Saturday, May 11, 2013

Daily Crimes Reported as On 11/05/2013 at 19:30 Hrs

ಹಲ್ಲೆ ಪ್ರಕರಣ
  • ಮಲ್ಪೆ: ದಿನಾಂಕ: 10.05.2013 ರಂದು ರಾತ್ರಿ 8-15 ಗಂಟೆ ಸಮಯಕ್ಕೆ ನಾಗರಾಜ(30) ತಂದೆ: ದೇವಪ್ಪ, ವಾಸ: ಈಶ್ವರ ನಗರ, ಗರಡಿಮಜಲು, ತೆಂಕನಿಡಿಯೂರು ಗ್ರಾಮ, ಉಡುಪಿರವರು  ಮಲ್ಪೆ ಬೀಚ್ ನ ರಿಕ್ಷಾ ನಿಲ್ದಾಣದಲ್ಲಿ ತನ್ನ ರಿಕ್ಷಾ ನಿಲ್ಲಿಸಿ ತನ್ನ ಪರಿಚಯದ ಆಪಾದಿತ ನಾಗರಾಜ್ ರೊಂದಿಗೆ ಮಾತನಾಡಿಕೊಂಡಿರುವಾಗ ಕ್ಯೂ ವಿಚಾರವಾಗಿ ಮಾತಿಗೆ ಮಾತು ಬೆಳೆದು ಆರೋಪಿ ನಾಗರಾಜ್ ನು ಅಲ್ಲಿಯೇ ಪಕ್ಕದಲ್ಲಿದ್ದ ಸೋಡಾ ಬಾಟಲಿ ಇರುವ ಟ್ರೇಯಿಂದ ತಲೆಗೆ ಏಕಾಎಕಿಯಾಗಿ ಹೊಡೆದು ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮಲ್ಪೆ ನರ್ಸಿಂಗ್ ಹೋಂಗೆ ಹೋಗಿ ಅಲ್ಲಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ನಾಗರಾಜರವರು ಆರೋಪಿತನ ವಿರುದ್ಧ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2013 ಕಲಂ 324, 504 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಶಿರ್ವಾ: ಸಾಲ್ವದೋರ್‌ ಡ್ರಿಗಸ್‌ (51)ತಂದೆ: ಜಾಕೋಬ್‌ ರೋಡ್ರಿಗಸ್‌ ವಾಸ:   ಗುರಿಕಾಡು ಹೌಸ್‌ ಬಂಟಕಲ್ಲು ಶಿರ್ವ ಗ್ರಾಮ ಉಡುಪಿ ತಾಲೂಕು ಎಂಬವರ ಪತ್ನಿ  ಶ್ರೀಮತಿ ಹೆಲೆನ್‌ ಬೆನೆಡಿಕ್ಟ್‌ ರೋಡ್ರಿಗಸ್‌ (46 ವರ್ಷ)ರವರು ದಿನಾಂಕ 11-05-2013 ರಂದು ಬೆಳಿಗ್ಗೆ 10.00 ಗಂಟೆಗೆ  ಶಿರ್ವ ಗ್ರಾಮದ ಬಂಟಕಲ್ಲು  ಗುರಿಕಾಡು ಮನೆ  ಹಿಂಬದಿಯ ಕಾಡಿನಲ್ಲಿ ನೆಲದಲ್ಲಿ ಬಿದ್ದು ಕೊಂಡಿದ್ದವರನ್ನು ಕೂಡಲೇ ಅಂಬುಲೆನ್ಸ್‌ನಲ್ಲಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ಸಮಯ 12.00 ಗಂಟೆಗೆ ತಿಳಿಸಿರುತ್ತಾರೆ. ಇವರು ಮಾನಸಿಕ ಖಾಯಿಲೆಯಿಂದ ನೊಂದು ಯಾವುದೂ ವಿಷ ಪದಾರ್ಥ ಸೇವಿಸಿ  ಮೃತಪಟ್ಟಿರುತ್ತಾರೆ ಈ ಬಗ್ಗೆ ಸಾಲ್ವದೋರ್‌ ಡ್ರಿಗಸ್‌ರವರು ನೀಡಿದ ದೂರಿನಂತೆ ಶಿರ್ವಾ ನೀಡಿದ ದೂರಿನಂತೆ ಶಿರ್ವಾ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 13/ 13 ಕಲಂ 174 ಸಿಅರ್.ಪಿ.ಸಿ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ಗ್ರಾಮಾಂತರ: ದಿನಾಂಕ;11.05.2013 ರಂದು ಬೆಳಗ್ಗೆ  ಸುಮಾರು 10:00  ಗಂಟೆಯಿಂದ 10:30 ಗಂಟೆ ನಡುವೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕಲ್ಲಂಬಾಡಿ ಪದವು,ಕುಕ್ಕರಕಟ್ಟೆ, ಬಸ್ ನಿಲ್ದಾಣದ ಬಳಿ ಸಂದ್ಯಾ (23) ತಂದೆ: ಅಣ್ಣಫ್ಪ ವಾಸ: ಮಿಷನ್ ಕಾಂಪೌಂಡ್,ನೀರೆ ಗ್ರಾಮ, ಕಾರ್ಕಳ ತಾಲೂಕುರವರ ತಂದೆ ಅಣ್ಣಪ್ಪ (50ವರ್ಷ)ರವರು ವಿಪರೀತ ಶರಾಬು ಕುಡಿದು ಮೃತಪಟ್ಟಿದ್ದು ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ   ಎಂಬುದಾಗಿ ಸಂದ್ಯಾರವರು ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನಂತೆ ಅಸ್ವಾಭಾವಿಕ ಮರಣ ಕ್ರಮಾಂಕ19/13 ಕಲಂ 174 ಸಿಅರ್.ಪಿ.ಸಿ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವೇಶ್ಯಾವಟಿಕೆ- ಆರೋಪಿಗಳ ಬಂಧನ
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.  ಶ್ರೀ ಬೋರಲಿಂಗಯ್ಯಎಂ.ಬಿ. ಐ.ಪಿ.ಎಸ್ ಹಾಗೂ ಪೊಲಿಸ್ ಉಪಾಧೀಕ್ಷರಾದ ಡಾ. ಶ್ರೀ ಪ್ರಭುದೇವ್ ಮಾನೆ ಯವರ ಮಾರ್ಗದರ್ಶನದಂತೆ ಬ್ರಹ್ಮಾವರ ಪೊಲಿಸ್ ವೃತ್ತ ನಿರೀಕ್ಷಕರವರಾದ ಶ್ರೀ ಪ್ರಭು ಡಿ.ಟಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರೊಂದಿಗೆ ದಿನಾಂಕ: 11/05/2013 ರಂದು ಬ್ರಹ್ಮಾವರ ಠಾಣಾ ಸರಹದ್ದಿನ 52 ನೇ ಹೇರೂರು ಗ್ರಾಮದ ಮಾನಸ ಬಾರ್ & ರೆಸ್ಟೋರೆಂಟಿನಲ್ಲಿ ಹುಡುಗಿಯರನ್ನು ವೇಶ್ಯಾವಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ದೊರೆತ ಮೇರೆಗೆ ಪ್ರಭು ಡಿ.ಟಿ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ ಸಿಬ್ಬಂದಿಯವರೊಂದಿಗೆ 13.00 ಗಂಟೆಗೆ ಈ ಮೇಲಿನ ಸ್ಥಳಕ್ಕೆ ಧಾಳಿ ಮಾಡಿ  ಆರೋಪಿಗಳಾದ  1.ಶೇಕರ ಪೂಜಾರಿ (42) ತಂದೆ: ಗುರುವ ಪೂಜಾರಿ   ಪಂಚಾದ್ರಿ ಹಲುವಳ್ಳಿ ಕೋಟೇಶ್ವರ ಬೀಜಾಡಿ ಗ್ರಾಮ. 2.ಸತೀಶ ಆಚಾರ್ (35) ತಂದೆ: ವೆಂಕಪ್ಪ ಆಚಾರ್  ಹೆಮ್ಮಾಡಿ ಬಸ್ಸು ನಿಲ್ದಾಣದ ಬಳಿ ರಾ,ಹೆ 66 ಕುಂದಾಪುರ ತಾಲೂಕು 3.ವಿನಯ ಕುಮಾರ್(32) ತಂದೆ: ರಾಜು ಪೂಜಾರಿ  ಪಡು ಅಂಜಾರು ಅಂಜಾರು ವಿಲೇಜ್ ಉಡುಪಿ ತಾಲೂಕು. 4.ಸುರೇಶ್ ಶೆಟ್ಟಿ (45)ತಂದೆ: ರಾಮಣ್ಣ ಶೆಟ್ಟಿ  ಸುರೇಶ್ ನಿಲಯ ಕದಿಕೆ ಹೌಸ್ ಪೆರ್ಡೂರು ಗ್ರಾಮರವರನ್ನು ಹಾಗೂ ಹುಡುಗಿಯರನ್ನು ವಶಕ್ಕೆ ತೆಗೆದುಕೊಂಡು ಇವರ ವಶದಲ್ಲಿದ್ದ  3 ಮೊಬೈಲ್ ಸೆಟ್  ನಗದು ರೂ 1600/- ನ್ನು, ಸ್ವಾಧೀನಪಡಿಸಿಕೊಂಡು ಠಾಣೆಯಲ್ಲಿ ಅಪರಾಧ ಕ್ರಮಾಂಕ 177/13 ಕಲಂ: 3(1)(2)(ಬಿ) 5,7 ಐ.ಟಿ.ಪಿ ಕಾಯ್ದೆ 1956 ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: