Sunday, May 12, 2013

Daily Crimes Reported as On 12/05/2013 at 17:00 Hrs


ಅಪಘಾತ ಪ್ರಕರಣಗಳು
  • ಮಣಿಪಾಲ: ದಿನಾಂಕ 11/05/2013 ರಂದು 11:00 ಗಂಟೆಗೆ ಚಂದ್ರಯ್ಯ ಆಚಾರ್ಯ ತಂದೆ ರಾಮಕೃಷ್ಣ ಆಚಾರ್ಯ ವಾಸ: ಮನೆ ನಂಬ್ರ 3/25, ಹಿರೇಬೆಟ್ಟು ಪೋಸ್ಟ್, ಉಡುಪಿ ತಾಲೂಕುರವರು ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ 20 ಡಬ್ಲ್ಯೂ 5706 ರಲ್ಲಿ ಶಾಂತಿನಗರದಿಂದ ಇಂಡಸ್ಟ್ರೀಯಲ್ ಕಡೆಗೆ ಹೋಗುತ್ತಿರುವಾಗ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮ ಪಂಚಾಯತ್‌ನ ವಾಚಾನಾಲಯದ ಹತ್ತಿರ ಎದುರುಗಡೆಯಿಂದ ಮಹೇಂದ್ರ ಡ್ಯೂರೋ ಸ್ಕೂಟರ್  ನಂಬ್ರ ಕೆಎ 20 ಎಕ್ಸ್ 8825 ನೇದರ ಚಾಲಕ ಪ್ರದೀಪರವರು ಅತೀವೇಗ ಹಾಗೂ ಅಜಾಗರುಕತೆಯಿಂದ ಏಕಾಏಕಿ ಎದುರುಗಡೆಯ ಬಸ್ಸನ್ನು ಓವರ್ ಟೇಕ್ ಮಾಡಿ ಚಂದ್ರಯ್ಯ ಆಚಾರ್ಯರವರ  ಮೋಟಾರ್ ಸೈಕಲ್ಲಿ ಗೆ ಢಿಕ್ಕಿ ಹೊಡೆದ ಪರಿಣಾಮ ಕೆಎ 20 ಎಕ್ಸ್ 8825 ನೇ ಸವಾರ ಪ್ರದೀಪರವರು ರಸ್ತೆಗೆ ಬಿದ್ದು ಅವರ ದವಡೆಗೆ ಹಾಗೂ ಕುತ್ತಿಗೆಗೆ ಕೈಗಳಿಗೆ ತೀವೃ ತರಹದ ರಕ್ತಗಾಯವುಂಟಾಗಿದ್ದು ಮತ್ತು ಚಂದ್ರಯ್ಯ ಆಚಾರ್ಯರವರು ಮೋಟಾರ್ ಸೈಕಲ್ ನಂಬ್ರ ಕೆಎ 20 ಡಬ್ಲ್ಯೂ 5706 ರಿಂದ  ಕೆಳಗೆ ಬಿದ್ದು ಅವರ ಎಡಕಾಲು ಬಲಭುಜಕ್ಕೆ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಚಂದ್ರಯ್ಯ ಆಚಾರ್ಯರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/2013 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಪಡುಬಿದ್ರಿ: ದಿನಾಂಕ 11/05/2013 ರಂದು 20:00 ಗಂಟೆಗೆ ಕೆಎ-20-ಬಿ-4498 ನೇ ಟ್ಯಾಂಕರ್ ನ ಚಾಲಕನಾದ ಆರೋಪಿ ಸುರೇಶ್ ಎಂಬವರು ಟ್ಯಾಂಕರನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ತೆಂಕ ಎರ್ಮಾಳು ಗ್ರಾಮದ ಅದಮಾರು ಕ್ರಾಸ್ ಬಳಿ, ರಾಷ್ಟೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ್ದ ಕೆಎ-19-ಬಿ-3335 ನೇ ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂಬದಿ ಬಲಬದಿ ಮತ್ತು ಟ್ಯಾಂಕರ್ ನ ಮುಂಬಾಗ ಎಡ ಬದಿ ಜಖಂಗೊಂಡಿರುತ್ತದೆ. ಬಸ್ಸಿನಲ್ಲಿದ್ದ 2 ಜನ ಪ್ರಯಾಣಿಕರಿಗೆ ಗಾಯವಾಗಿರುತ್ತದೆ ಎಂಬುದಾಗಿ ಚಂದ್ರ ಶೇಖರ್ ತಂದೆ: ಅಪ್ಪು ಪೂಜಾರಿ ವಾಸ ಕಂಪನಬೆಟ್ಟು, ಉದ್ಯಾವರ ಗ್ರಾಮ ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2013 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಗಂಗೊಳ್ಳಿ: ರತ್ನಾಕರ ತಂದೆ ಮುತ್ತ, ನೇತ್ರಾವತಿ ನಿಲಯ, ಮಾಣಿಕೊಳಲು ಕ್ರಾಸ್‌, ಕುಂದಬಾರಂದಾಡಿ ಗ್ರಾಮ, ಕುಂದಾಪುರ ತಾಲೂಕುರವರು ದಿನಾಂಕ 11/05/2013 ರಂದು 19:45 ಗಂಟೆಗೆ ತನ್ನ ಮೋಟಾರು ಸೈಕಲ್‌ ನಂಬ್ರ ಕೆಎ-20-ಯು-3317 ನೇದರಲ್ಲಿ ಹೆಮ್ಮಾಡಿಯಿಂದ ಕುಂದಬಾರಂದಾಡಿ ಕಡೆಗೆ ಹೋಗುವರೇ ರಾಷ್ಟೀಯ ಹೆದ್ದಾರಿ 66 ರಲ್ಲಿ ಹೋಗುತ್ತಿದ್ದು. ಅರಾಟೆ ರಾಷ್ಟೀಯ ಹೆದ್ದಾರಿ 66 ರ ಹಾಲು ಡೈರಿಯ ಬಳಿ ತಲುಪಿದಾಗ ಅವರ ಮೋಟಾರು ಸೈಕಲ್‌ ಎದುರಿನಿಂದ ಹೋಗುತ್ತಿದ್ದ ಎಪಿ-12-ವಿ-3190 ನೇ ಲಾರಿಯ ಚಾಲಕನಾದ ಮೊಹಮ್ಮದ್‌ ಶಫಿಯುದ್ದೀನ್‌ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಒಮ್ಮಲೆ ಬ್ರೇಕ್‌ ಹಾಕಿದ್ದು. ಇದರ ಪರಿಣಾಮ ಅವರ ಮೋಟಾರು ಸೈಕಲ್‌ ಲಾರಿಯ ಹಿಂಬದಿ ಡಿಕ್ಕಿ ಹೊಡೆದು ರತ್ನಾಕರರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ರತ್ನಾಕರರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2013 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ರಾಜೇಶ ತಂದೆ:ದುಂಡಪ್ಪ,ವಾಸ: ಹೊನ್ನಾಳ, ಎಸ್‌.ಕೆ ಕೊಪ್ಪಹಳ್ಳಿ, ಬಿಲಾಗಿ ತಾಲೂಕು ಬಾಗಲಕೋಟೆ ಜಿಲ್ಲೆರವರು ದಿನಾಂಕ 11/05/2013 ರಂದು ಕಿನ್ನಿಮುಲ್ಕಿ ಬಳಿ ಗೋವಿಂದ ಕಲ್ಯಾಣ ಮಂಟಪದ ಬಳಿ ಬರುವರೇ ಉಡುಪಿಯಿಂದ ಎಚ್‌ಎಮ್‌‌ಟಿ ಕಂಪೆನಿಯ ಬಸ್ಸು ನಂಬ್ರ ಕೆಎ20 ಬಿ 1047 ನೇದರಲ್ಲಿ ಪ್ರಯಾಣಿಸಿಕೊಂಡು ಬರುತ್ತಾ ಗೋವಿಂದ ಕಲ್ಯಾಣ ಮಂಟಪದ ಬಳಿ ರಾತ್ರಿ ಸುಮಾರು 08:30 ಗಂಟೆಗೆ ಬಸ್ಸು ತಲುಪಿದಾಗ ಅವರು ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಂತೆ ಬಸ್ಸಿನ ಚಾಲಕನು ಬಸ್ಸನ್ನು ಒಮ್ಮೆಲೆ ಮುಂದಕ್ಕೆ ಚಲಾಯಿಸಿದರ ಪರಿಣಾಮ ಅವರು ಬಸ್ಸಿನಿಂದ ಕೆಳಗೆ ರಸ್ತೆಗೆ ಬಿದ್ದ ಸಮಯ ಬಸ್ಸನ್ನು ಅದರ ಚಾಲಕನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದರ ಪರಿಣಾಮ ಬಸ್ಸಿನ ಹಿಂಬದಿಯ ಎಡಬದಿಯ ಚಕ್ರ ರಸ್ತೆಗೆ ಬಿದ್ದಿದ್ದ ಅವರ ಎಡಕಾಲಿಗೆ ಢಿಕ್ಕಿ ಹೊಡೆದು ಕಾಲಿನ ಪಾದದ ಬಳಿಯ ಗಂಟಿನ ಬಳಿ ರಕ್ತಗಾಯ ಉಂಟಾಗಿರುತ್ತದೆ. ಬಸ್ಸನ್ನು ಚಾಲಕನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ನಿಲ್ಲಿಸಿ ಚಾಲಕ ಹಾಗೂ ಕಂಡಕ್ಟರ್‌ ಅವರ ಬಳಿ ಬಂದು ಉಪಚರಿಸಿ ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರಿಕ್ಷೀಸಿದ ವೈದ್ಯರು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾಗಿದೆ ಎಂಬುದಾಗಿ ರಾಜೇಶ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 231/2013 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾಪು: ದಿನಾಂಕ 11/05/2013  ರಂದು 19:00 ಗಂಟೆಗೆ ಉಡುಪಿ ತಾಲೂಕು  ಮೂಳೂರು ಗ್ರಾಮದ ಕಮ್ಯನಿಟಿ ಹಾಲ್‌ನ ಎದುರು ರಾಷ್ಟೀಯ ಹೆದ್ದಾರಿ 66 ರಲ್ಲಿ ಸುಧಾಕರ ಪೂಜಾರಿ ತಂದೆ: ಸಂಜೀವ ಪೂಜಾರಿ ವಾಸ: ಗುರುಕೃಪಾ ನಿವಾಸ ಮಲ್ಲಾರು ಗ್ರಾಮರವರ ಅಕ್ಕನ ಮಗ ಸುಶಾಂತ್ ಎಂಬವರು ತನ್ನ ಸೈಕಲಿನಲ್ಲಿ ಮೂಳೂರು ಕಡೆಗೆ ಹೋಗುತ್ತಿದ್ದಾಗ ಮೂಳೂರು ಕಡೆಯಿಂದ ಕೆ.ಎ 03 ಎಂ 5034 ನೇ ಓಮಿನಿ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ರಸ್ತೆಯ ಕಾಮಗಾರಿ ನಡೆಯುತ್ತಿರುವ ರಸ್ತೆಗೆ ತಿರುಗಿಸಿ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಅಕ್ಕನ ಮಗ ಸುಶಾಂತ್ ರವರ ಕೈಗಳಿಗೆ, ಹಾಗೂ ತೊಡೆಗೆ ಗಾಯವುಂಟು ಮಾಡಿದ್ದು, ಚಿಕಿತ್ಸೆಯ ಬಗ್ಗೆ ಆದರ್ಶ ಆಸ್ಪತ್ರೆಗೆ ಕರೆದುಕೊಂಡುಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ಸುಧಾಕರ ಪೂಜಾರಿ ರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2013 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಲ್ಪೆ: ದಿನಾಂಕ 12/05/2013 ರಂದು ಬೆಳಿಗ್ಗೆ 05.00 ಗಂಟೆ ಸಮಯಕ್ಕೆ ಶ್ರೀಧರ ತಂದೆ: ದಿ. ಪಿಜಿನ ಕೋಟ್ಯಾನ್ ವಾಸ: ಕಲ್ಮಾಡಿ ಬ್ರಿಡ್ಜ್  ಬಳೀ, ಮಲ್ಪೆ ಅಂಚೆ ಕೊಡವೂರು ಗ್ರಾಮರವರ ಭಾವನೆಂಟನಾದ ಉದಯ (37) ರವರು ತಾವು ಕೆಲಸ ಮಾಡುತ್ತಿದ್ದ ಕಡೇಕಾರಿನ ಕೃಷ್ಣ ಎಂಬುವರ ಶ್ವೇತಾಂಬರಿ ಬೋಟಿನ ಮೇಲಕ್ಕೆ ನಿಂತಿದ್ದು, ಬೋಟು ಮಲ್ಪೆ ಬಂದರಿನಿಂದ ಮೀನುಗಾರಿಕೆಯ ಬಗ್ಗೆ ಸಮುದ್ರದಲ್ಲಿ ಸ್ವಲ್ಪ ದೂರಕ್ಕೆ ಹೋದಾಗ ರಭಸದ ಅಲೆಯೊಂದು ಒಮ್ಮೆಲೇ ಬೋಟಿಗೆ ಅಪ್ಪಳಿಸಿದ ಪರಿಣಾಮ, ಬೋಟಿನ ಮೇಲ್ಗಡೆ ನಿಂತಿದ್ದ ಉದಯರವರು ಒಮ್ಮೆಲೇ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದಿದ್ದು, ಬೋಟಿನಲ್ಲಿದ್ದವರೆಲ್ಲಾ ಹುಡುಕಾಡುವಾಗ ಬೆಳಿಗ್ಗೆ ಸುಮಾರು 09.00 ಗಂಟೆ ಸಮಯಕ್ಕೆ ಮಲ್ಪೆ ಬಂದರಿನ ಬಳಿನ ಸಮುದ್ರದಲ್ಲಿ ಉದಯರವರ ಮೃತ ದೇಹವು ದೊರೆತಿದ್ದು, ಅವರು ಆಕಸ್ಮಿಕವಾಗಿ ಬೋಟಿನಿಂದ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ ಎಂಬುದಾಗಿ ಶ್ರೀಧರರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 31/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಲ್ಪೆ: ರಾಜೇಶ್ ತಂದೆ: ಗಿರಿಯ ಪೂಜಾರಿ  ವಾಸ ಮನೆ ನಂಬ್ರ 24/23 “ಶ್ರೀ ರಕ್ಷಾಮೂಡಬೆಟ್ಟು ಕೊಡವೂರು ಗ್ರಾಮರವರ ಅಣ್ಣನಾದ ಉಮೇಶರವರು ದಿನಾಂಕ 11-05-2013 ರಂದು ಸಂಜೆ 7.30 ಗಂಟೆಗೆ ಮನೆಯಿಂದ ಹೊರಟು ಸ್ನೇಹಿತರಾದ ಮೂಡಬೆಟ್ಟು ಮಧ್ವನಗರದ ಹರೀಶರ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿ ಮದ್ಯಪಾನ ಮಾಡಿ ಹಿಂದೆ ಬರುವಾಗ ರಿಕ್ಷಾ ಹತ್ತುವ ಸಂದರ್ಭದಲ್ಲಿ ಹಠಾತ್ತನೆ ಕುಸಿದು ಬಿದ್ದು ಪ್ರಜ್ಞಾಹೀನರಾದವರನ್ನು ಹೈಟೆಕ್‌ಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಉಮೇಶ್‌ ರವರು ಮದ್ಯಪಾನ ಸುಸ್ತಾಗಿ ಹೃದಯಾಘಾತದಿಂದ ಇಲ್ಲವೇ ಯಾವ ರೀತಿಯಿಂದ ಸತ್ತದ್ದೆಂದು ತಿಳಿದಿಲ್ಲವಾಗಿದೆ ಎಂಬುದಾಗಿ ರಾಜೇಶ್ ರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 30/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾಪು: ದಿನಾಂಕ 12/05/2013 ರಂದು ಬೆಳಿಗ್ಗೆ 2:00 ಗಂಟೆಗೆ ಅಶ್ರಫ್ ರೈಲ್ವೇ ಬ್ರಿಡ್ಜ್ ಹತ್ತಿರ ಮಣೀಪುರ ಗ್ರಾಮ ಉಡುಪಿ ಜಿಲ್ಲೆ  ರವರು ನಿಡ್ಡೋಡಿಯಿಂದ ಕಲ್ಲನ್ನು ತರುವ ಬಗ್ಗೆ ಟೆಂಪೋವನ್ನು ಚಲಾಯಿಸಿಕೊಂಡು ಅಗ್ರಾಹರದ ರಸ್ತೆಯಲ್ಲಿ ಬರುತ್ತಿರುವಾಗ ರೈಲ್ವೇ ಬ್ರಿಜ್ ಮೇಲ್ಗಡೆ ಒಬ್ಬ ವ್ಯಕ್ತಿಯು ಬಿದ್ದಿದ್ದು ಆತನ ಮೇಲೆ ಸ್ಕೂಟರ್  ಬಿದ್ದಿದ್ದು ಬಟ್ಟೆ ಕಳಚಿದ ಸ್ಥಿತಿಯಲ್ಲಿದ್ದುದನ್ನು ಕಂಡು ವಾಹನದಲ್ಲಿ ಹಿಂತಿರುಗಿ ಹೋಗಿ ತನ್ನ ಅಣ್ಣ ಸರ್ಫುದ್ದೀನ್‌ನ್ನು ಕರೆದುಕೊಂಡು ಬಂದು ಬಿದ್ದ ವ್ಯಕ್ತಿಯನ್ನು ನೋಡಿದಾಗ ಸುಮಾರು 40 ವರ್ಷ ಪ್ರಾಯದವನಾಗಿದ್ದು, ಆತನ ಕಿಸೆಯಲ್ಲಿದ್ದ ಮೊಬೈಲ್ ಮುಖಾಂತರ ಸಂಪರ್ಕಿಸಿದ್ದಲ್ಲಿ ಆತನ ಅಣ್ಣ ಸ್ಥಳಕ್ಕೆ ಬಂದಿದ್ದು ಮೃತನ ಹೆಸರು ನವೀನ್ ಡಿಸೋಜಾ (40) ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿ ವ್ಯಕ್ತಿಯು ಸ್ಕೂಟರನ್ನು ಚಲಾಯಿಸಿಕೊಂಡು ಹೋಗುತ್ತಿದ್ದು ಹೃದಯಾಘಾತದಿಂದ ಮೃತಪಡುವ ವೇಳೆ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ವಾಹನವು ಅವರ ಮೈಮೇಲೆ ಬಿದ್ದಿರಬಹುದು ಎಂಬುದಾಗಿಯೂ ಅವರ ಸ್ಕೂಟರ್ ನಂಬ್ರ ಕೆಎ 20 ಇಸಿ-9202 ಆಗಿರುತ್ತದೆ. ಅವರ ಮರಣದಲ್ಲಿ ಬೇರಾವುದೇ ಸಂಶಯ ಇರುವುದಿಲ್ಲ ನಂತರ ಶವವನ್ನು ಉಡುಪಿ ಸರ್ಕಾರಿ ಅಸ್ಪತ್ರೆಗೆ ಕೊಂಡುಹೋಗಿರುವುದಾಗಿದೆ ಎಂಬುದಾಗಿ ಅಶ್ರಫ್ ರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 12/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ದಿನಾಂಕ 10/05/13ರಂದು ರಾಮ ಬಿ ಶೆಟ್ಟಿ ತಂದೆ ಬೇಬಿ ಶೆಟ್ಟಿ, ವಾಸ: ಮಾತೋಶ್ರೀ,ಮೇಲ್ಮನೆ ಹೌಸ್‌‌, ಕಳತ್ತೂರು, ಉಡುಪಿರವರ ಭಾವ ಶಂಭುಶೆಟ್ಟಿಯವರು ವಿಪರೀತ ಅಮಲು ಪದಾರ್ಥ ಸೇವನೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಯಲ್ಲಿ ಮಲಗಿದವರನ್ನು ಚಿಕಿತ್ಸೆಗೋಸ್ಕರ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ತಂದು ದಾಖಲಿಸಿದಲ್ಲಿ ವೈದ್ಯಾಧಿಕಾರಿಯವರು ಪರಿಕ್ಷೀಸಿ ಒಳರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ನೀಡಿರುತ್ತಾರೆ. ಅವರ ಭಾವ ಶಂಭುಶೆಟ್ಟಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿವಾಗ ದಿನಾಂಕ 12/05/13ರಂದು ಬೆಳಿಗ್ಗೆ 3:00ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿರುತ್ತದೆ. ಮೃತರಿಗೆ ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟವಿದ್ದು, ಇದೇ ಕಾರಣದಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾಗಿರುತ್ತದೆ ಎಂಬುದಾಗಿ ರಾಮ ಬಿ ಶೆಟ್ಟಿ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 18/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ:  ಪ್ರದೀಪ ತಂದೆ: ಶೇಖರ ಮೂಲ್ಯ ವಾಸ: ಪ್ರತಿಭಾ ನಿವಾಸ ಶ್ರೀ ರಾಮ ನಗರ ನಿಟ್ಟೆ ಗ್ರಾಮ, ಕಾರ್ಕಳ ತಾಲೂಕುರವರ ತಂದೆ ಶೇಖರ ಮೂಲ್ಯ (45) ಎಂಬುವವರು ವಿಪರೀತ ಕುಡಿತದ ಚಟ ಹೊಂದಿದ್ದು ಮತ್ತು  ತಾನು ನೆಡೆಸುತಿದ್ದ  ಹೋಟೇಲ್  ವ್ಯವಹಾರದಲ್ಲಿ ನಷ್ಷ ಅನುಭವಿಸಿದ್ದು ಅದೇ ವಿಚಾರದಲ್ಲಿ ಮನನೊಂದು ದಿನಾಂಕ 11/05/2013 ರಂದು 1:30 ಘಂಟೆಗೆ  ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಶ್ರಿ ರಾಮ ನಗರ ಎಂಬ ತನ್ನ ವಾಸ್ತವ್ಯದ ಮನೆಯಲ್ಲಿ ಯಾವುದೇ ವಿಷ ಪದಾರ್ಥ ಸೇವಿಸಿ ಆಸ್ವಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ  ಕಾರ್ಕಳ ಸರಕಾರಿ ಆಸ್ವತ್ರೆಗೆ ತಂದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲಾ ಆಸ್ವತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 11/05/2013 ರಂದು ಸಂಜೆ 5:30 ಘಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ಪ್ರದೀಪ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 20/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: