Saturday, May 11, 2013

Daily Crimes Reported as On 11/05/2013 at 17:00 Hrs


ಅಪಘಾತ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಬಾಬುರಾಯ ಆಚಾರ್ಯ (33) ತಂದೆ:ಸುಬ್ರಾಯ ಆಚಾರ್ಯ ವಾಸ:ನರಾಡಿ ಯಡಾಡಿ ಮತ್ಯಾಡಿ ಗ್ರಾಮ ಕುಂದಾಪುರ ತಾಲೂಕುರವರ ಅಕ್ಕನ ಮಕ್ಕಳಾದ ಸತೀಶ ಮತ್ತು ಶ್ರೀಧರ ಎಂಬವರು ದಿನಾಂಕ 30/04/2013 ರಂದು ತಮ್ಮ ಕೆಎ 20 ಆರ್-6068 ನೇ ಮೋಟಾರು ಸೈಕಲಿನಲ್ಲಿ ಬ್ರಹ್ಮಾವರದಿಂದ ತಮ್ಮ ಮನೆಯಾದ ನರಾಡಿ ಕಡೆಗೆ ಬರುತ್ತಾ ಉಡುಪಿ ತಾಲೂಕು ಶಿರಿಯಾರ ಗ್ರಾಮದ ಸಾಯಬ್ರಕಟ್ಟೆ ಎಂಬಲ್ಲಿ ರಸ್ತೆಯ ಎಡ ಬದಿಯಲ್ಲಿ ಬರುತ್ತಾ ಸುಮಾರು ಮಧ್ಯಾಹ್ನ 1:30 ಗಂಟೆಗೆ ಆರೋಪಿಯು ತನ್ನ ಕೆಎ 17 ಎನ್-5568 ನೇ ಟಾಟಾ ಇಂಡಿಕಾ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಬಲಬದಿಗೆ ಚಲಾಯಿಸಿಕೊಂಡು ಬಂದು ಸತೀಶ ಹಾಗೂ ಶ್ರೀಧರ ಸವಾರಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸತೀಶ ಹಾಗೂ ಶ್ರೀಧರ ಎಂಬವರಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದಾಗಿದೆ.ಈ ಬಗ್ಗೆ ಬಾಬುರಾಯ ಆಚಾರ್ಯರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 132/13 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: