Tuesday, May 07, 2013

Daily Crimes Reported as On 07/05/2013 at 07:00 Hrs

ಜೀವ ಬೆದರಿಕೆ ಪ್ರಕರಣಗಳು
  • ಹೆಬ್ರಿ: ಶ್ರೀಮತಿ ಸುಜಾತ ಪೂಜಾರ್ತಿ(39), ಗಂಡ: ಶೀನ ಪೂಜಾರಿ, ವಾಸ: ಮಂಜುಶ್ರೀ, ಜನತಾ ಕಾಲೋನಿ, ಭಕ್ರೆ, ಮುದ್ರಾಡಿ ಗ್ರಾಮ,ಕಾರ್ಕಳ ತಾಲೂಕು ಎಂಬವರು ಸುಮಾರು 20 ವರ್ಷಗಳ ಹಿಂದೆ ಆರೋಪಿತ ಶೀನ ಪೂಜಾರಿಯವರನ್ನು ಕುಲ ಸಂಪ್ರದಾಯದಂತೆ ವಿವಾಹ ಮಾಡಿಕೊಂಡು ಪ್ರಸ್ತುತ ಕಾರ್ಕಳ ತಾಲೂಕು ಮುದ್ರಾಡಿ ಗ್ರಾಮದ ಭಕ್ರೆ ಜನತಾ ಕಾಲೋನಿಯಲ್ಲಿ ವಾಸ ಮಾಡಿಕೊಂಡಿದ್ದು  ಪತಿ ಶೀನ ಪೂಜಾರಿಯವರು ಮದುವೆಯ ಬಳಿಕ ಸುಮಾರು 7 ವರ್ಷದ ವರೆಗೆ ಅನ್ಯೋನ್ಯತೆಯಿಂದ ಇದ್ದು ಬಳಿಕ ಪ್ರತಿನಿತ್ಯ ವಿಪರೀತ ಅಮಲು ಪದಾರ್ಥ ಸೇವಿಸಿಕೊಂಡು ಮನಗೆ ಬಂದು ಬೈಯ್ಯುವುದು, ಹೊಡೆಯುವುದು ಮಾಡಿಕೊಂಡು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು ದಿನಾಂಕ 06-05-13 ರಂದು ಮನೆಗೆ ಬಂದು ಅಮಲು ಪದಾರ್ಥ ಸೇವಿಸಲು ಹಣ ಕೇಳಿದ್ದು ಹಣ ಇಲ್ಲ ಎಂದು ಹೇಳಿದಾಗ ಆರೋಪಿಯು ಬೈದು ನಿಮ್ಮನ್ನು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಶ್ರೀಮತಿ ಸುಜಾತ ಪೂಜಾರ್ತಿರವರು  ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/13, ಕಲಂ: 498(), 506, 427 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕೋಟ: ದಿನಾಂಕ 05/02/2012 ರಂದು ರುಕ್ಮಿಣಿ ಬಾಯಿ (30 ವರ್ಷ)ಗಂಡ: ಉದಯ ನಾಯ್ಕ ವಾಸ: ದೊಡ್ಡಹಕ್ಲು ನಂಚಾರು ಗ್ರಾಮ ಉಡುಪಿ ತಾಲೂಕುರವರು ಆರೋಪಿ ಉದಯ ನಾಯ್ಕ ಎಂಬವರನ್ನು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮದುವೆಯ ನಂತರ ಆರೋಪಿಯು ದಿನಾಲೂ ಕುಡಿದು ಬಂದು ಅವ್ಯಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ 04/05/2013 ರಂದು ನಂಚಾರು ಗ್ರಾಮದ ದೊಡ್ಡಹಕ್ಲು ಎಂಬಲ್ಲಿರುವ ತನ್ನ ಮನೆಗೆ ಕುಡಿದು ಬಂದು ಹೊಡೆದು ಜೀವ ಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ರುಕ್ಮಿಣಿ ಬಾಯಿರವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/13 ಕಲಂ 323 324 504 506 498() ಜೊತೆಗೆ 34 .ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ಮೋಹನ್ ದಾಸ್ ಹೆಗ್ಡೆ ತಂದೆ:ದಿ/ಮಹಾಲಿಂಗ ಹೆಗ್ಡೆ ವಾಸ: ಯಡ್ಯಾಡಿ ಮತ್ಯಾಡಿ ಗ್ರಾಮ ಕುಂದಾಪುರ ತಾಲೂಕು ಎಂಬವರ ಮಗಳು ನೀತಾ ಹಾಗೂ ಅವಳ ಗಂಡ ಆರೋಪಿ ಉಮೇಶನಿಗೆ ವಿವಾಹ ವಿಚ್ಛೇದನವಾಗಿ ನ್ಯಾಯಾಲಯದಲ್ಲಿ ತೀರ್ಪ ಆಗಿದ್ದು, ದಿನಾಂಕ 03/05/2013 ರಂದು ಆರೋಪಿ ಉಮೇಶನು ಕುಂದಾಪುರ ತಾಲೂಕು ಯಡ್ಯಾಡಿ-ಮತ್ಯಾಡಿ ಗ್ರಾಮದಲ್ಲಿರುವ ಮನೆಯ ಜಾಗಕ್ಕೆ ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಅಕ್ರಮ ಪ್ರವೇಶ ಮಾಡಿ ಚೂರಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು  ನೀತಾಳನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಟ್ಟರೆ ಸರಿ ಇಲ್ಲದಿದ್ದರೆ ನಿಮ್ಮೆಲ್ಲರನ್ನು ಇದೇ ಚೂರಿಯಿಂದ ಇರಿದು ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮೋಹನದಾಸ್ ಹೆಗ್ಡೆ ರವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 129 /13 ಕಲಂ 447 506 507 .ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಂಕರನಾರಾಯಣ: ದಿನಾಂಕ 06-05-2013 ರಂದು ಉಮೇಶ್‌ ಪೂಜಾರಿ  ತಂದೆ: ಶಂಕರ ಪೂಜಾರಿ ವಾಸ: ಹಾಲು ಡೈರಿಯ ಹತ್ತಿರ ಕಂಚಾರು ರಸ್ತೆ ಆಂಪಾರು   ಗ್ರಾಮ , ಕುಂದಾಪುರ  ತಾಲೂಕು ಎಂಬವರ ಮನೆಗೆ ಆರೋಪಿತರುಗಳಾದ 1).ಬಾಸ್ಕರ್‌ ವಾಸ: ಆಂಪಾರು ಗ್ರಾಮ ಕುಂದಾಪುರ ತಾಲೂಕು 2). ರಾಮ ವಾಸ: ಕಂಚಾರು ಗ್ರಾಮ ಆಂಪಾರು  3) ಜೋತಿ ವಾಸ: ಕಂಚಾರು ಗ್ರಾಮ ಆಂಪಾರು 4) ಬೇಬಿ ವಾಸ: ಕಂಚಾರು ಗ್ರಾಮ ಆಂಪಾರು 5) ಲಕ್ಮೀ ವಾಸ: ಕಂಚಾರು ಗ್ರಾಮ ಆಂಪಾರುರವರುಗಳು  ಅಕ್ರಮ ಕೂಟ ಸೇರಿ ಕೈಯಲ್ಲಿ ಮಾರಕ ಆಯುದಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಉಮೇಶ್‌ ಪೂಜಾರಿ  ರವರ ತಲೆಯ ಹಿಂಬಾಗ ಹಾಗೂ ಬಲಕಾಲಿಗೆ ಕಡಿದು ಹಲ್ಲೆ ನಡೆಸಿದ್ದು ಬಾಸ್ಕರ್‌ ಎಂಬಾತನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಉಮೇಶ್‌ ಪೂಜಾರಿ ರವರು ಆರೋಪಿಗಳ ವಿರುದ್ಧ  ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/13  ಕಲಂ 143,147,148, 447,504,324,506,149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಂಕರನಾರಾಯಣ: ದಿನಾಂಕ 06-05-2013 ರಂದು ಆರೋಪಿತರುಗಳಾದ  ಉಮೇಶ್ಪೂಜಾರಿ ವಾಸ: ಆಂಪಾರು ಗ್ರಾಮ ಕುಂದಾಪುರ ತಾಲೂಕು 2). ಮೋಹನ್ಪೂಜಾರಿ ವಾಸ: ಕಂಚಾರು ಗ್ರಾಮ ಆಂಪಾರು   3) ಮಂಜು ಪೂಜಾರಿ  ವಾಸ: ಕಂಚಾರು ಗ್ರಾಮ ಆಂಪಾರು 4) ಕೀರ್ತಿ @ ಕಿಟ್ಟಿ ವಾಸ: ಕಂಚಾರು ಗ್ರಾಮ ಆಂಪಾರು 5)  ಗೀತಾ ಪೂಜಾರ್ತಿ ವಾಸ: ಕಂಚಾರು ಗ್ರಾಮ ಆಂಪಾರು 6) ಮಮತಾ ಪೂಜಾರ್ತಿ ವಾಸ: ಕಂಚಾರು ಗ್ರಾಮ ಆಂಪಾರು 7) ಯಶೋದಾ  ಪೂಜಾರ್ತಿ ವಾಸ: ಕಂಚಾರು ಗ್ರಾಮ ಆಂಪಾರುರವರುಗಳು  ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ರಾಮ ಪೂಜಾರಿ  ತಂದೆ: ಮಂಜು ಪೂಜಾರಿ ವಾಸ:  ಕಂಚಾರು ರಸ್ತೆ ಆಂಪಾರು   ಗ್ರಾಮ , ಕುಂದಾಪುರ  ತಾಲೂಕುರವರ  ಅಕ್ಕನ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಯು ಉಮೇಶ್ಪೂಜಾರಿಯು ಬ್ಯಾಟ್‌ನಿಂದ 2 ನೇ ಆರೋಪಿಯು ರಾಡ್‌ನಿಂದ ಮೂರನೇ ಆರೋಪಿಯು ಮರದ ದೊಣ್ಣೆಯಿಂದ ರಾಮ ಪೂಜಾರಿರವರ ಮೇಲೆ ಹಲ್ಲೆ ನಡೆಸಿ  ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲಾ ಮುಂದೆ ನಿಮ್ಮನ್ನು ಕೊಂದೆ ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ರಾಮ ಪೂಜಾರಿರವರು  ಆರೋಪಿಗಳ ವಿರುದ್ಧ  ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/13 ಕಲಂ 143,147,148, 447,504,324,506,149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವಿಗೆ ಪ್ರಯತ್ನ
  • ಪಡುಬಿದ್ರಿ: ದಿನಾಂಕ 30.04.2013  ರಂದು ಬೆಳಿಗ್ಗೆ 07:30 ಗಂಟೆಯಿಂದ ದಿನಾಂಕ. 03.05.13 ರಂದು 08:00 ಗಂಟೆಯ ನಡುವೆ ಸಿರಿದಾಮ ಅಬ್ಬಾಸ್ ಗುಡ್ಡೆ, ಪಡುಬಿದ್ರಿ ಕೆ. ಆನಂದ (52), ತಂದೆ: ಕೆ. ಚಂದು, ವಾಸ:- ಸಿರಿದಾಮ ಅಬ್ಬಾಸ್ ಗುಡ್ಡೆ, ಪಡುಬಿದ್ರಿ, ಉಡುಪಿ ತಾಲೂಕು ಎಂಬವರ  ಮನೆಯಲ್ಲಿ ಯಾರೋ ಕಳ್ಳರು ಎದುರು ಬಾಗಿಲಿನ ಬೀಗ ಹಾಕಿರುವ ಚಿಲಕವನ್ನು ಮುರಿದು ಹಾಗೂ ಕಿಟಕಿ ಮುರಿದು ಮನೆಯ ಒಳಗೆ ಪ್ರವೇಶಿಸಿ ಕಳವಿಗೆ ಪ್ರಯತ್ನಿಸಿದ್ದು, ಯಾವುದೇ ಸೊತ್ತು ಕಳವು ಆಗಿರುವುದಿಲ್ಲ ಎಂಬುದಾಗಿ ಕೆ. ಆನಂದ ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/13  ಕಲಂ 454,457,511   ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: