Sunday, May 12, 2013

Daily Crimes Reported as On 12/05/2013 at 19:30 Hrs


ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ: ದಿನಾಂಕ 11/05/2013 ರಂದು ಬೆಳಿಗ್ಗೆ 11:00 ಘಂಟೆಗೆ ಶ್ರೀಮತಿ ಸುಂದರಿ ಗಂಡ; ಶಂಕರ ವಾಸ:ಸುಂಕಮಾರು ಮನೆ ಬೋಳಾ ಗ್ರಾಮ ಕಾರ್ಕಳ ತಾಲೂಕುರವರ ಗಂಡ ಶಂಕರ (56) ಎಂಬುವವರು ವಿಪರೀತ ಶರಾಬು ಸೇವಿಸುವ ಚಟ ಹೊಂದಿದ್ದು ಕಾರ್ಕಳ ತಾಲೂಕು ಬೋಳಾ ಗ್ರಾಮದ ಗರಡಿಯಲ್ಲಿ ನಡೆಯುವ ಶನಿ ದೇವರ ಪೂಜೆಗೆ ಹೋದವರು ವಾಪಾಸು ಮನೆಗೆ ಬರುವಾಗ ಸುಂಕಮಾರು ಎಂಬಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ರಸ್ತೆ ಬದಿಯ ಸುಮಾರು 8 ಅಡಿ ಎತ್ತರದಿಂದ ಚರಂಡಿಗೆ ತಲೆ ಕೆಳಗಾಗಿ ಚರಂಡಿಯಲ್ಲಿರುವ ಕಲ್ಲುಗಳ ಮೇಲೆ ಬಿದ್ದು ತಲೆಗೆ ಪೆಟ್ಟಾಗಿ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಸುಂದರಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 21/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 11/05/2013 ರಂದು ಕಾರ್ಕಳ ತಾಲೂಕು ಕಾಂತಾವರ ಗ್ರಾಮದ ಪ್ರಕೃತಿ ನ್ಯಾಷನಲ್ ವಿದ್ಯಾ ಸಂಸ್ಥೆಯ ಬಳಿ ಯಾದವ (58) ಎಂಬುವವರು ಸಂಜೆ 3:30 ಘಂಟೆಯ ಸಮಯ ಕುಸಿದು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಾಖರಿಯಾಗದೇ ಸಂಜೆ 5:30 ಘಂಟೆಗೆ ಮೃತಪಟ್ಟಿರುತ್ತಾರೆ.  ಅವರು ಹಲವು ವರ್ಷಗಳಿಂದ ಆಸ್ತಮಾ ಹಾಗೂ ಹೃದಯ ಸಂಬಂದಿ ಖಾಯಿಲೆಯಿಂದ ಬಳಲುತಿದ್ದವರು ಖಾಯಿಲೆ ಉಬ್ಬಣ್ಣಗೊಂಡು ಮೃತಪಟ್ಟಿದ್ದು ಅವರ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬುದಾಗಿ ಶ್ರಿ ಕೆ. ಸತ್ಯಪಾಲ ಹೆಗ್ದೆ  (48)  ತಂದೆ; ಕ.ಪೆ ಬೋಜ ಶೆಟ್ಟಿ ವಾಸ:ಶ್ರೇಯಸ್ ಮನೆ ಸಾಣೂರು ಅಂಚೆ ಮತ್ತು ಗ್ರಾಮ  ಕಾರ್ಕಳ ತಾಲೂಕುರವರುನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 22/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಹುಡುಗಿ ಕಾಣೆ ಪ್ರಕರಣ

  • ಮಣಿಪಾಲ: ಶ್ರೀ ಡಿ.ಎ ಅಬ್ಬಾಸ್‌‌ ತಂದೆ: ಡಿ.ಹೆಚ್‌ ಬಾದಶಾ, ವಾಸ: ಖಸ್ರೇ ಜಮಿತ, 1ನೇ ಮುಖ್ಯ ರಸ್ತೆ, ಹಯಗ್ರೀವ ನಗರ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕುರವರ ಮನೆಗೆ ಬೇಸಿಗೆ ರಜೆಯಲ್ಲಿ ಬಂದ ಅವರೆ ಸಂಬಂಧಿ ಆರ್ಶಿಯಾ (22) ಎಂಬವರು ದಿನಾಂಕ 07/05/2013 ರಂದು ಬೆಳಿಗ್ಗೆ 6:00 ಗಂಟೆಗೆ ತನ್ನ ಊರು ಮನೆಯಾದ ಕಡೂರಿಗೆ ಹೋಗಿ ಬರುತ್ತೇನೆಂದು ಹೋದವರು ಕಡೂರಿನ ಮನೆಗೂ ಹೋಗದೆ, ಸಂಬಂಧಿಕರ ಮನೆಗೂ ಹೋಗದೆ ವಾಪಾಸು ಶ್ರೀ ಡಿ.ಎ ಅಬ್ಬಾಸ್‌‌ ರವರ ಮನೆಗೂ ಬಾರದೆ ಕಾಣೆಯಾಗಿರುತ್ತಾಳೆ ಎಂಬುದಾಗಿ ಶ್ರೀ ಡಿ.ಎ ಅಬ್ಬಾಸ್‌‌ ರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2013 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಣೆಯಾದವರ ಚಹರೆ ಈ ಕೆಳಗಿನಂತಿವೆ 
ಹೆಸರು: ಆರ್ಶಿಯಾ
ಪ್ರಾಯ: 22 ವರ್ಷ
ಬಣ್ಣ:  ಬಿಳಿ ಮೈ ಬಣ್ಣ
ಶರೀರ : ಸಪೂರ ಮುಖ : ಕೋಲು ಮುಖ
ಭಾಷೆ:  ಉರ್ದು, ಕನ್ನಡ
ಎತ್ತರ: 5 ಅಡಿ 3 ಇಂಚು
ಬಟ್ಟೆ : ಕೆಂಪು, ಹಳದಿ ಹೂವಿನ ಚೂಡಿಧಾರ ಬುರ್ಖಾ ಧರಿಸಿರುತ್ತಾರೆ.

ಇತರ ಪ್ರಕರಣ
  • ಬೈಂದೂರು: ಕುಂದಾಫುರ ತಾಲೂಕು ನಂದನವನ ಗ್ರಾಮದ ಸಾಗರ್ ಗ್ರಾನೈಟ್ ಕಟ್ಟಿಂಗ್ ಹಾಗೂ ಪಾಲಿಶ್ ಉದ್ದಿಮೆಯು ಶ್ರೀಮತಿ ಸೌಮ್ಯ ಭಟ್ ಎಂಬವರ ಮಾಲೀಕತ್ವದಲ್ಲಿದ್ದು, ಅವರು ಈ ಉದ್ದಿಮೆಯನ್ನು ನಡೆಸಲು ಯಾವುದೇ ಪರವಾನಿಗೆಯನ್ನು ಪಡೆಯದೇ, ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಉದ್ದಿಮೆಯನ್ನು ನಡೆಸುತ್ತಿದ್ದು, ಮಾನ್ಯ ಜಿಲ್ಲಾಧಿಕಾರಿಯವರ ಆದೇಶದಂತೆ ದಿನಾಂಕ 05/04/2013 ರಂದು ಬೈಂದೂರು ವಿಶೇಷ ತಹಶೀಲ್ದಾರರು ಸ್ಥಳ ತನಿಖೆ ಮಾಡಿ ಈ ಬಗ್ಗೆ ಸದ್ರಿ ಕೈಗಾರಿಕೆಗೆ ಬೀಗಮುದ್ರೆ ಮಾಡಿ  ಕೈಗಾರಿಕೆ ನಡೆಸದಂತೆ ಕೈಗಾರಿಕಾ ಮಾಲಿಕರಿಗೆ ತಿಳಿಸದರೂ ಕೂಡಾ ಹಾಗೂ ಕಂದಾಯ ನಿರೀಕ್ಷಕರು ಬೈಂದೂರು ರವರು ಪಿ ಡಿ ಓ ರವರೊಂದಿಗೆ ಸೇರಿ ಸದ್ರಿ ಸ್ತಳ ತನಿಖೆ ಮಾಡಿ ಕೈಗಾರಿಕೆ ನಡೆಸದಂತೆ ಸೂಕ್ತ ಎಚ್ಚರಿಕೆ ನೀಡಿದ್ದರೂ ಕೂಡಾ ಸದ್ರಿ ಕೈಗಾರಿಕೆ ಮಾಲಿಕರು ಬೆಳಗಿನ ಜಾವ ಹಾಗೂ ರಾತ್ರಿಯ ಸಮಯದಲ್ಲಿ ಕಾನೂನುಬಾಹಿರವಾಗಿ ಕೈಗಾರಿಕೆ ನಡೆಸುತ್ತಿದ್ದು ಈ ಬಗ್ಗೆ ಮಹಮ್ಮದ್ ಅಲಿ ತಂದೆ:ಅಹಮ್ಮದ್ ಖಾನ್ ವಾಸ: ತಹಶೀಲ್ದಾರ್ ಕ್ವಾರ್ಟರ್ಸ್ ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 147/2013  ಕಲಂ; 188 ಐ ಪಿ ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: