Monday, May 13, 2013

Daily Crimes Reported as On 13/05/2013 at 07:00 Hrs


ಜೀವ ಬೆದರಿಕೆ ಹಾಕಿದ ಪ್ರಕರಣ
  • ಉಡುಪಿ: ಡಾ. ರಮೇಶ್ ನಾಯ್ಕ ತಂದೆ: ದೇವಪ್ಪ ನಾಯ್ಕ್ ವಾಸ: ಸಂಕೇತ್ ಹನುಮಾನ್ ಕಾಲನಿ ಅಜ್ಜರಕಾಡು ಮೂಡನಿಡಂಬೂರು ಗ್ರಾಮ, ಉಡುಪಿ ಜಿಲ್ಲೆರವರು ಉಡುಪಿಯ ನ್ಯೂ ಸಿಟಿ ಆಸ್ಪತ್ರೆಯನ್ನು ನಡೆಸಿಕೊಂಡು ಬರುತ್ತಿದ್ದು, ಅವರು ಹಾಗೂ ಅವರ ಹೆಂಡತಿ ಶ್ರೀಮತಿ ಸಾಧನಾ ನಾಯ್ಕ್  ರವರು ವೈದ್ಯಾಧಿಕಾರಿಯಾಗಿ ಸೇವೆಯನ್ನು ಮಾಡುತ್ತಿದ್ದು,  ಅವರ ಆಸ್ಪತ್ರೆಯ ಹಿಂಬದಿಯಲ್ಲಿ  ಶ್ರೀಮತಿ ಸಿಲ್ವೇರಿಯಾ ಮಾರ್ಟಿಸ್ ಹಾಗೂ ಅವರ ಮಗ ಸಮೀರ್ ಮಾರ್ಟಿಸ್ ಎಂಬವರು ವಾಸ ಮಾಡಿಕೊಂಡಿದ್ದು ಅವರಿಗೆ ಹಾಗೂ ಡಾ. ರಮೇಶ್ ನಾಯ್ಕರವರಿಗೆ ಆಸ್ಪತ್ರೆಯ ಅಪರೇಶನ್ ಥಿಯೇಟರ್ ಹಿಂಬದಿಯಲ್ಲಿ ಇರುವ ಜಾಗದ ವಿಚಾರದಲ್ಲಿ ತಕರಾರು ಇದ್ದು, ದಿನಾಂಕ 09/05/2013 ರಂದು ಮದ್ಯಾಹ್ನ 1:00 ಗಂಟೆಗೆ ಈ ಬಗ್ಗೆ ಒಮ್ಮತದಿಂದ ಪರಿಹರಿಸಲು ಮಾತುಕತೆಯಿಂದ ಪ್ರಯತ್ನಿಸಿರುವ ಸಮಯ 1) ಶ್ರೀಮತಿ ಸಿಲ್ವೇರಿಯಾ ಮಾರ್ಟಿಸ್ ಗಂಡ: ಫೆಡ್ರಿಕ್ ಮಾರ್ಟಿಸ್ ಕಾಡಬೆಟ್ಟು ಮೂಡನಿಡಂಬೂರು ಗ್ರಾಮ, ಉಡುಪಿ ಜಿಲ್ಲೆ 2) ಸಮೀರ್ ಮಾರ್ಟಿಸ್ ತಂದೆ: ಫೆಡ್ರಿಕ್ ಮಾರ್ಟಿಸ್ ಕಾಡಬೆಟ್ಟು ಮೂಡನಿಡಂಬೂರು ಗ್ರಾಮ, ಉಡುಪಿ ಜಿಲ್ಲೆ ರವರು ಏಕಾಏಕಿ ಸದ್ರಿ ಸ್ಥಳದಲ್ಲಿ ಹಾಜರಿದ್ದ ಆಸ್ಪತ್ರೆಯ ಸಿಬ್ಬಂದಿಯವರಾದ ರಾಹುಲ್ ಹಾಗೂ ಶುಶಾಂತ್ ರವರ ಎದುರು ಅವಾಚ್ಯ ಶಬ್ದಗಳಿಂದ ಬೈದು ಈ ಜಾಗದ ವಿಚಾರದಲ್ಲಿ ಕೈ ಹಾಕಿದರೆ  ನಿಮ್ಮನ್ನು ಹಾಗೂ ನಿಮ್ಮ ಹೆಂಡತಿಯನ್ನು ಜೀವ ಸಮೇತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಡಾ. ರಮೇಶ್ ನಾಯ್ಕರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 232/13 ಕಲಂ 504,506,34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಕೋಟಾ: ದಿನಾಂಕ 12/05/2013 ರಂದು ಶೀನಪ್ಪ ಶೆಟ್ಟಿ ತಂದೆ: ರಾಮಣ್ಣ ಶೆಟ್ಟಿ ವಾಸ: ದೊಡ್ಮನೆ ಹೊಸಮಠ ಕೊರ್ಗಿ ಗ್ರಾಮ ಕುಂದಾಪುರ ತಾಲೂಕುರವರು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಗ್ರೇಸ್ ಹಾಲಿನಲ್ಲಿ ಮದುವೆಯ ಔತಣಕೂಟದ ಬಗ್ಗೆ ಅವರ ಮನೆಯ ಸಮೀಪದ ಕುಶಲ ಶೆಟ್ಟಿ, ಅವರ ಮಗ ಕಿರಣ್, ಹಾಗೂ ರಾಜಾರಾಮ ಶೆಟ್ಟಿಯವರೊಂದಿಗೆ ತನ್ನ ಕಾರಿನಲ್ಲಿ ಹೋಗಿ ಕಾರಿನಿಂದ ಇಳಿದು ರಸ್ತೆಯ ಬದಿಯಲ್ಲಿ ನಿಂತಿರುವಾಗ ಸಮಯ ಸುಮಾರು 20:20 ಗಂಟೆಗೆ ಕುಂದಾಪುರ ಕಡೆಯಿಂದ ಆರೋಪಿಯು ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಎಡ ಬದಿಯಿಂದ ಓವರ್ ಟೇಕ್ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಕುಶಲ ಶೆಟ್ಟಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಕುಶಲ ಶೆಟ್ಟಿಯವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶೀನಪ್ಪ ಶೆಟ್ಟಿ ರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 133/13 ಕಲಂ ಕಲಂ 279 304 (ಎ) ಐಪಿಸಿ & 134 (ಎ) (ಬಿ) ಐ.ಎಂ.ವಿ.ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: