಿ ಸೋಜಾ ವಾಸ: ಕಾರ್ತಿಬೈಲು, ಕೊಳಲಗಿರಿ ಅಂಚೆ, ಹಾವಂಜೆ ಗ್ರಮರವರು ನೀಡಿದ ದೂರಿನಂತೆ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 28/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No comments: